ಭಟ್ಕಳ: ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿರುವ ವೈಟ್ ಬೋರ್ಡ್ ಟ್ಯಾಕ್ಸಿ ಮೇಲೆ ಕ್ರಮಕ್ಕೆ ಆಗ್ರಹ

Source: SO News | By Laxmi Tanaya | Published on 18th October 2020, 8:37 PM | Coastal News |

ಭಟ್ಕಳ : ಸರ್ಕಾರಕ್ಕೆ  ತೆರಿಗೆ ವಂಚಿಸುತ್ತಿರುವ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ಕರ್ನಾಟಕ ಟ್ತಾಕ್ಸಿ ಡ್ರೈವರ್ ಯುನಿಯನ್ ದವರು ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ಭಟ್ಕಳ ಸುತ್ತಮುತ್ತಲು ವೈಟ್‌ ಬೋರ್ಡ್ ಟ್ಯಾಕ್ಸಿಗಳ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಸ್ವಂತ ಟ್ಯಾಕ್ಸಿಗಳನ್ನ  ಬಾಡಿಗೆ ಕೊಟ್ಟು ಸರ್ಕಾರಕ್ಕೆ ವಂಚಿಸಲಾಗುತ್ತಿದೆ. ಇದರಿಂದ ಹಳದಿ ಬೋರ್ಡ್ ಟ್ಯಾಕ್ಸಿ ಹೊಂದಿದ ಚಾಲಕರಿಗೆ ಅನ್ಯಾಯವಾಗುತ್ತಿದ್ದು 
ಜೀವನ ನಡೆಸುವುದು ಕಷ್ಟವಾಗಿದೆ. 

ಹೀಗೆಯೇ ಮುಂದುವರಿದರೆ ಹಳದಿ ಬೋರ್ಡ್ ಹೊಂದಿರುವ ಟ್ಯಾಕ್ಸಿ ಚಾಲಕರು ತೆರಿಗೆ ಕಟ್ಟುವ ಶಕ್ತಿಯನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಹೀಗಾಗಿ ಕೂಡಲೇ ಈ ವಿಷಯವನ್ನು ಮನಗಂಡು ರಾಜ್ಯ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಲು ಕೂಡಲೆ ವೈಟ್ ಬೋರ್ಡ್ ಟ್ಯಾಕ್ಸಿಯನ್ನ ನಿಯಂತ್ರಿಸಬೇಕೆಂದು ಆಗ್ರಹಿಸಿದ್ದಾರೆ.

ವೈಟ್ ಬೋರ್ಡ್ ವಾಹನ ಅಪಘಾತವಾದಲ್ಲಿ ವಿಮೆ ಸಿಗುವುದಿಲ್ಲ. ಕಾನೂನು ಪ್ರಕಾರ ತೆರಿಗೆ ಕಟ್ಟಿ ಜೀವನ ನಡೆಸುತ್ತಿರುವ ಹಳದಿ ಬೋರ್ಡ್ ಹೊಂದಿರುವ ಟ್ಯಾಕ್ಸಿ ಚಾಲಕರನ್ನ ರಕ್ಷಿಸಬೇಕು. ಅನ್ಯ ಮಾರ್ಗದಲ್ಲಿ ಬಾಡಿಗೆ ಓಡಿಸುವ ವೈಟ್ ಬೋರ್ಡ್ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಅಬ್ದುಲ್ ಮಜೀದ್, ಮೋಹನ್, ಫೈಸಲ್, ಫಯಾಜ್, ಪೈರೋಜ್ ಮತ್ತು ಇತರ ಚಾಲಕರು ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...