ಕ್ಷುಲ್ಲಕ ಕಾರಣಕ್ಕಾಗಿ ಚೂರಿ ಇರಿತ:ಇಬ್ಬರ ಬಂಧನ

Source: S O News service | By Staff Correspondent | Published on 13th April 2017, 8:02 PM | Coastal News | Incidents | Don't Miss |

ಭಟ್ಕಳ: ಕ್ಷುಲ್ಲಕ ಕಾರಣಕ್ಕಾಗಿ ತಾಯಿ ಹಾಗೂ ಮಗನ ಮೇಲೆ ಚೂರಿಯಿಂದ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಾರಾಯಣ ನಾಗಪ್ಪ ನಾಯ್ಕ ಹಾಗೂ ನಾಗೇಶ ನಾಗಪ್ಪ ನಾಯ್ಕ ಎಂದು ತಿಳಿದುಬಂದಿದೆ. 
ಘಟನೆ ವಿವರ: ಅಶೋಕ ನಾಯ್ಕ ಎಂಬುವವರು ಗ್ರಾಮೀಣ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ತನ್ನ ತಾಯಿ ಮಾದೇವಿ ನಾಯ್ಕ ಎನ್ನುವವರ ಬಾವಿಯಿಂದ ನೀರು ತರಲು ಹೋದಾಗ ನಾಗೇಶ ನಾಗಪ್ಪ ನಾಯ್ಕ ಎಂಬಾತನು ಅವರನ್ನು ಅಡ್ಡಗಟ್ಟಿ ಹೊಡೆದು ಅವಾಚ್ಯ ಶಬ್ಧಗಳಿಂದ ಬಯ್ದು ಎದೆ ಹಾಗೂ ಎಡಗೈಗೆ ಚೂರಿ ಇರಿದು ಗಾಯಗೊಳಿಸಿದ್ದಾಗಿ ತಿಳಿಸಿದ್ದಾರೆ. ನಾರಾಯಣ ನಾಗಪ್ಪ ನಾಯ್ಕ ಹಾಗೂ ನಾಗೇಶ ವೆಂಕಟೇಪ್ಪ ನಾಯ್ಕ ಎಂಬುವವರ ಇದಕ್ಕೆ ಸಹಕಾರ ನೀಡಿದ್ದಾಗಿ ಅವರು ತಿಳಿಸಿದ್ದು ಪ್ರಕರಣ ದಾಖಲಿಸಕೊಂಡ ಪೊಲೀಸರು ನಾರಾಯಣ ನಾಗಪ್ಪ ನಾಯ್ಕ ಹಾಗೂ ನಾಗೇಶ ನಾಗಪ್ಪ ನಾಯ್ಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
 

Read These Next

ಸಿದ್ದಾರ್ಥ ಪದವಿ ಮಹಾವಿದ್ಯಾಲಯ ದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಸಿದ್ದಾರ್ಥ ಪದವಿ ಮಹಾವಿದ್ಯಾಲಯ ದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...