ಬೀದರನಲ್ಲಿ ಅಬಕಾರಿ ದಾಳಿ : 212 ಗಾಂಜಾ ಗಿಡಗಳು ವಶಕ್ಕೆ

Source: SO News | By Laxmi Tanaya | Published on 9th October 2020, 9:53 PM | State News | Don't Miss |

ಬೀದರ : ಬೀದರನ ಅಬಕಾರಿ ಇಲಾಖೆಯ ವಿವಿಧ ಘಟಕಗಳಿಂದ  ವಿವಿಧೆಡೆ ದಾಳಿ ಕಾರ್ಯಾಚರಣೆ ನಡೆಯಿತು. 

ಹುಮನಾಬಾದ್ ವಲಯ ವ್ಯಾಪ್ತಿಯ ಚಿಟ್ಟಗುಪ್ಪ ತಾಲ್ಲೂಕಿನ ಭದ್ರಾಪುರ ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿನ ಗುಡ್ಡಗಾಡು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿರುವ ಭೂಮಿಯಲ್ಲಿ ತೊಗರಿ ಬೆಳೆಯ ನಡುವೆ 3 ಅಡಿ ಎತ್ತರದಿಂದ 7 ಅಡಿ ಎತ್ತರವರೆಗಿನ ಸುಮಾರು 212 ಗಾಂಜಾ ಗಿಡಗಳನ್ನು ಪತ್ತೆ ಹಚ್ಚಲಾಗಿದೆ.

 ಗಿಡಗಳ ಬುಡ ಸಮೇತ ತೆಗೆದುಹಾಕಿ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬೀದರ ಉಪ ವಿಭಾಗದ ಅಬಕಾರಿ ನಿರೀಕ್ಷಕರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

ದಾಳಿ ವೇಳೆಯಲ್ಲಿ ಅಬಕಾರಿ ನಿರೀಕ್ಷಕರುಗಳಾದ ರವೀಂದ್ರ ಪಾಟೀಲ್, ಆನಂದ ಉಕ್ಕಲಿ, ಕೆ.ಎಸ್. ರಾಜಶೇಖರ, ಅಬಕಾರಿ ಉಪ ನಿರೀಕ್ಷಕರಾದ ಜೆಟ್ಟಪ್ಪಾ, ಸಿಬ್ಬಂದಿ ಅಬಕಾರಿ ರಕ್ಷಕರಾದ ಚಂದ್ರಕಾAತ, ಹುಷೇನ್ ಸಾಬ್, ವಾಹನ ಚಾಲಕರಾದ ಅಬ್ದುಲ್ ಅತೀಖ್ ಮತ್ತು  ಪವನ್, ಅರಣ್ಯ ರಕ್ಷಕ ಸಿದ್ದಲಿಂಗಪ್ಪ ಮತ್ತು ಗ್ರಾಮ ಲೆಕ್ಕಿಗ ಹನುಮೇಶ್ ಇದ್ದರು. 

ಪ್ರಕರಣದಲ್ಲಿ 212 ಗಾಂಜಾ ಗಿಡಗಳು ಮತ್ತು ಒಂದು ಹೀರೋ ಹೊಂಡಾ ಪ್ಯಾಶನ್ ಪ್ರೋ  ದ್ವಿ-ಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಸುಮಾರು  ಒಂದು ಲಕ್ಷ ರೂಪಾಯಿ  ಮೌಲ್ಯದ ಮಾಲು ಜಪ್ತಿಪಡಿಸಲಾಗಿದೆ. 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...