ಭಟ್ಕಳ ಬೆಳ್ನಿಯಲ್ಲಿ ಬೈಕ್ ಅಪಘಾತ; ಇಬ್ಬರು ಗಂಭೀರ

Source: S O News | By I.G. Bhatkali | Published on 2nd January 2022, 2:14 PM | Coastal News |

ಭಟ್ಕಳ: ತಾಲ್ಲೂಕಿನ ಬೆಳ್ನಿಯ ಬಂದರ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ರವಿವಾರ ನಡೆದಿದೆ.

ಗಾಯಗೊಂಡ ಬೈಕ್ ಸವಾರ  ಮಂಜುನಾಥ ಸುಕ್ರ ಗೊಂಡ (31) ತನ್ನ ತಾಯಿ ದುರ್ಗಿ ಎಸ್. ಗೊಂಡ (50) ಮತ್ತು ತನ್ನ ಸಹೋದರನ ಆರು ವರ್ಷದ ಮಗ ಅಕಿಲ್ ಗೊಂಡ ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಸಂಶುದ್ದೀನ್ ವೃತ್ತದಿಂದ ತಲಗೋಡ್  ಕಡೆಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಅಡ್ಡ ಬಂದಿದ್ದ ನಾಯಿಯನ್ನು ತಪ್ಪಿಸಲು ಹೋಗಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬಿದ್ದು  ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಕುರಿತು ಭಟ್ಕಳ ಗ್ರಾಮೀಣ ಠಾಣೆ ಪೋಲಿಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.

Read These Next

ಕೋವಿಡ್ ಹಿನ್ನಲೆ: ಹಲ್ಲುನೋವು, ತಲೆನೋವಿಗೆಂದು ಆಸ್ಪತ್ರೆಗೆ ಹೋಗಬೇಡಿ, ತುರ್ತು ಚಿಕಿತ್ಸೆ ಇದ್ದಲ್ಲಿ ಮಾತ್ರ ತೆರೆಳಿಯಿಂದ ಸರಕಾರ

ಕೇವಲ ಅನಾರೋಗ್ಯ ಪೀಡಿತರು ಹಾಗೂ ತುರ್ತು ಚಿಕಿತ್ಸೆ ಅವಶ್ಯಕತೆ ಇರುವವರು ಮಾತ್ರ ಆಸ್ಪತ್ರೆಗಳಿಗೆ, ಸೂಪರ್ ಸ್ಪೆಶಾಲಿಟಿ ...

ಭಟ್ಕಳದಲ್ಲಿ ಕೋವಿಡ್ ನಿಯಮ ಇನ್ನಷ್ಟು ಕಠಿಣ; ಮುರುಡೇಶ್ವರ ಬ್ರಹ್ಮರಥೋತ್ಸವ ರದ್ಧತಿಗೆ ಆದೇಶ; ಸೋಡಿಗದ್ದೆ ಜಾತ್ರೆಗೂ ಸಂಕಟ

ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಿಸುತ್ತಿದ್ದು, ಕೋವಿಡ್ ತಡೆಗೆ ಇನ್ನಷ್ಟು ಕಠಿಣ ನಿಯಮಗಳನ್ನು ಹೇರಲು ...