ವಾರಸದಾರರು ಇಲ್ಲದೆ ನಿಂತಿರುವ ನೀಲಿ ಬಣ್ಣದ ಬೈಕ್

Source: S O News Service | By Office Staff | Published on 22nd January 2020, 8:18 PM | Coastal News |

ಮುಂಡಗೋಡ :  ನೀಲಿ ಬಣ್ಣದ  ಕೆ.ಎ.31 ವಾಯ್ 3659 ನಂಬರ ಹೊಂದಿರುವ   ದ್ವಿಚಕ್ರ ವಾಹನ  ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಭವಾನಿ ಟೆಕ್ಸ್‍ಟೈಲ್ಸ್ ಎದುರು ಪೂರ್ವಾಭಿಮುಖವಾಗಿ ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿ ಸುಮಾರು 4-5 ದಿನಗಳಿಂದ ಅನಾಥವಾಗಿ ನಿಂತಿದೆ.

ಬೈಕ್ ನ ಡೂಮ್ ಮೇಲೆ ಶಿವಾಜಿ ಚಿತ್ರದ ಜತೆಯಲ್ಲಿ ಏಕ್ ಮರಾಠ ಲಾಕ್ ಮರಾಠ ಎಂದು ಬೈಕ್ ವಾರಸ್‍ದಾರರು ಬರೆಸಿದ್ದು ಇರುತ್ತದೆ. 4-5 ದಿನಗಳಿಂದ ವಾಹನವು ನಿಂತಿರುವುದು ಸಾಕಷ್ಟು  ಅನುಮಾನ ಮೂಡುವಂತಾಗಿದೆ ಈ ಕುರಿತು ಸಂಬಂದಿಸಿದ ಅಧಿಕಾರಿಗಳು ಈ ಕುರಿತು ಮುತುವರ್ಜಿ ವಹಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ. ಈ ಕುರಿತು ಭವಾನಿ ಟೆಕ್ಸ್‍ಟೈಲ್ಸ್ ಮಾಲಿಕ  ಅನಿಲ ಮಾಹಿತಿ ನೀಡಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...