ಭಟ್ಕಳ: ಮಹಾಶಿವರಾತ್ರಿ ಮುರ್ಡೇಶ್ವರಕ್ಕೆ ಹರಿದು ಬಂದ ಭಕ್ತಸಾಗರ

Source: S.O. News Service | By MV Bhatkal | Published on 11th March 2021, 7:46 PM | Coastal News |


ಭಟ್ಕಳ:ಮಹಾಶಿವರಾತ್ರಿ ಅಂಗವಾಗಿ ವಿಶ್ವವಿಖ್ಯಾತ ಮುರ್ಡೇಶ್ವರ ದೇವಸ್ಥಾನಕ್ಕೆ ಗುರುವಾರ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ ಪುನಸ್ಕಾರ  ಸಲ್ಲಿಸಿದರು.
ಪ್ರವಾಸಿಗರು ಸೇರಿದಂತೆ ದೂರದೂರುಗಳಿಂದ ಬಂದಿದ್ದ ಭಕ್ತರು ದೇವರ ದರ್ಶನಕ್ಕೆ ಸರತಿಯ ಸಾಲಿನಲ್ಲಿ ನಿಂತುಕೊಂಡಿದ್ದರು.ಸಮುದ್ರ ಸ್ನಾನವನ್ನೂ ಮಾಡಿದ ಹಲವು ಭಕ್ತರು,ಉಪವಾಸ ವ್ರತ ಆಚರಿಸಿ,ದೇವರ ದರ್ಶನ ಪಡೆದು ಪೂಜೆ,ಪುನಸ್ಕಾರ ಸಲ್ಲಿಸಿದರು.ಶಿವರಾತ್ರಿ ನಿಮಿತ್ತ ದೇವಸ್ಥಾನದಲ್ಲಿ ಮುರ್ಡೇಶ್ವರ ದೇವರಿಗೆ ರುದ್ರಾಭಿಷೇಕ,ಕ್ಷೀರಾಭಿಷೇಕ,ಜಲಾಭಿಷೇಕ,ಬಿಲ್ವಾರ್ಚನೆ ಸೇರಿದಂತೆ ದೇವರನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು.

 


ತಾಲ್ಲೂಕಿನಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಲ ಚೋಳೇಶ್ವರ,ಬಂದರ್‌ನ ಕುಟುಮೇಶ್ವರ,ಮಾರುಕೇರಿಯಲ್ಲಿ ಇರುವ ಈಶ್ವರ ದೇವಸ್ಥಾನ,ಸೋನಾರಕೇರಿಯಲ್ಲಿ ಇರುವ ವಿರೂಪಾಕ್ಷ ದೇವಸ್ಥಾನಗಳಿಗೆ ಸ್ಥಳೀಯ ಭಕ್ತರು ಭೇಟಿ ನೀಡಿ ಪೂಜೆ ಪುನಸ್ಕಾರ ಸಲ್ಲಿಸಿದರು.ಸಂಜೆಯ ವೇಳೆಗೆ ಮುರ್ಡೇಶ್ವರದಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು.ಭಕ್ತರ ಪೂಜೆ,ಪುನಸ್ಕಾರಕ್ಕೆ ಅನುಕೂಲವಾಗುವಂತೆ ದೇವಸ್ಥಾನದಲ್ಲಿ ಸಿಬ್ಬಂದಿ,ಹಾಗೂ ಉಪಾಧಿವಂತರು ಸಹಕರಿಸಿದರು.

 

ಪೊಲೀಸ್ ಬಂದೊಬಸ್ತನ್ನು ಸಹ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ದೇವಸ್ತಾನ ಕ್ಕೆ ಬಂದಿದ್ದ ಎಲ್ಲಾ ಭಕ್ತರಿಗೆ‌ ಮುರ್ಡೇಶ್ವರ ತಳುಗಾಡಿ ಅಂಗಡಿಕಾರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮುರ್ಡೇಶ್ವರ ಲಾಡ್ಜ್ ಮಾಲೀಕರಿಂದ ತಂಪು ಪಾನೀಯಗಳು,ಮತ್ತು ಪಾನಕಸೇವೆ
ಮಾಡಿದರು,

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...