ಸಂತೆ ಮಾರುಕಟ್ಟೆಯಲ್ಲಿ ಕೋವಿಡ್-19 ನಿಯಮ ಪಾಲನೆಗೆ ಸೂಚನೆ:ಮಾಸ್ಕ ಧರಿಸದೇ ಇರುವವರಿಗೆ ದಂಡ

Source: S.O. News Service | By MV Bhatkal | Published on 18th April 2021, 7:26 PM | Coastal News | Don't Miss |

ಭಟ್ಕಳ: ನಗರದಲ್ಲಿ ನಡೆಯುತ್ತಿರುವ ವಾರದ ಸಂತೆಯಲ್ಲಿ ಕೋವಿಡ್-19 ನಿಯಮವನ್ನು ಉಲ್ಲಂಘನೆ ಮಾಡಿರುವ ಹಾಗೂ ಮಾಸ್ಕ ಧರಿಸದೇ ಇರುವವರಿಗೆ ಪುರಸಭೆಯ ವತಿಯಿಂದ ಪರಿಶೀಲಿಸಿ ದಂಢ ವಿಧಿಸಲಾಯಿತು.  ಬೆಳಿಗ್ಗೆಯಿಂದಲೇ ಸಂತೆ ಮಾರುಕಟ್ಟೆಯಲ್ಲಿ ಬೀಡು ಬಿಟ್ಟಿದ್ದ ಪುರಸಭಾ ಮುಖ್ಯಾಧಿಕಾರಿ ದೇವರಾಜು ಹಾಗೂ ಜಾಲಿ ಪಟ್ಟಣ ಪಂಚಾಯತ್ ಮುಖ್ಯಾದಿಕಾರಿ ಅಜಯ್ ಭಂಡಾರ್‍ಕರ್ ಮಾಸ್ಕ್ ಧರಿಸದೇ ಇರುವ ಸುಮಾರು 68 ಜನರಿಗೆ ದಂಡ ವಿಧಿಸಿದ್ದು ಇವರಲ್ಲಿ 46 ಜನರಿಗೆ ಪುರಸಭೆ ಹಾಗೂ 22 ಜನರಿಗೆ ಜಾಲಿ ಪಟ್ಟಣ ಪಂಚಾಯತ್ ವತಿಯಿಂದ ತಲಾ 100 ರೂಪಾಯಿ ದಂಡ ವಿಧಿಸಲಾಯಿತು. 
ಕಾರ್ಯಾಚರಣೆಯಲ್ಲಿ ಆರೋಗ್ಯ ನಿರೀಕ್ಷಕ ವಿನಾಯಕ ನಾಯ್ಕ, ಕಚೇರಿ ಸಿಬ್ಬಂದಿ ಇಸ್ಮಾಯಿಲ್ ಗುಬ್ಬಿ, ಅನ್ವರ್ ಬಾಳೂರ, ಪೌರಕಾರ್ಮಿಕರಾದ ಸತೀಶ ಕೃಷ್ಣ, ಕೃಷ್ಣಾ ಅಣ್ಣಾಮಲೈ, ಮುರುಘ, ನಾಗರಾಜ, ವಾಹನ ಚಾಲಕ ಶಂಕರ ನಾಯ್ಕ, ಸಿಬ್ಬಂದಿ ಸಣ್ಣುಗೊಂಡ, ರವಿಚಂದ್ರ ಮುಂತಾದವರು ಭಾಗವಹಿಸಿದ್ದರು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...