ಭಟ್ಕಳ-ಬೀದಿ ಬದಿ ವ್ಯಾಪಾರಿಗಳ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

Source: sonews | By Staff Correspondent | Published on 9th September 2019, 10:44 PM | Coastal News |

ಭಟ್ಕಳ: ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯ ಉಪಘಟಕವಾದ ಬೀದಿ ವ್ಯಾಪಾರಸ್ಥರ ಬೆಂಬಲ ಘಟಕದಡಿ 2014-15 ರಿಂದ 2018-19 ನೇ ಸಾಲಿನವರೆಗೆ ಸರ್ವೆಯಿಂದ ಗುರುತಿಸಿ ಸಿದ್ಧಪಡಿಸಿರುವ 195 ಬೀದಿ ಬದಿ ವ್ಯಾಪಾರಿಗಳ ತಾತ್ಕಾಲಿಕ ಮತದಾರರ ಪಟ್ಟಿಯನ್ನು ಭಟ್ಕಳ ಪುರಸಭೆ ಕಛೇರಿಯ ನಾಮಫಲಕದಲ್ಲಿ ಪ್ರಕಟಿಸಲಾಗಿರುತ್ತದೆ.

ಮತದಾರರ ಪಟ್ಟಿ ಬಗ್ಗೆ ಬೀದಿ ಬದಿ ವ್ಯಾಪಾರಿಗಳು ತಮ್ಮ ಆಕ್ಷೇಪಣೆಗಳೇನಾದರೂ ಸೆಪ್ಟೆಂಬರ  20 ರೊಳಗಾಗಿ ತಮ್ಮಲ್ಲಿರುವ ದಾಖಲೆಗಳೊಂದಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಪುರಸಭಾ ಕಛೇರಿಗೆ ಸಲ್ಲಿಸಲು ಸೂಚಿಸಿಲಾಗಿದೆ. 

ತಡವಾಗಿ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಹಾಗೂ ಸೆ. 23 ರಂದು ಅಂತಿಮವಾಗಿ ಬೀದಿ ಬದಿ ವ್ಯಾಪಾರಿಗಳ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

Read These Next

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...