ಭಟ್ಕಳ: ಸದಸ್ಯರ ವಿರೋಧದ ನಡುವೆಯೂ ಜಾಲಿ ಪ.ಪಂ ಕಟ್ಟಡ ಕಾಮಗಾರಿ ಆರಂಭ; ಸದಸ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

Source: sonews | By Staff Correspondent | Published on 13th August 2020, 4:38 PM | Coastal News | Don't Miss |

ಭಟ್ಕಳ; ಸ.ನಂ.242 ರಲ್ಲಿ ಜಾಲಿ ಪಟ್ಟಣ ಪಂಚಯತ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸದಸ್ಯರ ತೀವ್ರ ವಿರೋಧದ ನಡುವೆಯೂ ಕಾಮಾಗಾರಿಗೆ ಚಾಲನೆ ನೀಡಿದ್ದು ಈ ಕುರಿತಂತೆ ಕೂಡಲೇ ಮಧ್ಯಪ್ರವೇಶಿ ಕಾಮಾಗಾರಿ ತಡೆಯುವಂತೆ ಆಗ್ರಹಿ ಪ.ಪಂ ಸದಸ್ಯರು ಭಟ್ಕಳ ಉಪವಿಭಾಗಾಧಿಕಾರಿಗೆ ಮನವಿ ಪತ್ರವೊಂದನ್ನು ಅರ್ಪಿಸಿದ್ದಾರೆ. 

2018, ನ.15 ರಂದು ನಡೆದ ಜಾಲಿ ಪ.ಪಂ ಸಭೆಯಲ್ಲಿ ಸದಸ್ಯರು ಸದರಿ ಕಾಮಗಾರಿ ಆರಂಭಗೊಂಡಿರುವ ಜಮೀನಿನಲ್ಲಿ ಕಟ್ಟಡ ನಿರ್ಮಾಣವನ್ನು ವಿರೋಧಿಸಿ ಠಾರಾವು ಮಾಡಿದ್ದು, ಆದರೆ ಪಂಚಾಯತ್ ಅಧ್ಯಕ್ಷರ ಅವಧಿ ಬದಲಾವಣೆಯ ಸಂದರ್ಭದಲ್ಲಿ ಆಡಳಿತಾಧಿಕಾರಿಯಾಗಿದ್ದ  ತಹಸಿಲ್ದಾರರು ಸದಸ್ಯರ ಗಮನಕ್ಕೆ ತಾರದೆ ವಿರೋಧ ವ್ಯಕ್ತಪಡಿಸಿದ್ದ ಜಮೀನಿನಲ್ಲೇ ಕಟ್ಟಡ ನಿರ್ಮಾಣ ಪ್ರಕಿಯೆಗೆ ಚಾಲನೆ ನೀಡಿದ್ದು ಇರುತ್ತದೆ. ಇದರಿಂದಾಗಿ ಸ್ಥಳೀಯ ಆಡಳಿತದ ಅಧಿಕಾರವನ್ನು ಕಿತ್ತುಕೊಂಡಾಂತಾಗಿದೆ  ಎಂದು ಮನವಿ ಪತ್ರ ತಿಳಿಸಿರುವ ಸದಸ್ಯರು, ಕೂಡಲೇ ಸಹಾಯಕ ಆಯುಕ್ತರು ಮಧ್ಯೆಪ್ರವೇಶಿಸಿ ಕಾಮಾಗಾರಿಯನ್ನು ತಡೆಯುವಂತೆ ಆಗ್ರಹಿಸಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಆದಂ ಪಣಂಬೂರು, ಪಂಚಾಯತ್ ಸದಸ್ಯರನ್ನು ಕಡೆಗಣಿಸಿದ ಆಡಳಿತಾಧಿಕಾರಿ ತಹಸಿಲ್ದಾರರು ಪ್ರಜಾಪ್ರಭುತ್ವದ ಕಗ್ಗೋಲೆಯನ್ನು ಮಾಡಿದ್ದಾರೆ ಎಂದು ಆರೋಪಿದ್ದಾರೆ. 
ಈ ಸಂದರ್ಭದಲ್ಲಿ ಅಬ್ದುಲ್ ರಹೀಮ್ ಶೇಖ್, ಬಿಲಾಲ್ ಆಹ್ಮದ್, ಆಫ್ತಾಬ್ ದಾಮೂದಿ, ಮಂಗಳಾ ಗೊಂಡ, ರೇಷ್ಮಾ ಸರ್ದಾರ್, ಮುಮ್ತಾಝ್ ಬೇಗಂ, ಶಹನಾಝ್ ಎಸ್. ಮೋಮಿನ್ ಮುಂತಾದವರು ಹಾಜರಿದ್ದರು. 
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...