ಭಟ್ಕಳದ ವುಮೆನ್ಸ್ ಸೆಂಟರ್ ಸುಸಜ್ಜಿತ ಕಟ್ಟಡದಲ್ಲೀಗ ಕೊರೋನಾ ಸೋಂಕಿತರ ಆರೈಕೆ

Source: sonews | By Staff Correspondent | Published on 2nd July 2020, 6:26 PM | Coastal News | Don't Miss |

ಭಟ್ಕಳ:  ಭಟ್ಕಳ ತಲೂಕಿನಲ್ಲಿ ದಿನೆ ದಿನೆ  ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಮತ್ತು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗುವ ಭೀತಿಯ ಹಿನ್ನೆಲೆಯಲ್ಲಿ,  ಹೆಬಳೆ ಪಂಚಾಯತ್ ವ್ಯಾಪ್ತಿಯ ಭಟ್ಕಳ ವುಮೆನ್ಸ್ ಸೆಂಟರ್ ನ್ನು ಕೊರೋನಾ ಕೇಂದ್ರವಾಗಿ ಪರಿವರ್ತಿಸುವ ಕಾರ್ಯವು ಭರದಿಂದ ಸಾಗಿದ್ದು ೧೦೦ ಹಾಸಿಗೆಯುಳ್ಳ ಹೊಸ ಕೊರೋನಾ ಕೇಂದ್ರವು ಇಂದು ಅಥವಾ ನಾಳೆಯಿಂದ ತಾಲೂಕಿನ ಕೊರೋನಾ ಸೋಂಕಿತರಿಗಾಗಿ ತೆರೆದುಕೊಳ್ಳಲಿದೆ ಎಂದು ಮಜ್ಲಿಸ್-ಇ-ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ತಿಳಿಸಿದ್ದಾರೆ.

ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು .ಜಾಮಿಯಾಬಾದ್ ರಸ್ತೆಯ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಭವ್ಯವಾದ ಮತ್ತು ಸುಂದರವಾದ ಕಟ್ಟಡದಲ್ಲಿ 100 ಹಾಸಿಗೆಗಳನ್ನು ಹಾಕುವ ಕಾರ್ಯ ಭರದಿಂದ ಸಾಗಿದೆ
 

ಕರೋನಾ ಸೋಂಕಿನಿಂದ ಬಳಲುತ್ತಿರುವ ಜನರನ್ನು ಹಿಂದೆ ಕಾರವಾರ ಆಸ್ಪತ್ರೆಗೆ ಕಳುಹಿಸಲಾಗಿತ್ತು, ಆದರೆ ಪೀಡಿತ ಜನರ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ, ಅಲ್ಲಿ ಕಳಪೆ ನಿರ್ವಹಣೆಯ ದೂರುಗಳು ಕೇಳಿ ಬರುತ್ತಿವೆ. ಕರೋನಾದಿಂದ ಬಳಲುತ್ತಿರುವ ಜನರಿಗೆ ಸ್ಥಳಾವಕಾಶ ಕಲ್ಪಿಸಲು ಮಹಿಳಾ ಕೇಂದ್ರವನ್ನು ಈಗ ಸ್ವಾಧೀನಪಡಿಸಿಕೊಂಡಿದೆ, ಇಲ್ಲಿ ಹಾಸಿಗೆಗಳನ್ನು ಹಾಕಲಾಗುತ್ತಿದೆ, ಆದರೆ ಸಮಸ್ಯೆ ಎಂದರೆ ಹಾಸಿಗೆಗಳು ಲಭ್ಯವಿಲ್ಲ, ನಾವು ಹೊಸ ಹಾಸಿಗೆಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದೇವೆ, ಮಂಗಳೂರು, ಹುಬ್ಬಳ್ಳಿ, ಮುಂಬೈ ಮತ್ತು ಗುಜರಾತ್ನಲ್ಲಿ ಸಂಪರ್ಕ ಮಾಡಲಾಗುತ್ತಿದೆ ಆದರೆ ಹಾಸಿಗೆಗಳು ಲಭ್ಯವಿಲ್ಲ.

ಕಾರವಾರ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಿಲ್ಲ ಎನ್ನುವ ಕುರಿತು ಹಲವಾರು ದೂರುಗಳು ಬರುತ್ತಿವೆ. ಅಲ್ಲಿ ಯಾವುದೇ ವ್ಯವಸ್ಥೆಯು ಸರಿಯಾಗಿಲ್ಲ ಎನ್ನುವ ಕೂಗು ಹಲವು ದಿನಗಳಿಂದ ಕೇಳಿ ಬರುತ್ತಿದೆ ಎಂದು ಇಂಡಿಯನ್ ನವಯತ್ ಫೋರಂ ಉಪಾಧ್ಯಕ್ಷ ಎಸ್.ಎಂ.ಅರ್ಷದ್ ಹೇಳಿದ್ದಾರೆ. ಆದ್ದರಿಂದ, ಇಲ್ಲಿನ ವುಮನ್ಸ್ ಸೆಂಟರನ್ನು ಕರೋನಾ ಕೇಂದ್ರವನ್ನಾಗಿ ಪರಿವರ್ತಿಸಲು ನಾವು ನಿರ್ಧರಿಸಿದ್ದೇವೆ. ಈ ಸಂಸ್ಥೆಯ ಮಾಲೀಕರಾದ ಶ್ರೀಮತಿ ಖಾದಿಜಾ ಖಾಜಿ ಮತ್ತು ಅಮೆರಿಕದ ಪ್ರಸಿದ್ಧ ಉದ್ಯಮಿ ಜುಬೈರ್ ಖಾಝಿಯವರು ಅತ್ಯಂತ ಸಂತೋಷದಿಂದ  ಒಪ್ಪಿಕೊಂಡು ತಾತ್ಕಾಲಿಕವಾಗಿ ಕೊರೋನಾ ಕೇಂದ್ರವನ್ನಾಗಿ ಪರಿವರ್ತಿಸಲು ಒಪ್ಪಿಗೆ ನೀಡಿದ್ದಾರೆ. ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.  

 

Read These Next

ನಾಗರಿಕ ಸೇವೆಗಳ ತರಬೇತಿಗಾಗಿ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ                                                 

ಕಾರವಾರ : PUE/ICSE/CBSE   ಮಂಡಳಿಗಳು ಶೈಕ್ಷಣಿಕ ವರ್ಷ 2019-20ರ ಅವಧಿಯಲ್ಲಿ ನಡೆಸಿರುವ 2ನೇ ಪಿ.ಯು.ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಕಲಾ, ...

ಸಾಮಾಜಿಕ ಅಂತರದೊಂದಿಗೆ 74ನೇ ಸ್ವಾತಂತ್ರ್ಯೋತ್ಸವ: ಡಿಸಿ                                                 

ಕಾರವಾರ : ಬರುವ ಅಗಸ್ಟ್ 15ರಂದು ನಡೆಯುವ 74ನೇ ಸ್ವಾತಂತ್ರ್ಯೋತ್ಸವವನ್ನು ಸಾಮಾಜಿಕ ಅಂತರ ಸ್ವಾನಿಟೈಸರ್, ಮಾಸ್ಕ್‍ಗಳ ಬಳಕೆಯಂತಹ ...

ನಾಗರಿಕ ಸೇವೆಗಳ ತರಬೇತಿಗಾಗಿ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ                                                 

ಕಾರವಾರ : PUE/ICSE/CBSE   ಮಂಡಳಿಗಳು ಶೈಕ್ಷಣಿಕ ವರ್ಷ 2019-20ರ ಅವಧಿಯಲ್ಲಿ ನಡೆಸಿರುವ 2ನೇ ಪಿ.ಯು.ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಕಲಾ, ...

ಸಾಮಾಜಿಕ ಅಂತರದೊಂದಿಗೆ 74ನೇ ಸ್ವಾತಂತ್ರ್ಯೋತ್ಸವ: ಡಿಸಿ                                                 

ಕಾರವಾರ : ಬರುವ ಅಗಸ್ಟ್ 15ರಂದು ನಡೆಯುವ 74ನೇ ಸ್ವಾತಂತ್ರ್ಯೋತ್ಸವವನ್ನು ಸಾಮಾಜಿಕ ಅಂತರ ಸ್ವಾನಿಟೈಸರ್, ಮಾಸ್ಕ್‍ಗಳ ಬಳಕೆಯಂತಹ ...