ಭಟ್ಕಳದ ‘ಗುರುಕವಿ’ ಡಾ.ಫಿತ್ರತ್ ಭಟ್ಕಲಿ ನಿಧನ

Source: sonews | By Staff Correspondent | Published on 19th September 2018, 6:38 PM | Coastal News | State News | Don't Miss |

ಭಟ್ಕಳ: ಇಲ್ಲಿನ ಉರ್ದು ಸಾಹಿತ್ಯದ ‘ಗುರು ಕವಿ’ ಎಂದೇ ಗುರುತಿಸಲ್ಪಟ್ಟಿದ್ದ ಸಾಹಿತಿ, ಕವಿ ಹಾಗೂ ಶಿಕ್ಷಕ ಡಾ.ಮುಹಮ್ಮದ್ ಹುಸೇನ್ ಫಿತ್ರತ್(86) ಮಂಗಳವಾರ ರಾತ್ರಿ ಅಳ್ವಸ್ಟ್ರೀಟ್ ನ ತಮ್ಮ ಸ್ವಗೃಹದಲ್ಲಿ ನಿಧನರಾದರು. 

ಇವರು  ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಭಟ್ಕಳ ನೆಲದಲ್ಲಿ ಉರ್ದು ಸಾಹಿತ್ಯ ವನ್ನು ಗಟ್ಟಿಗೊಳಿಸಿದ್ದ ಇವರು ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಉರ್ದು ಶಿಕ್ಷಕರಾಗಿ ಸೇವೆಸಲ್ಲಿಸಿದ್ದರು. ಕರ್ನಾಟಕ ರಾಜ್ಯ ಉರ್ದು ಅಕಾಡೆಮಿಯ ಸದಸ್ಯರಾಗಿಯೂ ರಾಜ್ಯದ ಸಾಹಿತ್ಯಪ್ರೇಮಿಗಳಲ್ಲಿ ಗುರುತಿಸಿಕೊಂಡಿದ್ದ ಇವರಿಗೆ ಉರ್ದು ಅಕಾಡೆಮಿಯ ಸಾಹಿತ್ಯ ಪ್ರಶಸ್ತಿಗೂ ಬಾಜನರಾಗಿದ್ದು. ಇದುವರೆಗೆ 7ಕವನ ಸಂಕಲನಗಳು ಹೊರಬಂದಿದ್ದು ಇವರ ಕವಿತೆ ಎಸ್.ಎಸ್.ಎಲ್.ಸಿ ಪಠ್ಯಕ್ರಮದಲ್ಲೂ ಆಯ್ಕೆಯಾಗಿತ್ತು. 

ಇವರ ಬರವಣೆಗೆಯು ಶುದ್ಧತೆಯಿಂದ ಕೂಡಿದ್ದು ಪ್ರವಾದಿ ಮುಹಮ್ಮದ್ ಪೈಬಂಗರರ ಸ್ತುತಿ(ನಾತ್) ಸಾಹಿತ್ಯ ಪ್ರಕಾರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಅಪಾರ ಶಿಷ್ಯವರ್ಗವನ್ನು ಹೊಂದಿದ್ದ ಇವರು ಸ್ಥಳೀಯವಾಗಿ ಹಲವಾರು ಬಾರಿ ಸನ್ಮಾನ ಗೌರವಗಳನ್ನು ಪಡೆದುಕೊಂಡಿದ್ದಾರೆ. 
ಇವರ ನಿಧನಕ್ಕೆ ಅಂಜುಮನ್ ಶಿಕ್ಷಣ ಸಂಸ್ಥೆ, ತಂಝೀಮ್, ಇದಾರೆ ಅದಬೆ ಇಸ್ಲಾಮಿ ಹಿಂದ್, ಜಮಾಅತೆ ಇಸ್ಲಾಮಿ ಹಿಂದ್, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವಾರು ಸಂಘಸಂಸ್ಥೆಗಳ ಪ್ರಮುಖರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. 
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...