ಭಟ್ಕಳ: ಮುಂದುವರೆದ ಮಳೆ ಅವಾಂತರ; ಮನೆಗೋಡೆ ಮರಗಳು ಬಿದ್ದು ಲಕ್ಷಾಂತರ ರೂ ಹಾನಿ

Source: sonews | By Staff Correspondent | Published on 11th August 2019, 5:08 PM | Coastal News | Don't Miss |

ಭಟ್ಕಳ: ತಾಲೂಕಿನ ಮಳೆಯ ಆರ್ಭಟ ಮುಂದುವರೆದಿದ್ದು ಶನಿವಾರ ಇಡಿ ದಿನ ಮಳೆ ಸುರಿದರೆ ರವಿವಾರ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದೆ. ಶನಿವಾರ ಇಡಿ ದಿನ ಬಿದ್ದ ಮಳೆಯಿಂದಾಗಿ ರಾತ್ರಿ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಹಲವು ಮನೆಗಳ ಗೋಡೆ ಕುಸಿತ, ಮರಗಳು, ವಿದ್ಯುತ್ ಕಂಬ ಉರುಳಿ ಬಿದ್ದ ಪರಿಣಾಮ ಲಕ್ಷಾಂತರ ಹಾನಿಯಾದ ಬಗ್ಗೆ ವರದಿಯಾಗಿದೆ. 

ಆ.10 ರ ಬೆಳಿಗ್ಗೆ 8ಗಂಟೆ ಯಿಂದ ಆ.11 8ಗಂಟೆ ವರೆಗೆ 24ಗಂಟೆಗಳಲ್ಲಿ 134.2ಮಿಮೀ ಮಳೆ ದಾಖಲಾಗಿದೆ. ಮಳೆಗಾಲದ ಆರಂಭದಿಂದ ಇದುವರೆಗೆ ಭಟ್ಕಳ ತಾಲೂಕಿನಲ್ಲಿ 3002.4ಮಿಮೀ ಮಳೆ ದಾಖಲಾಗಿರುವ ಕುರಿತು ವರದಿಯಾಗಿದೆ.

ಶಿರಾಲಿ 1 ಗ್ರಾಮದ ಹಿರೆಹಿತ್ಲ ಮಜರೆಯ ನಾಗಮ್ಮ ಕೋಂ ಮಂಜಪ್ಪ ನಾಯ್ಕ ಇವರ ಮನೆ ಗಾಳಿ ಮಳೆಗೆ ಹಂಚು ಹಾರಿಹೊಗಿದ್ದು ಅಂದಾಜು 10,000 ಹಾನಿಯುಂಟಾಗಿದೆ. ತಾಲೂಕಿನ ಹೆಬಳೆ ಗ್ರಾಮದ ಹೊನ್ನೆಗದ್ದೆ ಮಜರೆಯಲ್ಲಿ ಶುಕ್ರವಾರ ರಾತ್ರಿ ಬಿಸಿದ ಭಾರಿ ಮಳೆ ಗಾಳಿಗೆ 1.ನಾಗಮ್ಮ ಮೊಳಿಯ ಮೊಗೆರ.50000/- 2.ನಾಗಯ್ಯ ಗೊಯ್ದ ಮೊಗೆರ.8000/- 3.ನಾಗಮ್ಮ ನಾರಾಯಣ ಮೊಗೆರ.8000/- 4.ಲಕ್ಷ್ಮಿ ಮಂಜುನಾಥ ಮೊಗೆರ.3000/- ಮತ್ತು 5.ಗಣಪತಿ ಸೋಮಯ್ಯ ಮೊಗೆರ ಇವರ ಮೀನುಗಾರಿಕೆ ದೊಣಿ ಸಮುದ್ರದ ನೀರು ಮೇಲೆ ಉಕ್ಕಿ ಬಂದ ರಬಸಕ್ಕೆ ದೊಣಿ ಕಲ್ಲಿಗೆ ತಾಗಿ 10000/- ರೂಪಾಯಿ ಹಾನಿಯಾಗಿರುತ್ತದೆ. 

ಮಾದೇವಿ ವೆಂಕಟ್ರಮಣ ನಾಯ್ಕ ಸಾ//ಮುಂಡಳ್ಳಿ ಇವರ ವಾಸ್ತವ್ಯದ ಮನೆಯ ಮೇಲೆ ಕಾಡು ಜಾತಿಯ ಮರ ಬಿದ್ದು ಮನೆಯ ಹೆಂಚುಗಳು ಪಕಾಸುಗಳಿಗೆ ಹಾನಿಯಾಗಿದ್ದು ಜನ-ಜಾನುವಾರುಗಳಿಗೆ ಪ್ರಾಣ ಹಾನಿಯಾಗಿದ್ದು ಇರುವುದಿಲ್ಲ ಅಂದಾಜು 5000 ಹಾನಿಯಾಗಿರುತ್ತದೆ.

ನಾರಾಯಣಿ ದುರ್ಗಯ್ಯ ದೇವಾಡಿಗ ಸಾ//ಮುಂಡಳ್ಳಿ ಇವರ ವಾಸ್ತವ್ಯದ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದ್ದು ಮನೆಯ ಹೆಂಚುಗಳು ಪಕಾಸು ಗಳಿಗೆ ಹಾನಿಯಾಗಿದ್ದು ಅಂದಾಜು 10000ಹಾನಿಯಾಗಿರುತ್ತದೆ ಜನ-ಜಾನುವಾರುಗಳಿಗೆ ಪ್ರಾಣ ಹಾನಿಯಾಗಿದ್ದು ಇರುವುದಿಲ್ಲ.

 

Read These Next

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ 

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂರ್ವ ಕಾಲೇಜಿನ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಹೈಸ್ಕೂಲಿನ ಪ್ರೌಢಶಾಲಾ ...