ಬಲೆಗೆ ಬಿದ್ದ ದೊಡ್ಡ ಮೀನು. ಪುನಃ ಸಮುದ್ರಕ್ಕೆ ಬಿಟ್ಟ ಮೀನುಗಾರರು.

Source: SO News | By Laxmi Tanaya | Published on 23rd January 2021, 7:54 AM | Coastal News | Don't Miss |

ಗೋಕರ್ಣ :ಇಲ್ಲಿನ ಬಂದರಿನ ಯಾಂತ್ರಿಕ ದೋಣಿಯೊಂದರ ಮೀನುಗಾರರ ಬಲೆಗೆ ಬಿದ್ದಿದ್ದ ಬಾರೀ ಮೀನು ಬಿದ್ದಿದೆ. 

ವ್ಹೇಲ್ ಶಾರ್ಕ್ ಜಾತಿಯ ಮೀನಾಗಿದ್ದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಈ ಮೀನು ಹಿಡಿಯುವುದು ನಿಷೇಧ ಇದೆ. ಹೀಗಾಗಿ  ಮೀನುಗಾರರು ಪೋಟೋ ತೆಗೆಸಿಕೊಂಡು ವಾಪಸ್  ಕಡಲಿಗೆ ಬಿಟ್ಟಿದ್ದಾರೆ.

 ಕುಮಟಾ ತಾಲೂಕಿನ ಗೋಕರ್ಣದ ತಡದಿ ಬಂದರಿನಿಂದ ಹೊರಟ  ಮೀನುಗಾರಿಕೆ ಬೋಟಿಗೆ ಈ ಮೀನು ಲಭಿಸಿತ್ತು. ಅಂದಾಜು 500 ಕೆಜಿ ತೂಕ 11 ಅಡಿ ಉದ್ದವಿತ್ತು.

ಗುಜರಾತ್ ಕಡಲಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಇವು, ಅರಬ್ಬೀ ಸಮುದ್ರದಲ್ಲೂ ಕಾಣಸಿಗುತ್ತವೆ. ಆದರೆ, ಇದು ಇತ್ತೀಚೆಗೆ ಬಹಳ ಅಪರೂಪವಾಗಿವೆ. ಹೀಗಾಗಿ ಇವುಗಳ ಸಂರಕ್ಷಣೆಗಾಗಿ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಕಡಲಜೀವ ವಿಜ್ಞಾನ ಕೇಂದ್ರದ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...