5 ಲಕ್ಷ ಚಂದಾದಾರ ಸಂಖ್ಯೆಯ ಗಡಿ ದಾಟಿದ ಭಟ್ಕಳದ ಸಾಹಿಲ್ ಆನ್ ಲೈನ್; ಇದು ಗುರಿಯಲ್ಲ ಮೈಲಿಗಲ್ಲು ಎಂದ ಸೈಯ್ಯದ್ ಖಲೀಲ್

Source: sonews | By Staff Correspondent | Published on 7th September 2020, 5:51 PM | Coastal News | Special Report | Don't Miss |

ಭಟ್ಕಳ: ಕಳೆದ 5 ವರ್ಷಗಳಿಂದ  ಕರಾವಳಿ ಕರ್ನಾಟಕದ ಸೇರಿದಂತೆ ರಾಜ್ಯ, ರಾಷ್ಟ್ರೀಯ ಮತ್ತು ಜಾಗತಿಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಸಾಹಿಲ್ ಆನ್ ಲೈನ್ ಯೂಟ್ಯೂಬ್ ಚಾನೆಲ್ ನ ಚಂದಾದಾರರ ಸಂಖ್ಯೆ 5ಲಕ್ಷ ದಾಟಿದ್ದು ಸಾಹಿಲ್ ಆನ್ ಲೈನ್ ಯೂಟ್ಯೂಬ್ ಚಾನೆಲ್ ಜನಪ್ರೀಯತೆಯನ್ನು ಎತ್ತಿ ತೋರಿಸುತ್ತಿದೆ ಎಂದು  ಸಾಹಿಲ್ ಮೀಡಿಯಾ ಮತ್ತು ಪಬ್ಲಿಷಿಂಗ್ ಸೊಸೈಟಿಯ ಅಧ್ಯಕ್ಷ  ಎಸ್.ಎಂ. ಸೈಯದ್ ಖಲೀಲ್-ಉರ್-ರೆಹಮಾನ್ ಸಂತೋಷ ವ್ಯಕ್ತಪಡಿಸಿದ್ದಾರೆ.  

ಇಂದು ನಾವು ರಾಷ್ಟ್ರದ ಕಲ್ಯಾಣಕ್ಕಾಗಿ ನಡೆದಿರುವ ಈ ಪ್ರಯಾಣದಲ್ಲಿ ಒಂದು ಮೈಲಿಗಲ್ಲನ್ನು ದಾಟಿದ್ದು, ಮಾಧ್ಯಮ ಕ್ಷೇತ್ರದಲ್ಲಿ  ರಾಷ್ಟ್ರವನ್ನು ಪ್ರತಿನಿಧಿಸುವ ಭರವಸೆಯನ್ನು ಯಶಸ್ವಿಯಾಗಿ ಹೊಂದಿದ್ದೇವೆ ಎಂದ ಅವರು, ಇಂಗ್ಲಿಷ್, ಕನ್ನಡ ಮತ್ತು ಉರ್ದು ಭಾಷೆಗಳಲ್ಲಿ ಏಕಕಾಲದಲ್ಲಿ ಸುದ್ದಿಗಳನ್ನು ಪ್ರಕಟಿಸುವ ಸಂಪೂರ್ಣ ಕರಾವಳಿ ಪ್ರದೇಶದ ಸಾಹಿಲ್ ಆನ್‌ಲೈನ್ ಏಕೈಕ ಸುದ್ದಿ ಸಂಸ್ಥೆಯಾಗಿದೆ ಮತ್ತು ಅದರ ಪ್ರಕಟಿತ ಸುದ್ದಿ, ಲೇಖನಗಳು ಮತ್ತು ವೀಡಿಯೊಗಳು ಲಕ್ಷಾಂತರ ಜನರನ್ನು ತಲುಪುತ್ತವೆ ಹೇಳಿದರು.

ಸಾವಿರಾರು ಅಡೆತಡೆಗಳು, ಪಿತೂರಿಗಳು ಮತ್ತು ಬೆದರಿಕೆಗಳ ಹೊರತಾಗಿಯೂ ನಮ್ಮನ್ನು ಸತ್ಯದ ಹಾದಿಯಲ್ಲಿ  ನಡೆಯಲು ಅವಕಾಶ ಮಾಡಿಕೊಟ್ಟಿರುವ ಆ ಸೃಷ್ಟಿಕರ್ತನಿಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದ ಅವರು, ಕರಾವಳಿ ಜಿಲ್ಲೆ, ರಾಜ್ಯ ರಾಷ್ಟ್ರ ಹಾಗೂ ವಿದೇಶಗಳಲ್ಲಿರುವ ನಮ್ಮ ಲಕ್ಷಾಂತರ ವೀಕ್ಷಕರಿಗೆ ನಾವು ಆಭಾರಿಯಾಗಿದ್ದೇವೆ, ನಮ್ಮ ಈ ಪ್ರಯಾಣದಲ್ಲಿ ನಮಗೆ ಸ್ಪೂರ್ತಿಯ ಸೆಲೆಯಾಗಿದ್ದ ಎಲ್ಲರಿಗೂ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಈ 500,000 ಸಂಖ್ಯೆಯು ನಮಗೆ ಗುರಿಯಲ್ಲ ಒಂದು ಮೈಲಿಗಲ್ಲು ಮಾತ್ರ. ದೇವನ  ಸಹಾಯ ಮತ್ತು ರಕ್ಷಣೆಯೊಂದಿಗೆ, ಸತ್ಯವನ್ನು ಹರಡುವ ಈ ಪ್ರಯಾಣದಲ್ಲಿ ನಾವು ಮತ್ತಷ್ಟು ಕಠಿಣ ಪರಿಶ್ರಮದಿಂದ ಮುಂದುವರಿಯುತ್ತೇವೆ ಎಂದರು. ಸಾಹಿಲ್ ಆನ್ ಲೈನ್ ತಂಡದ ಪ್ರತಿಯೊಬ್ಬ ಸದಸ್ಯನ ನಿರಂತ್ರ ಪರಿಶ್ರಮದ ಫಲದಿಂದಾಗಿ ಇಂದು ನಾವು 5ಲಕ್ಷ ಚಂದಾದಾರರನ್ನು ಹೊಂದಲು ಸಾಧ್ಯವಾಗಿದ್ದು ಇದ ದ್ವನಿಯನ್ನು ಗಟ್ಟಿಗೊಳಿಸಲು ಮತ್ತು ಸತ್ಯವನ್ನು ಎಲ್ಲೆಡೆ ಹರಡುವಂತಾಗಲು ಪ್ರತಿಯೊಬ್ಬರು ಕೈಜೋಡಿಸಬೇಕು, ಒಬ್ಬರು ಕನಿಷ್ಠ ಐದು ಜನರನ್ನು ಸಾಹಿಲ್ ಆನ್ ಲೈನ್ ಯೂ ಟ್ಯೂಬ್ ಚಾನೆಲ್ ಗೆ ಚಂದಾದಾರನ್ನಾಗಿ ಮಾಡುವಂತೆ ಪ್ರೋತ್ಸಾಹಿಸಬೇಕೆಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಸಾಹಿಲ್ ಆನ್‌ಲೈನ್‌ನ ಯೂಟ್ಯೂಬ್ ಚಾನೆಲ್ ಇಲ್ಲಿ ಲಭ್ಯವಿದೆ ಎಂಬುದನ್ನು ಗಮನಿಸಿ:  http://www.youtube.com/sahilonlinevideo

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...