ಬೈಕ್ ಅಪಘಾತ : ಬೈಕ್ ಸವಾರ ಸಾವು

Source: sonews | By Staff Correspondent | Published on 31st May 2020, 7:44 PM | Coastal News | Don't Miss |

ಮುಂಡಗೋಡ : ಸ್ವಯಂ ಕೃತ ಅಪಘಾತ ಪಡಿಸಿಕೊಂಡು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮುಂಡಗೋಡ-ಕಲಘಟಗಿ ರಸ್ತೆಯ ಇಂದಿರಾನಗರ ಪ್ಲಾಟ್ ಹಿರೇಕೆರಿಯ ಹತ್ತಿರ ಶನಿವಾರ ರಾತ್ರಿ ಸಂಭವಿಸಿದೆ.

ಮೃತಪಟ್ಟವನನ್ನು  ಹುಬ್ಬಳ್ಳಿಯ ವಾ.ಕ.ರ.ಸಾ.ಸಂಸ್ಥೆ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ಸಂಸ್ಥೆಯಲ್ಲಿ ಪಿವನ್ ಯಾಗಿ ಕೆಲಸ   ಮಾಡುತ್ತಿದ್ದ ಕಾಡಪ್ಪ ಭೀಮಪ್ಪ ಮುದ್ದವಗೋಳ(23) ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ 11 ಗಂಟೆಗೆ ಕಲಘಟಗಿ ತಾಲೂಕ ಮಾರ್ಗವಾಗಿ ಮುಂಡಗೋಡ ಬರುತ್ತಿದ್ದಾಗ ಮುಂಡಗೋಡ ನ ಇಂದಿರಾನಗರ ಪ್ಲಾಟ್ ಹತ್ತಿರ ಬೈಕ್ ಮೇಲಿನ ನಿಯಂತ್ರಣ ತಪ್ಪಿ ಕೆರೆ ದಡದಲ್ಲಿ ಆಳವಡಿಸಿದ ಕಬ್ಬಿಣದ ಕಲವರ್ಟಗೆ ಅಪಘಾತ ಪಡಿಸಿ ತಲೆಗೆ ಹಾಗೂ ಮುಖಕ್ಕೆ ಭಾರಿ ಗಾಯನೋವು ಪಡಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ ಈ ಕುರಿತು ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
 

Read These Next

ಕೋವಿಡ್-19 ತಡೆಗಟ್ಟಲು ವರ್ಗಾವಣೆ ಮಾಡಿದರೂ ಪರವಾಗಿಲ್ಲ ಕಠಿಣ ಕ್ರಮ ಕೈಗೊಂಡು ಕೊರೊನ ನಿಯಂತ್ರಿಸಲು ಪ್ರಯತ್ನಿಸುತ್ತೇನೆ : ತಹಶೀಲ್ದಾರ ಮುಂದಲಮನಿ

ಮುಂಡಗೋಡ : ನನ್ನನ್ನು ಇಲ್ಲಿಂದ ವರ್ಗಾವಣೆ ಮಾಡಿದರು ಪರವಾಗಿಲ್ಲ ಕೋವಿಡ್ 19 ನಿಯಂತ್ರಣಕ್ಕೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ. ...