ಬಿಡಾಡಿ ದನಗಳಿಂದಾಗಿ ತೊಂದರೆಗೀಡಾಗುತ್ತಿರುವ ಜನ

Source: S O News service | By Staff Correspondent | Published on 26th October 2016, 11:36 PM | Coastal News | State News | Don't Miss |

ಭಟ್ಕಳ: ಭಟ್ಕಳದಲ್ಲಿ ಇತ್ತಿಚಿನ ದಿನಗಳಲ್ಲಿ ಗೋರಕ್ಷಕ ಸಂಖ್ಯೆಯಲ್ಲಿ ಹೆಚ್ಚಳವಾದಂತೆ ಬಿಡಾಡಿ ಜಾನುವಾರುಗಳ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದ್ದು ಎಲ್ಲಿಬೇಕಲ್ಲಿ ಠಿಕಾಣಿ ಹೂಡುವ ಬಿಡಾಡಿ ದನಗಳಿಂದ ಜನರು ಮಾತ್ರ ಹಲವು ತೊಂದರೆಗಳಿಗೆ ಒಳಗಾಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ನಗರದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಬಿಡಾಡಿ ಜಾನುವಾರು ಮತ್ತು ನಾಯಿಗಳ ಕಾಟ ವಿಪರೀತವಾಗಿದ್ದು, ನಿಯಂತ್ರಣವೂ ಇಲ್ಲ, ರಕ್ಷಣೆಯೂ ಇಲ್ಲ ಎಂಬಂತಾಗಿದೆ. ಇದನ್ನು ನೆಪಮಾಡಿಕೊಂಡ ಜಾನುವಾರು ಕಳ್ಳರು ರಾತ್ರಿ ಸಮಯದಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದು ಜಾನುವಾರುಗಳನ್ನು ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದನ್ನು ಸಿಸಿಟಿವಿ ಕ್ಯಾಮರಾಗಳು ಸೆರೆ ಹಿಡಿದಿವೆ. ಇವುಗಳನ್ನು ರಕ್ಷಿಸಲೆಂದೇ ಕೆಲ ಸ್ವಯಂ ಘೋಷಿತ ಗೋರಕ್ಷಕರು ಹುಟ್ಟಿಕೊಂಡಿದ್ದು ಇವರಿಂದಾಗಿ ಸಮಾಜದ ಶಾಂತಿ ಹದಗೆಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಜಾನುವಾರುಗಳನ್ನು ಬೇಕಾಬಿಟ್ಟಿಯಾಗಿ ವಾರಿಸುದಾರರಿಲ್ಲದೆ ನಗರ ಪ್ರದರ್ಶನಗೈಯ್ಯಲು ಬಿಟ್ಟಿರುವುದರ ವಿರುದ್ಧ ಶಾಂತಿ ಪ್ರಿಯರು ಅಸಮಧಾನ ವ್ಯಕ್ತಪಡಿಸುತ್ತಿದ್ದು ಜಾನುವಾರಗಳ ಮೇಲೆ ಅಷ್ಟೊಂದು ಕರುಣೆ, ಮಮತೆ ಇರುವವರು ಅವುಗಳನ್ನು ರಸ್ತೆಯ ಮೇಲೆ ಪ್ಲಾಸ್ಟಿಕ್ ಮತ್ತಿತರ ಜೀವತೆಗೆಯುವ ವಸ್ತುಗಳನ್ನು ತಿನ್ನುವುದರಿಂದ ತಪ್ಪಿಸಿ ತಮ್ಮ ತಮ್ಮ ಮನೆಗಳಲ್ಲಿ ಕಟ್ಟಿಕೊಂಡು ಹುಲ್ಲು ಮೇವು ಹಾಕಿ ರಕ್ಷಣೆ ಮಾಡಲಿ, ಇದನ್ನು ಬಿಟ್ಟು ಜಾನುವಾರು ಕಳ್ಳತನ ಮಾಡಲಾಗುತ್ತಿದೆ ಎಂದು ಬಿಂಬಿಸಿ ಒಂದು ಸಮುದಾಯದ ವಿರುದ್ಧ ದ್ವೇಷಾ ಸಾಧನೆ ಮಾಡುತ್ತಿರುವುದು ಸರಿಯಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.  
ಈ ಬಿಡಾಡಿ ದನಗಳು ಇಲ್ಲಿನ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದು ಇದಕೊಂದು ಗತಿ ಕಾಣಿಸದೆ ಹೋದಲ್ಲಿ ನಗರದ ಶಾಂತಿ ಸುವೆವಸ್ಥೆ ಹದಗೆಡಬಹುದು ಎಂಬ ಅನುಮಾನಗಳು ಪೊಲೀಸರಲ್ಲಿ ಕಾಡತೊಡಗಿದೆ. 

ಎಲ್ಲಿಂದಲೋ ಬಂದ ಇದೀಗ ವಾರಸುದಾರರಿಲ್ಲದೇ ತಿರುಗುತ್ತಿರುವ ಗಜ ಗಾತ್ರದ ಎತ್ತುಗಳಿಗೆ ರಸ್ತೆ ಹಾಗೂ ರಸ್ತೆಯ ಪಕ್ಕದ ಖಾಲಿ ಜಾಗಗಳು ವಿಶ್ರಾಂತಿಯ ತಾಣವಾಗಿದೆ. ವಾಹನ ಸಂಚಾರಕ್ಕೆ ಅಪಾಯವನ್ನು ತಂದಿಟ್ಟ ಉದಾಹರಣೆಗಳಿವೆ. ಬಸ್ ನಿಲ್ದಾಣ, ಹೊಟೆಲ್ ಎಲ್ಲೆಂದರಲ್ಲಿ ಪಾದಚಾರಿಗಳಿಗೂ ಕೆಲ ದೈತ್ಯ ಜಾನುವಾರುಗಳ ನೋಟ ಭಯವನ್ನು ತರುತ್ತಿದೆ. ಇದಲ್ಲದೇ ಕೊಟ್ಟಿಗೆಗೆ ಹೋಗಲು ಮನಸ್ಸು ಬಾರದ ಸ್ಥಳೀಯ ಜಾನುವಾರುಗಳೂ ಅಲ್ಲಲ್ಲಿ ಪೇಟೆಯ ವಿಶ್ರಾಂತಿ, ತಿರುಗಾಟವನ್ನು ರೂಢಿಸಿಕೊಂಡಿರುವುದು ಕಂಡು ಬಂದಿದೆ. ಜಾನುವಾರುಗಳನ್ನು ರಸ್ತೆಗೆ ಬಿಟ್ಟವರನ್ನು ಪತ್ತೆ ಹಚ್ಚುವುದು ಭಟ್ಕಳ ಪುರಸಭೆ ಹಾಗೂ ಪೊಲೀಸರಿಗೆ ಕಷ್ಟವಾಗುತ್ತಿದೆ. ರಸ್ತೆಯ ಅಂಚಿನ ತ್ಯಾಜ್ಯಗಳು ನಾಯಿ ಹಾಗೂ ಬಿಡಾಡಿ ಜಾನುವಾರುಗಳಿಗೆ ಆಹಾರವಾಗುತ್ತಿವೆ.

ಪ್ರಾಣಿ ಪ್ರಿಯರು ಈ ಬಗ್ಗೆ ಚಕಾರ ಎತ್ತಿದ ಉದಾಹರಣೆಗಳು ತೀರ ಕಡಿಮೆ. ಪ್ರತಿಭಟನೆಯಂತೂ ಇಲ್ಲವೇ ಇಲ್ಲ! ಭಟ್ಕಳ ಪುರಸಭೆ ಒಂದೆರಡು ಬಾರಿ ಬಿಡಾಡಿ ಜಾನುವಾರುಗಳನ್ನು ಎಳೆದು ತಂದು ಕಟ್ಟಿ ನಿಯಂತ್ರಣಕ್ಕೆ ಮುಂದಾಯಿತಾದರೂ ಸಾಕಿ ಸಲಹುವ ದಾರಿ ಇಲ್ಲದೇ ಕೈಯನ್ನು ಕೊಡವಿಕೊಂಡು ವರ್ಷವೇ ಕಳೆದು ಹೋಗಿದೆ. ಆದರೆ ಇತ್ತೀಚಿನ ಕೆಲ ತಿಂಗಳುಗಳಿಂದ ಕಳ್ಳರ ದೃಷ್ಟಿ ಜಾನುವಾರುಗಳ ಮೇಲೆ ನೆಟ್ಟಿದೆ. ಬಿಡಾಡಿ ಜಾನುವಾರುಗಳನ್ನು ವಾಹನದಲ್ಲಿ ಕಟ್ಟಿ ಕದ್ದೊಯ್ಯಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇನ್ನೊಂದೆಡೆ ಊರು, ಕೇರಿಯ ಸಿಸಿಟಿವಿಯಲ್ಲಿ ಹಿಂಸಾತ್ಮಕ ಜಾನುವಾರು ಕಳ್ಳತನದ ದೃಶ್ಯಗಳಿಗಾಗಿ ಹುಡುಕಾಟ ಸುರುವಾಗಿದೆ. ಆದರೆ ಜಾನುವಾರುಗಳಿಗೆ ವಾರಸುದಾರರೇ ಸಿಗುತ್ತಿಲ್ಲ. ದೂರುದಾರರೂ ಇಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಟ್ಕಳ ಶಹರ ಠಾಣಾ ಎಸೈ ಕುಡಗುಂಟಿ ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುಗಳು ಬಂದರೆ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಡುವೆ ಭಟ್ಕಳದ ನೂರಾರು ಸಂಖ್ಯೆಯಲ್ಲಿರುವ ಗೋರಕ್ಷಕರು ಹಾಗೂ ಸಂಘಟನೆಗಳು ಬಿಡಾಡಿ ಜಾನುವಾರುಗಳ ರಕ್ಷಣೆಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಈ ಮೂಲಕ ಜಾನುವಾರುಗಳ ರಕ್ಷಣೆಗೆ ತಮ್ಮ ಬದ್ಧತೆಯನ್ನು ಮೆರೆಯಬೇಕು ಎಂಬ ಆಶಯ ಇಲ್ಲಿನ ಜನರದ್ದಾಗಿದೆ. ಇದಕ್ಕೆ ಹೊಂದಿಕೊಂಡು ಭಟ್ಕಳ ಪುರಸಭಾ ಆಡಳಿತವೂ ಬಿಡಾಡಿ ಪ್ರಾಣಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಬಿಜಪಿ ಮುಖಂಡ ಗೋವಿಂದ ನಾಯ್ಕ್ ‘ಜಗತ್ತಿನಲ್ಲಿ ಎಲ್ಲ ಪ್ರಾಣಿ, ಪಕ್ಷಿಗಳಿಗೆ ಬದುಕುವ ಹಕ್ಕಿದೆ. ರಾತ್ರಿ ಬೆಳಗಾಗುವುದರೊಳಗಾಗಿ ಹಣ ಗಳಿಸಲು ಅವುಗಳನ್ನು ಹೊತ್ತೊಯ್ಯುವುದು ಅಕ್ಷಮ್ಯ ಅಪರಾಧ. ಈ ಕುರಿತು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು. ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡುವುದರ ಬಗ್ಗೆಯೂ ಪಾಲನೆ ಮಾಡುವವರು ಎಚ್ಚರ ವಹಿಸಬೇಕು’ ಎನ್ನುತ್ತಾರೆ. 

Read These Next

ಬೇಲೇಕೇರಿ ಸಮೀಪ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕ ಬೋಟ್ ಮುಳುಗಡೆ. ಆರು ಮೀನುಗಾರರ ರಕ್ಷಣೆ.

ಗೋಕರ್ಣ : ತದಡಿ ಬಂದರಿನಿಂದ ಮೀನುಗಾರಿಕೆಗೆ ಹೋದ ಯಾಂತ್ರಿಕ ದೋಣಿ ಅಂಕೋಲಾದ ಬೇಲೇಕೇರಿ ಸಮೀಪದ ಸಮುದ್ರದಲ್ಲಿ‌ ಮುಳುಗಿದ ಘಟನೆ ...

ಕಾರವಾರ: ಡಿ.ಇಎಲ್.ಇಡಿ ಹಾಗೂ ಡಿ.ಪಿ.ಎಸ್.ಇ. ಪರೀಕ್ಷೆ: ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ

ಿ.ಇಎಲ್.ಇಡಿ ಹಾಗೂ ಡಿ.ಪಿ.ಎಸ್.ಇ. ಪ್ರಥಮ ಹಾಗೂ ದ್ವಿತೀಯ ಪರೀಕ್ಷೆಯು ಅಗಸ್ಟ್ 11 ರವರೆಗೆ ಜಿಲ್ಲೆಯ ಕುಮಟಾ ಡಯಟ್ ಕೇಂದ್ರದಲ್ಲಿ ನಡೆಯಲಿವೆ. ...

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಮಾಹಿತಿ ಪ್ರತಿ ಮಹಿಳೆಯರಿಗೂ ತಲುಪಬೇಕು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಲಭ್ಯವಿರುವ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಮಾಹಿತಿ ಪ್ರತಿ ಮಹಿಳೆಯರಿಗೂ ...

ಕೊರೋನಾ ಹೆಚ್ಚುತ್ತಿರುವ ಹಿನ್ನಲೆ. ದೇವಾಲಯಗಳಲ್ಲಿ ಸೇವಾ ಕಾರ್ಯಕ್ಕೆ ಅವಕಾಶವಿಲ್ಲ : ಜಿಲ್ಲಾಧಿಕಾರಿ

ಕಾರವಾರ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿನ ಪರಿಣಾಮಕಾರಿ ...

ಸಚಿವರಾಗಿ ಶಿವರಾಮ ಹೆಬ್ಬಾರ್ ಪ್ರಮಾಣವಚನ ಹಿನ್ನಲೆ. ಯಲ್ಲಾಪುರದಲ್ಲಿ ಕಾರ್ಯಕರ್ತರ ಸಂಭೃಮಾಚರಣೆ

ಯಲ್ಲಾಪುರ : ಯಲ್ಲಾಪುರದ ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರ್ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಸಚಿವ ಸಂಪುಟದಲ್ಲಿ ...

ಕೋಲಾರ: ಧನುರ್ವಾಯು,ಗಂಟಲು ಮಾರಿ ತಡೆಗೆ ಲಸಿಕೆ ಪಡೆಯಿರಿ. ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ-ಡಾ.ಕೆ.ಜ್ಯೋತಿ

ಲಸಿಕೆ ಪಡೆಯುವ ಮೂಲಕ ಧನುರ್ವಾಯು ಹಾಗೂ ಗಂಟಲು ಮಾರಿ ರೋಗಗಳಿಂದ ರಕ್ಷಣೆ ಪಡೆಯುವಂತೆ ಸಮುದಾಯ ಆರೋಗ್ಯಾಧಿಕಾರಿ ಡಾ.ಕೆ.ಜ್ಯೋತಿ ...

ಕೋಲಾರ: ಕೋವಿಡ್ ಮೂರನೇ ಆಲೆ. ಸಾರ್ವಜನಿಕರು ಕೋವಿಡ್ ನಿಯಂತ್ರಣದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

ಕೋವಿಡ್ ಮೂರನೇ ಆಲೆ ಪ್ರಾರಂಭವಾಗಲಿದ್ದು ಸಾರ್ವಜನಿಕರು ಕೋವಿಡ್ ನಿಯಂತ್ರಣಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತಾಗ ಬೇಕು. ...

ಬೆಂಗಳೂರು: 29 ಸಚಿವರಿಂದ ಪ್ರಮಾಣ 10 ವಲಸಿಗರಿಗೆ ಅವಕಾಶ, 13 ಜಿಲ್ಲೆಗಳಿಗೆ ದಕ್ಕದ 'ಪ್ರಾತಿನಿಧ್ಯ', 6 ಮಂದಿಗೆ ಕೊಕ್, ವಿಜಯೇಂದ್ರಗೆ ಮಂತ್ರಿಭಾಗ್ಯವಿಲ್ಲ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ನೂತನ ಸಚಿವರಾಗಿ ಹಿರಿಯ ಶಾಸಕರಾದ ಗೋವಿಂದ ಎಂ.ಕಾರಜೋಳ, ...

ಜನಾನುರಾಗಿ ಸೇವಕನಿಗೆ ಸಿಕ್ಕಿತು ಸರ್ಕಾರದಲ್ಲಿ ಸ್ಥಾನ. ಯಲ್ಲಾಪುರದ ಶಿವರಾಮ ಹೆಬ್ಬಾರ ಸಚಿವರಾಗಿ ಪ್ರಮಾಣವಚನ.

ಬೆಂಗಳೂರು : ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸಿಎಂ ಬಸವರಾಜ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಬುಧವಾರ ರಾಜಭವನದಲ್ಲಿ ...

ಬೇಲೇಕೇರಿ ಸಮೀಪ ಅರಬ್ಬಿ ಸಮುದ್ರದಲ್ಲಿ ಯಾಂತ್ರಿಕ ಬೋಟ್ ಮುಳುಗಡೆ. ಆರು ಮೀನುಗಾರರ ರಕ್ಷಣೆ.

ಗೋಕರ್ಣ : ತದಡಿ ಬಂದರಿನಿಂದ ಮೀನುಗಾರಿಕೆಗೆ ಹೋದ ಯಾಂತ್ರಿಕ ದೋಣಿ ಅಂಕೋಲಾದ ಬೇಲೇಕೇರಿ ಸಮೀಪದ ಸಮುದ್ರದಲ್ಲಿ‌ ಮುಳುಗಿದ ಘಟನೆ ...

ಸಚಿವರಾಗಿ ಶಿವರಾಮ ಹೆಬ್ಬಾರ್ ಪ್ರಮಾಣವಚನ ಹಿನ್ನಲೆ. ಯಲ್ಲಾಪುರದಲ್ಲಿ ಕಾರ್ಯಕರ್ತರ ಸಂಭೃಮಾಚರಣೆ

ಯಲ್ಲಾಪುರ : ಯಲ್ಲಾಪುರದ ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರ್ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಸಚಿವ ಸಂಪುಟದಲ್ಲಿ ...

ಜನಾನುರಾಗಿ ಸೇವಕನಿಗೆ ಸಿಕ್ಕಿತು ಸರ್ಕಾರದಲ್ಲಿ ಸ್ಥಾನ. ಯಲ್ಲಾಪುರದ ಶಿವರಾಮ ಹೆಬ್ಬಾರ ಸಚಿವರಾಗಿ ಪ್ರಮಾಣವಚನ.

ಬೆಂಗಳೂರು : ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸಿಎಂ ಬಸವರಾಜ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಬುಧವಾರ ರಾಜಭವನದಲ್ಲಿ ...

ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಬಳಸಿ ಕಡಿಮೆ ವೆಚ್ಚದಲ್ಲಿ ಸುಧಾರಿತ ಕೃಷಿ ಮಾಡಿ ಆದಾಯ ಹೆಚ್ಚಿಸಿಕೊಳ್ಳಲು ರೈತರು ಶ್ರಮಿಸಬೇಕು : ಶಾಸಕ ಅಮೃತ ದೇಸಾಯಿ

ಧಾರವಾಡ : ರೈತರ ಕೃಷಿ ಉತ್ಪನ್ನಗಳನ್ನು ದ್ವಿಗುಣಗೊಳಿಸಿ ಆದಾಯ ಹೆಚ್ಚಿಸಲು ರಾಜ್ಯ ಸರ್ಕಾರವು ರೈತರಿಗೆ ಕೃಷಿ ಕಾರ್ಯಗಳಿಗಾಗಿ ಕಡಿಮೆ ...