ಭರ್ಜರಿ ಗೆಲುವಿನತ್ತ ಜೋ ಬೈಡಾನ್ ; ಅಮೇರಿಕಾದ ಇತಿಹಾಸದಲ್ಲೆ ದಾಖಲೆಯ ಮತಗಳಿಂದ ಮುಂದು

Source: sonews | By Staff Correspondent | Published on 5th November 2020, 3:35 PM | Global News |

ನ್ಯೂಯಾರ್ಕ್ :ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅಮೆರಿಕದ ಚುನಾವಣಾ ಇತಿಹಾಸದಲ್ಲಿ ಇತರ ಯಾವುದೇ ಅಧ್ಯಕ್ಷೀಯ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಗೆದ್ದಿದ್ದಾರೆ. ಈ ಮೂಲಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

 ನವೆಂಬರ್ 4 ರಂದು ಬೈಡನ್ 70.7 ಮಿಲಿಯನ್‌ಗೂ ಅಧಿಕ ಮತಗಳನ್ನು ಪಡೆದಿದ್ದು ಇದು ಈತನಕ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಪಡೆದಿರುವ ಮತಗಳ ದಾಖಲೆ ಮುರಿದಿದೆ ಎಂದು ನ್ಯಾಶನಲ್ ಪಬ್ಲಿಕ್ ರೇಡಿಯೊ(ಎನ್‌ಪಿಆರ್)ವರದಿ ಮಾಡಿದೆ.

ಟ್ರಂಪ್ ಅವರು 67.32 ಮಿಲಿಯನ್ ಮತಗಳೊಂದಿಗೆ ಒಬಾಮಾ ಅವರ ಮತಗಳಿಕೆಯ ದಾಖಲೆ ಸಮೀಪದಲ್ಲಿದ್ದಾರೆ. 2008ರಲ್ಲಿ ಒಬಾಮ ಸ್ಥಾಪಿಸಿದ್ದ 69,498,516 ಮತಗಳ ದಾಖಲೆ ಯನ್ನು ಬೈಡನ್ ಮೀರಿಸಿದ್ದಾರೆ.

ಶ್ವೇತಭವನಕ್ಕಾಗಿ ನಡೆದ ಬಿರುಸಿನ ಚುನಾವಣಾ ಮತ ಹೋರಾಟದಲ್ಲಿ ಬೈಡನ್ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಿಂತ 2.7 ಮಿಲಿಯನ್ ಮತಗಳಿಗಿಂತ ಮುಂದಿದ್ದಾರೆ.

Read These Next

ಕಾಬೂಲ್: ಅಫ್ಘಾನಿಸ್ತಾನ: ಕಂದಹಾರ್‌ಗೆ ತಾಲಿಬಾನ್ ಲಗ್ಗೆ ಭಾರತದಿಂದ ರಾಯಭಾರ ಕಚೇರಿ ತೆರವು

ಅಫ್ಘಾನಿಸ್ತಾನದ ದಕ್ಷಿಣ ಪ್ರಾಂತದ ಕಂದಹಾರ್ ನಲ್ಲಿ ಇನ್ನಷ್ಟು ಪ್ರದೇಶ ತಾಲಿಬಾನ್ ಪಡೆಗಳ ನಿಯಂತ್ರಣಕ್ಕೆ ಬಂದಿದ್ದು ನಗರದಲ್ಲಿ ...

ರಿಯೊಡಿಜನೈರೊ: ಕೋವ್ಯಾಕ್ಸಿನ್ ಖರೀದಿ ಒಪ್ಪಂದ ವಿವಾದ: ಬ್ರೆಝಿಲ್ ಅಧ್ಯಕ್ಷರ ವಿರುದ್ಧ ತನಿಖೆಗೆ ಸುಪ್ರೀಂ ಒಪ್ಪಿಗೆ

ಭಾರತದಿಂದ ಕೋವ್ಯಾಕ್ಸಿನ್ ಲಸಿಕೆ ಖರೀದಿ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ಎಸಗಿದ ಆರೋಪ ಎದುರಿಸುತ್ತಿರುವ ಬ್ರೆಝಿಲ್ ಅಧ್ಯಕ್ಷ ಜೈರ್ ...

ಹಜ್ಜ್ ಯಾತ್ರೆಗೆ ಹೊರಗಿನವರಿಗೆ ಪರ್ವೇಶ್ ವಿಲ್ಲಾ; ಈ ವರ್ಷವು ಸೀಮಿತ್ ಮಂದಿಗೆ ಅವಕಾಶ'

ಕೊರೊನಾ ಸೋಂಕಿನಿಂದಾಗಿ ಈ ಬಾರಿ ಹಜ್ ಯಾತ್ರೆಗೆ ಸೌದಿ ಅರೇಬಿಯಾದ  60 ಸಾವಿರ ಮಂದಿಗೆ ಮಾತ್ರ ಅವಕಾಶ ಕಲ್ಪಿಸಿ ಸೌದಿ ಅರೇಬಿಯಾ ಸರ್ಕಾರ ...

ಏ.10 ರಿಂದ 20 ರ ವರೆಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ಕರ್ಫ್ಯೂಜಾರಿ-ಜಿಲ್ಲಾಧಿಕಾರಿ

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂದಿಸಿದಂತೆ ಜಿಲ್ಲಾಡಳಿತ ಎಲ್ಲಾ ಅವಶ್ಯ ಕ್ರಮಗಳನ್ನು ...