ವಂಚನೆಗೊಳಗಾದ ಸಾವಿರಾರು ಅಗ್ರಿಗೋಲ್ಡ್ ಗ್ರಾಹಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು-ರಮೇಶ

Source: sonews | By Staff Correspondent | Published on 18th January 2019, 6:41 PM | Coastal News | Don't Miss |

ಭಟ್ಕಳ: ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ನ್ಯಾಯ ವದಗಿಸುವ ದೃಷ್ಟಿಯಿಂದ ಅಗ್ರಿಗೋಲ್ಡ್ ಗ್ರೂಫ್ ಆಫ್ ಕಂಪೆನಿಗಳ ಗ್ರಾಹಕರ ಹಿತರಕ್ಷಣಾ ವೇದಕೆಯನ್ನು ರಚಿಸಿಕೊಂಡಿದ್ದು ನ್ಯಾಯಾಲಯದ ಮೂಲಕ ನ್ಯಾಯ ಪಡೆಯುವಲ್ಲಿ ಶ್ರಮಿಸುತ್ತಿದ್ದೇವೆ ಎಂದು ಹಿತರಕ್ಷಣಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಅಂಡಾಳು ರಮೇಶ ಬಾಬು ಅವರು ಹೇಳಿದರು. 

ಅವರು ನಗರದ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಎದುಗಿರುವ ಸಭಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 

ಅಖಿಲ ಭಾರತ ಅಗ್ರಿಗೋಲ್ಡ ಗ್ರಾಹಕರ ಮತ್ತು ಪ್ರತಿನಿಧಿಗಳ ಹಿತರಕ್ಷಣಾ ವೇದಿಕೆ(ರಿ) ಇವರಿಂದ ಅಗ್ರಿಗೋಲ್ಡ ಗ್ರೂಪ್ ಆಫ್ ಕಂಪನಿಯಿಂದ ರಾಜ್ಯದ ಗ್ರಾಹಕರಿಗೆ ಆದ ಅನ್ಯಾಯವನ್ನು ಸರಿಪಡಿಸುವ ಬಗ್ಗೆ ಮಾಹಿತಿ ನೀಡುತ್ತಾ ಹೈದರಾಬಾದಿನ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ವತಿಯಿಂದ 2015 ಜೂನ್‍ನಲ್ಲಿಯೇ ಪ್ರಕರಣವನ್ನು ದಾಖಲಿಸಿದ್ದೆವು. 2015 ಸೆಪ್ಟೆಂಬರ್‍ನಲ್ಲಿ ನಮ್ಮ ಪರವಾಗಿ ಉಚ್ಚ ನ್ಯಾಯಾಲಯವು ಆಂತರಿಕ ಆದೇಶ ಜಾರಿ ಮಾಡಿತ್ತು.  ಆದೇಶದ ಪ್ರಕಾರ ಅಗ್ರಿಗೋಲ್ಡ್‍ನ ಎಲ್ಲಾ ಆಸ್ತಿ ಪಾಸ್ತಿಗಳನ್ನು ಸಹ ನ್ಯಾಯಾಲಯ ಲಗ್ತು ಮಾಡಿ ಅದನ್ನು ಏಲಂ ಮಾಡಿ ಅದರಿಂದ ಬಂದ ಹಣವನ್ನು  ಕಟ್ಟ ಕಡೆಯ ಠೇವಣಿದಾರರಿಗೂ ಕೋಡಬೇಕೆಂದು ಅದೇಶ ಮಾಡಿದೆ.  ಅದಕ್ಕಾಗಿ ಒಂದು ಕಮಿಟಿಯನ್ನು ಮಾಡಿದೆ.   ಈ ಮದ್ಯೆ ಜಿ. ಗುಂಪಿನ ಸಂಸ್ಥೆಯಾದ ಸುಭಾಷ್‍ಚಂದ್ರ ಫೌಂಡೇಶನ್‍ನವರು 10 ಕೋಟಿ ಮುಂಗಡ ಹಣವನ್ನು ಜಮಾ ಮಾಡಿ ಸದರಿ ಆಸ್ತಿಗಳನ್ನು ಕೊಂಡುಕೊಳ್ಳುತ್ತೇವೆ ಎಂದು ಮುಂದೆ ಬಂದಿದ್ದರೂ ಸಹ ಅಗ್ರಿಗೋಲ್ಡನ್ ಆಡಳಿತ ಮಂಡಳಿ ಮತ್ತು ಅದರ ನಿರ್ದೇಶಕರ ದುರುದ್ದೇಶ ಹಾಗೂ ಸ್ವಾರ್ಥದಿಂದಾಗಿ ಆ ಪ್ರಕ್ರಿಯೆ ಆಗದೆ ಜಿ. ಗುಂಪಿನ ಸಂಸ್ಥೆ ಹಿಂದೆ ಸರಿಯಿತು. ಮತ್ತೆ ಪುನಃ ಇದೇ ಬರುವ ಫೆ.08, ರಂದು ಹೈದ್ರಾಬಾದಿನ ಉಚ್ಚನ್ಯಾಯಾಲಯ ಎಲಂ ಇಟ್ಟಿದ್ದು ಈಗಾಗಲೆ ಉಪ ಟೆಂಡರ್ ಮಾಡಿಲಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಬಿ.ಎಂ.ಎಸ್. ಮತ್ತು ಅಗ್ರಿಗೋಲ್ಡ ಹಿತರಕ್ಷಣಾ ವೇದಿಕೆಯ  ಜಿಲ್ಲಾ ಅಧ್ಯಕ್ಷ  ಕೆ. ನಾರಾಯಣ ಶೆಟ್ಟಿ ಮಾತನಾಡಿ 8 ರಾಜ್ಯಗಳ ಸುಮಾರು 32 ಲಕ್ಷ ಗ್ರಾಹಕರು ಮತ್ತು ಏಜೆಂಟರುಗಳ ಸುಮಾರು 7000 ಕೋಟಿ ಹಣವನ್ನು ಅಗ್ರಿಗೋಲ್ಡ್ ಸಂಸ್ಥೆಯು ವಿವಿಧ ಯೋಜನೆಗಳಿಗಾಗಿ ಸಂಗ್ರಹಿಸಿರುತ್ತದೆ. ಡೈರೆಕ್ಟರುಗಳ ಸ್ವಾರ್ಥದಿಂದಾಗಿ 2015 ರಿಂದ ಸಮಯಕ್ಕೆ ಅನುಗುಣವಾಗಿ ಅವಧಿ ಮುಗಿಸಿದ ಗ್ರಾಹಕರಿಗೆ ಅವರ ಹಣ ಹಿಂತಿರುಗಿಸುವಲ್ಲಿ ವಿಪಲವಾಯಿತು ಎಂದರು. 

ಈ ಸಂದರ್ಬದಲ್ಲಿ ವಿ. ರಾಜನ್, ಚಂದ್ರಶೇಖರ ಸನಿಲ್, ಗುರುವಪ್ಪ ಬೆಂಗಳೂರು, ವೆಂಕಟರಮಣ ಬೆಂಗಳೂರು, ಪಾರ್ವತಿ ಶೆಟ್ಟಿ, ಕೇಶವ ಮೊಗೇರ, ಕೃಷ್ಣ ನಾಯ್ಕ, ಜಗದೀಶ, ರಾಮ ಮೊಗೇರ ಉಪಸ್ಥಿತರಿದ್ದರು. 
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...