ಲಖಿಂಪುರ ಖೇರಿ ಹಿಂಸಾಚಾರದ ಕುರಿತು ಟ್ವಿಟ್; ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ವರುಣ್ ಗಾಂಧಿ, ಮೇನಕಾ ಗಾಂಧಿಯನ್ನು ಕೈಬಿಟ್ಟ ಬಿಜೆಪಿ

Source: VB | By I.G. Bhatkali | Published on 8th October 2021, 7:01 PM | National News |

ಹೊಸದಿಲ್ಲಿ: ಬಿಜೆಪಿ ತನ್ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಪರಿಷ್ಕರಿಸಿದ್ದು, ಪಟ್ಟಿಯಿಂದ ಹಿರಿಯ ನಾಯಕರಾದ ವರುಣ್ ಗಾಂಧಿ ಹಾಗೂ ಮೇನಕಾ ಗಾಂಧಿಯನ್ನು ಕೈಬಿಟ್ಟಿದೆ.

ಉತ್ತರಪ್ರದೇಶದ ಲಖಿಂಪುರ ಸೇರಿ ಹಿಂಸಾಚಾರ ಖಂಡಿಸಿ ಬಿಜೆಪಿ ಸಂಸದ ವರುಣ್ ಗಾಂಧಿ ಟ್ವಿಟ್ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿರುವ ನಡುವೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ 80 ಸದಸ್ಯರ ಪಟ್ಟಿಯಲ್ಲಿ ವರುಣ್ ಗಾಂಧಿ ಹಾಗೂ ಅವರ ತಾಯಿ ಮೇನಕಾ ಗಾಂಧಿ ಹೆಸರನ್ನು ಕೈಬಿಡಲಾಗಿದೆ.

ಲಖಂಪುರ ಬೇರಿ ಹಿಂಸಾಚಾರದ ಘಟನೆಯ ಆರೋಪಿಯಾಗಿರುವ ಕೇಂದ್ರ ಸಚಿವರ ಪುತ್ರನ ಬಗ್ಗೆ ನಿ ಎತ್ತಿರುವ ಏಕೈಕ ಬಿಜೆಪಿ ನಾಯಕ ವರುಣ್ ಗಾಂಧಿ, ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ವರುಣ್ ಗಾಂಧಿ ನಿರಂತರ ಮಾತನಾಡುತ್ತಿದ್ದಾರೆ. ಅವರ ತಾಯಿ ಕೂಡ ರೈತರ ಸಮಸ್ಯೆಗಳ ಬಗ್ಗೆ ಅನುಕಂಪ ಹೊಂದಿದ್ದಾರೆ. ರೈತರ ಬಗ್ಗೆ ಅನುಕಂಪ ಹೊಂದಿರುವ ಕೇಂದ್ರದ ಮಾಜಿ ಸಚಿವ ಬಿರೇಂರ್ದ ಸಿಂಗ್ ಅವರನ್ನು ಕೂಡ ಕಾರ್ಯಕಾರಿ ಸಮಿತಿಯಿಂದ ಕೈಬಿಡಲಾಗಿದೆ.

ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ವೀಡಿಯೊ ತುಣುಕನ್ನು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವರುಣ್ ಗಾಂಧಿ, ಪ್ರತಿಭಟನಾ ನಿರತ ರೈತರನ್ನು ಕೊಲೆಯ ಮೂಲಕ ಮೌನವಾಗಿರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

“ವೀಡಿಯೊದಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಕೊಲೆ ಮೂಲಕ ಪ್ರತಿಭಟನಾಕಾರರನ್ನು ಮೌನವಾಗಿರಿಸಲು ಸಾಧ್ಯವಿಲ್ಲ. ಅಮಾಯಕ ರೈತರು ಚೆಲ್ಲಿದ ರಕ್ತಕ್ಕೆ ಯಾರು ಜವಾಬ್ದಾರಿ ಎಂಬುದು ತಿಳಿಯಬೇಕು. ರೈತರ ಮನಸ್ಸಿಗೆ ಕ್ರೌರ್ಯ ಪ್ರವೇಶಿಸುವ ಮುನ್ನ ಅವರಿಗೆ ನ್ಯಾಯ ಒದಗಿಸಬೇಕು'' ಎಂದು ವರುಣ್ ಗಾಂಧಿ ಟೀಟ್ ಮಾಡಿದ್ದರು.

Read These Next