ಕರೋನಾ ಲಾಕ್‌ಡೌನ್ ದೃಷ್ಟಿಯಿಂದ ತನ್ನ ಬಾಡಿಗೆದಾರರಿಗೆ ಎರಡು ತಿಂಗಳ ಬಾಡಿಗೆ ಮನ್ನಾ ಘೋಷಣೆ ಮಾಡಿದ ಭಟ್ಕಳ ತಂಜಿಮ್ ಸಂಸ್ಥೆ‌.

Source: SO News | By Laxmi Tanaya | Published on 15th June 2021, 7:26 AM | Coastal News | Don't Miss |

ಭಟ್ಕಳ - ಕರೋನಾ ಲಾಕ್‌ಡೌನ್‌ನಿಂದಾಗಿ ಜನರು ಎದುರಿಸುತ್ತಿರುವ ಯಾತನೆ ಮತ್ತು ಆರ್ಥಿಕ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಕಟ್ಟಡಗಳಲ್ಲಿನ ಎಲ್ಲಾ ಬಾಡಿಗೆ ಅಂಗಡಿಗಳ ಎರಡು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಲು ಮಜ್ಲಿಸೇ ಇಸ್ಲಾಹೋ ತಂಜೀಮ್ ಘೋಷಿಸಿದೆ.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೌಲ್ವಿ ಅಬ್ದುಲ್ ರಕೀಬ್ ಎಂ.ಜೆ. ನದ್ವಿ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷವೂ ಜನರು ಎರಡು ತಿಂಗಳಿನಿಂದ ಕರೋನಾ ಲಾಕ್‌ಡೌನ್‌ನೊಂದಿಗೆ ಹೋರಾಡುತ್ತಿದ್ದಾರೆ. ಭಟ್ಕಳದಲ್ಲಿ ವ್ಯಾಪಾರ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ, ಜನರು ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಭಟ್ಕಳದಲ್ಲಿ ಜವಳಿ ಮತ್ತು ಸಿದ್ಧ ಉಡುಪು ಅಂಗಡಿಗಳು ರಂಜಾನ್ ತಿಂಗಳಲ್ಲಿ ಸದಾ ಗದ್ದಲದಿಂದ ಕೂಡಿರುತಿತ್ತು. ಇಡೀ ವರ್ಷದ ಖರ್ಚುಗಳನ್ನು ಆ ಒಂದು ತಿಂಗಳ ವ್ಯವಹಾರದಿಂದ ಭರಿಸಲು ಸಾಧ್ಯವಾಗುತಿತ್ತು ಎಂದು  ಅಬ್ದುಲ್ ರಕೀಬ್ ಎಂ.ಜೆ. ಹೇಳಿದ್ದರು. ಆದರೆ ಕಳೆದ ವರ್ಷದಂತೆ, ಕರೋನಾದ ಲಾಕ್‌ಡೌನ್ ವೇಳೆ ರಂಜಾನ್‌ ಬಂದಿತ್ತು. ಅಂದಿನಿಂದಲೂ ಅಂಗಡಿಗಳನ್ನು ಮುಚ್ಚಲಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ತಂಜೀಮ್ ಮಂಡಳಿಯು ತನ್ನ ಅಂಗಡಿಗಳ ಬಾಡಿಗೆಯನ್ನು ಎರಡು ತಿಂಗಳು (ಮೇ ಮತ್ತು ಜೂನ್) ಮನ್ನಾ ಮಾಡಲು ನಿರ್ಧರಿಸಿದೆ.

ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡು ತಿಂಗಳ ಕಾಲ ಬಾಡಿಗೆಯನ್ನು ಮನ್ನಾ ಮಾಡುವಂತೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭಟ್ಕಳದ ಇತರ ಅಂಗಡಿ ಮಾಲೀಕರು ಮತ್ತು ಆಸ್ತಿ ಮಾಲೀಕರಿಗೆ ಮನವಿ ಮಾಡಿದರು.

ಭವಿಷ್ಯದ ವ್ಯವಹಾರದ ಅನಿಶ್ಚಿತತೆಯ ದೃಷ್ಟಿಯಿಂದ, ಹೆಚ್ಚಿನ ಬಾಡಿಗೆ ಹೊಂದಿರುವ ಅಂಗಡಿಗಳ ಬಾಡಿಗೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು ಎಂದು ಅವರು ವಿನಂತಿಸಿದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...