ಬೈಕ್ ಮತ್ತು ಟೆಂಪೋ ನಡುವೆ ಭೀಕರ ಅಪಘಾತ:ಇಬ್ಬರು ಸಾವು ಓರ್ವನ ಸ್ಥಿತಿ ಗಂಭೀರ

Source: so news | By MV Bhatkal | Published on 3rd June 2019, 12:23 AM | Coastal News | Don't Miss |


ಭಟ್ಕಳ:ಇಲ್ಲಿನ ತೆರ್ನಮಕ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಚರ್ಚ್ ಕ್ರಾಸ್ ಬಳಿ ಐ.ಆರ್.ಬಿ ಯ ಅಪಾಯಕಾರಿ ತಿರುವಿನಿಂದಾಗಿ ಬೈಕ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು. ಬೈಕನಲ್ಲಿದ್ದ ಮೂವರಲ್ಲಿ ಇಬ್ಬರ ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವನ ಸ್ಥಿತಿ ಗಂಭೀರವಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ವ್ಯಕ್ತಿ ಕೃಷ್ಣ ಮಂಜುನಾಥ ನಾಯ್ಕ (60) ಬೆಂಗ್ರೆ ಪಂಚಾಯತನ ಸಣಬಾವಿ ನಿವಾಸಿಯಾಗಿದ್ದು ಮೀನುಗಾರಿಕೆ ವೃತ್ತಿ ಮಾಡುತ್ತಿದ್ದು 25 ವರ್ಷದಿಂದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿದ್ದರು ಹಾಗೂ ಸಣ್ಣಬಾವಿ ಬೆಂಗ್ರೆ ಪಂಚಾಯತ  ಮಾಜಿ ಉಪಾಧ್ಯಕ್ಷರಾಗಿ ಕೂಡ ಕೆಲಸ ನಿರ್ವಹಿಸಿದ್ದರು. ಇನ್ನೋರ್ವ ಮೃತ ವ್ಯಕ್ತಿ ಗಣೇಶ್ ನಾರಾಯಣ ನಾಯ್ಕ (40)  ಹಾಗ  ಕೃಷ್ಣ ಬೈರ ನಾಯ್ಕ (35) ಗಂಭೀರವಾಗಿ ಗಾಯಕೊಂಡಿದ್ದಾರೆಂದು ತಿಳಿದು ಬಂದಿದ್ದೆ ಮೂವರು ಬೈಕ ಸವಾರರು ಬಸ್ತಿಯಲ್ಲಿನ ಮದುವೆಯ ಬೀಗರ ಊಟ ಮುಗಿಸಿಕೊಂಡು ಬಸ್ತಿಯಿಂದ ಸಣಬಾವಿ ಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಭಟ್ಕಳದ ಮುಂಡಳ್ಳಿಯ ಇನ್ನೊಂದು ಮದುವೆಯ ಬೀಗರ ಊಟಕ್ಕೆ  ಜನರನ್ನು ಬಿಟ್ಟು ಮುರುಡೇಶ್ವರದ ಕಡೆಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಮಾಡಿದ ಅಪಾಯಕಾರಿ ತಿರುವಿನಿಂದಾಗಿ ಮುಖಾಮುಖಿ ಡಿಕ್ಕಿ ಸಂಬಸಿದ್ದು. ಇಬ್ಬರ ಸ್ಥಳದಲ್ಲೇ ಮೃತಪಟ್ಟಿದ್ದು ಓರ್ವನ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು  ಲಕ್ಷಣ ಜಟ್ಟ ನಾಯ್ಕ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...