ಭಟ್ಕಳ: ಎಐಟಿಎಂನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್

Source: SOnews | By Staff Correspondent | Published on 27th October 2024, 4:48 PM | Coastal News | Don't Miss |

ಭಟ್ಕಳ: ಮಂಗಳೂರಿನ ಇನ್‌ಯೂನಿಟಿಯ ಸಹಯೋಗದಲ್ಲಿ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ (AITM) ಮೊದಲ ವರ್ಷದ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (BE) ವಿದ್ಯಾರ್ಥಿಗಳಿಗಾಗಿ ಬ್ರಿಡ್ಜ್ ಕೋರ್ಸ್ ಆಯೋಜಿಸಿತ್ತು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಅಗತ್ಯ ಎಂಜಿನಿಯರಿಂಗ್ ತಂತ್ರಜ್ಞಾನ, ಉಪಕರಣಗಳ ಬಳಕೆ, ಹಾಗೂ ಪ್ರಯೋಗಶಾಲಾ ಕಾರ್ಯಗಳಲ್ಲಿ ಪರಿಣತಿಗೊಳ್ಳುವಂತೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿತ್ತು ಎಂದು ಹೇಳಲಾಗಿದೆ.

ಈ ಕೋರ್ಸ್‌ನ ವೈಶಿಷ್ಟ್ಯವೆಂದರೆ ಸಂವಾದಾತ್ಮಕ ತರಗತಿಗಳು, ಪ್ರಾಜೆಕ್ಟ್‌ಗಳ ಸರಣಿ, ಹಾಗೂ ಪ್ರಾಯೋಗಿಕ ತರಬೇತಿ ಅವಧಿಗಳು. ವಿದ್ಯಾರ್ಥಿಗಳು ಅನೇಕ ಎಂಜಿನಿಯರಿಂಗ್ ಉಪಕರಣಗಳ ಪರಿಣಾಮಕಾರಿ ಬಳಕೆ, ಮತ್ತು ಹುದ್ದೆಗಳ ಸವಾಲುಗಳನ್ನು ನಿಭಾಯಿಸುವುದನ್ನು ಕಲಿಯಲು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಬ್ರಿಡ್ಜ್ ಕೋರ್ಸ್ ಮುಗಿಸಿದ ನಂತರ ತಂತ್ರಜ್ಞಾನದಲ್ಲಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ಆತ್ಮವಿಶ್ವಾಸದಿಂದ ಮುಂದೆ ಸಾಗಲು ಸಜ್ಜುಗೊಳ್ಳುತ್ತಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದ ಸಮಾರೋಪದಲ್ಲಿ  ಪ್ರಾಂಶುಪಾಲ ಡಾ. ಫಜಲುರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, ಮತ್ತು ಅಪ್ಲೈಡ್ ಸೈನ್ಸ್ (Applied Science) ವಿಭಾಗದ ಮುಖ್ಯಸ್ಥ ಪ್ರೊ. ವಸೀಮ್ ಅಹ್ಮದ್ ಹಲವೇಗಾರ್, ಹಾಗು AITMನ ಇತರ ಅಧ್ಯಾಪಕರು ಭಾಗವಹಿಸಿದ್ದರು.

Top of Form

Bottom of Form

 

Read These Next

ಫೆಂಗಲ್ ಚಂಡಮಾರುತದ ಪರಿಣಾಮ ಮೀನುಗಾರರಿಗೆ ಎಚ್ಚರಿಕೆ; ಕರಾವಳಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕಾಣಿಸಿಕೊಂಡಿರುವ ಫೆಂಗಲ್ ಚಂಡಮಾರುತದ ಪರಿಣಾಮ ದ.ಕ.ಜಿಲ್ಲೆಯ ಮೇಲಾಗಿದೆ. ಸೋಮವಾರ ...