ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನಾಚರಣೆ ನಿಮಿತ್ತ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ಸೆ.೧೩ ರಿಂದ ೨೨ ರ ವರೆಗೆ “ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ” ಎಂಬ ಶಿರ್ಷಿಕೆಯಡಿ ಅಭಿಯಾನವನ್ನು ನಡೆಸುತ್ತಿದ್ದು ಯುವ ಜನರಿಗಾಗಿ ಉ.ಕ ಜಿಲ್ಲಾ ಮಟ್ಟದ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಿದೆ.
ಕೆಡುಕು ಮುಕ್ತ ಸಮಾಜ, ನೈತಿಕ ಮೌಲ್ಯಗಳು, ಸಾಮಾಜಿಕ ಪಿಡುಗುಗಳು ಈ ಎಲ್ಲ ವಿಷಯಗಳ ಕುರಿತು ಪ್ರವಾದಿ ಮುಹಮ್ಮದ್ ಪೈಗಂಬರರ ಬೋಧನೆಗಳೇನು? ಸದ್ಯದ ಪರಿಸ್ಥಿತಿಯಲ್ಲಿ ಪ್ರವಾದಿ ಮುಹಮ್ಮದ್ ರ ಸಂದೇಶ ಎಷ್ಟು ಪ್ರಸ್ತುತ ಎಂಬುದರ ಕುರಿತು “ರೀಲ್ಸ್” ಮಾಡುವುದರ ಮೂಲಕ ಯುವಜನತೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ರೀಲ್ಸ್ ಕನ್ನಡ ಭಾಷೆಯಲ್ಲಿದ್ದು, ತಮ್ಮ ತಮ್ಮ ಯೂಟ್ಯೂಬ್ ಚಾನೆಲ್, ಫೇಸ್ಬುಕ್, ಇನ್ಷ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿ ಅದರ ಲಿಂಕ್ ನ್ನು 9886455416 ಗೆ ಕಳುಹಿಸಿಕೊಡಬಹುದು. ಸೋಶಿಯಲ್ ಮೀಡಿಯಾ ಬಳದೆ ಇದ್ದವರು ತಮ್ಮ ರೀಲ್ಸ್ ಗಳನ್ನು ವಿಡಿಯೋ ಮಾಡಿ ಸೆ.15 ರ ಒಳಗೆ ಮೇಲಿನ ಮೊಬೈಲ್ ನಂಬರ್ ವಾಟ್ಸಪ್ ಗೆ ಕಳುಹಿಸಿಕೊಡಬೇಕು. ಸ್ಪರ್ಧಾಳುಗಳು ತಮ್ಮ ಹೆಸರು, ವಯಸ್ಸು, ವಿಳಾಸ ಮತ್ತು ವಾಟ್ಸಪ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.
ವಿಜೇತರಿಗೆ ಕ್ರಮವಾಗಿ ರೂ.7000, 5000, 3000 ನಗದು ಹಾಗೂ ರೂ.1000 ಗಳ ಮೂರು ಸಮಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನಿಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೇಲಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸೀರತ್ ಅಭಿಯಾನದ ಸಂಚಾಲಕ ಎಂ.ಆರ್.ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.