ಭಟ್ಕಳ: ತಲಾಂದ ಗುಡ್ಡದಲ್ಲಿ ಮಹಿಳೆಯ ಸಾವು ಪ್ರಕರಣ; ಇಬ್ಬರ ಬಂಧನ

Source: SO NEWS | By MV Bhatkal | Published on 27th May 2022, 12:25 AM | Coastal News |

ಭಟ್ಕಳ: ಕಳೆದ ಮೇ.24ರಂದು ತಾಲೂಕಿನ ತಲಾಂದ ಗುಡ್ಡದ ಮೇಲೆ ಅನುಮಾನಾಸ್ಪದವಾಗಿ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ದೊರೆತ ಮಹಿಳೆಯ ಕೊಲೆಗಾರರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವೀಯಾಗಿದ್ದು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. 

ಆರೋಪಿಯನ್ನು ಸಾಗರದ ಕಟ್ಟಿನಕಾರ ನಿವಾಸಿ ನಾಗಪ್ಪ ತಂದೆ ನಾರಾಯಣ ನಾಯ್ಕ (೪೦) ಹಾಗೂ ತಲಾಂದ ನಿವಾಸಿ ಮಾಸ್ತಪ್ಪ ತಂದೆ ಮಂಜಪ್ಪ ನಾಯ್ಕ (೬೫) ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಅರೋಪಿಗಳನ್ನು ಪತ್ತೆ ಮಾಡಲಾಗಿದ್ದು ಮಹಿಳೆಯ ಗುರುತು ಪರಿಚಯ ಮಾತ್ರ ಪತ್ತೆಯಾಗಿಲ್ಲ ಎನ್ನಲಾಗಿದೆ.

ಮೇ.21ರಂದು ರಾತ್ರಿ 7.30ರ ಸುಮಾರಿಗೆ  ಮಾಸ್ತಪ್ಪ ಮಂಜಪ್‍ಪ ನಾಯ್ಕ ಇವರ ಮನೆಗೆ ಆತನ ಅಣ್ಣನ ಮಗ ನಾಗಪ್ಪ ನಾರಾಯಣ ನಾಯ್ಕ ಈತನು ಭಾಡಿಗೆ ಅಟೋದಲ್ಲಿ ಓರ್ವ ಮಹಿಳೆಯನ್ನು ಕರೆದುಕೊಂಡು ಬಂದಿದ್ದು ಯವುದೋ ಉದ್ದೇಶಕ್ಕೆ ರಾತ್ರಿ ಆಕೆಯನ್ನು ಕೊಲೆ ಮಾಡಿ ಇಬ್ಬರೂ ಸೇರಿ ಬೆಳಗಾಗುವುದರೊಳಗಾಗಿ ಮಹಿಳೆಯ ಶವವನ್ನು ನಾಶಪಡಿಸುವ ಉದ್ದೇಶದಿಂದ ಹತ್ತಿರದ ಮಣ್ಣಿನ ಗುಡ್ಡದ ಮೇಲೆ ಒಯ್ದು ಇಟ್ಟಿದ್ದು ಮೇ.24ರಂದು ಬೆಳಿಗ್ಗೆ ಆ ಭಾಗದಲ್ಲಿ ವಾಸನೆ ಬರುತ್ತಿರುವುದರಿಂದ ಪತ್ತೆಯಾಗಿತ್ತು.

ಈ ಬಾಬ್ತು ತಲಾಂದ ಗ್ರಾಮದ ಕೊಲ್ಲಿಮುಲ್ಲೆ ನಿವಾಸಿ ಗಣಪತಿ ರಾಮಚಂದ್ರ ನಾಯ್ಕ ಎನ್ನುವವರು ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಆಋಓಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ   ಗ್ರಾಮೀಣ ಸರ್ಕಲ್ ಇನ್ಸಪೆಕ್ಟರ್ ಮಹಾಬಲೇಶ್ವರ ಎಸ್.ಎನ್.,  ಪಿ.ಎಸ್.ಐ. ಭರತಕುಮಾರ್ ವಿ., ರತ್ನಾ ಎಸ್.ಕೆ., ಸಿಬ್ಬಂದಿಗಳಾದ ವಿನಾಯಕ ಪಾಟೀಲ, ಮಂಜುನಾಥ ಗೊಂಡ, ದೀಪಕ್ ಎಸ್. ನಾಯ್ಕ, ಮಹೇಶ ಪಟಗಾರ, ರಾಜು ಗೌಡ, ವಿನಾಯಕ ನಾಯ್ಕ, ರೇಣುಕಾ ಹೊನ್ನಿಕೋಳ, ಪ್ರೊಬೆಷನರಿ ಸಬ್ ಇನ್ಸಪೆಕ್ಟರ್ ಸುನಿಲ್ ಬಿ.ವೈ., ಮಂಜುನಾಥ ಪಾಟೀಲ್ ಭಾಗವಹಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಪನ್ನೇಕರ್, ಹೆಚ್ಚುವರಿ ಎಸ್.ಪಿ. ಬದರೀನಾಥ, ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ ತನಿಖೆಗೆ ಮಾರ್ಗದರ್ಶನ ನೀಡಿದ್ದರು.

Read These Next