ರುಧ್ರಭೂಮಿಯಲ್ಲಿ ಬೆಂಕಿ ;ತಪ್ಪಿದ ಭಾರಿ ಅನಾಹುತ

Source: S O News service | By Staff Correspondent | Published on 17th February 2017, 12:07 AM | Coastal News | Incidents | Don't Miss |

ಭಟ್ಕಳ ತಾಲೂಕಿನ ಮಣ್ಕುಳಿಯ ಇಂಡಿಯನ್ ಓಯಿಲ್ ಪೆಟ್ರೋಲ್ ಬಂಕ್ ಹಿಂಬದಿಯಲ್ಲಿನ ೧ ಎಕರೆಗೂ ಅಧಿಕ ವಿಸ್ತೀರ್ಣದ ಹಿಂದೂ ರುಧ್ರಭೂಮಿಯಲ್ಲಿ ಗುರುವಾರದಂದು ಮಧ್ಯಾಹ್ನ ಆಕಸ್ಮಾತ್ ಬೆಂಕಿ ತಗುಲಿದ್ದು, ಆಗಬಹುದಾದ ದೊಡ್ಡ ಅನಾಹುತ ಸ್ವಲ್ಪದರಲ್ಲೇ ತಪ್ಪಿತ್ತು.

ತಾಲೂಕಿನ ಮಣ್ಕುಳಿಯ ಹಿಂದೂ ರುಧ್ರಭೂಮಿಯಲ್ಲಿ ಗುರುವಾರದಂದು ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿದ್ದು, ರುದ್ರಭೂಮಿಯಲ್ಲಿರುವ ಗಿಡ ಮರಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿಯೂ ಸಂಪೂರ್ಣ ಸ್ಮಶಾನವನ್ನು ಆವರಿಸುತ್ತಾ, ಇಲ್ಲಿನ ಪೆಟ್ರೋಲ್ ಬಂಕ್ ಬಳಿಯ ತೆಂಗಿನ ಮರಕ್ಕೂ ತಗುಲಿತ್ತು. ಸ್ಥಳಕ್ಕೆ ಭಟ್ಕಳ ಶಹರ ಪೋಲೀಸ್ ಪೋಲೀಸ್‌ರು ಧಾವಿಸಿದ್ದು, ಅಗ್ನಿಶಾಮಕ ದಳದರನ್ನು ಸ್ಥಳಕ್ಕೆ ಕರೆಯಿಸಿ ಬೆಂಕಿಯನ್ನು ನಂದಿಸಲಾಯಿತು. ಸಂಧರ್ಭಕ್ಕೆ ಸರಿಯಾಗಿ ಬೆಂಕಿ ನಂದಿಸದಿದ್ದರೆ ಪೆಟ್ರೋಲ್ ಬಂಕ್‌ನ್ನು ಬೆಂಕಿ ಆವರಿಸಿಕೊಂಡು ದೊಡ್ಡ ಅವಾಹುತವೇ ಸಂಭವಿಸುತ್ತಿತ್ತು. ಇದೇ ಮಾರ್ಗವಾಗಿ ತೆರಳುವ ಯಾರೋ ದಾರಿಹೋಕರು ಸೇದಿ ಎಸೆದ ಬೀಡಿ ಅಥವಾ ಸಿಗರೇಟ ಈ ಅವಗಢಕ್ಕೆ ಕಾರಣ ಎಂದು ಪೋಲೀಸರಿಂದ ತಿಳಿದುಬಂದಿದೆ. ಹಾಗೆಯೇ ತಾಲೂಕಿನಲ್ಲಿ ನಿನ್ನೆ ರಾತ್ರಿಯಿಂದ ಆರಂಭವಾದ ಸಣ್ಣ ಪ್ರಮಾಣದ ಸುಳಿಗಾಳಿಗಳಿಯೂ ಕಾಣಿಸಿಕೊಂಡ ಬೆಂಕಿಯ ಪ್ರಮಾಣ ಹೆಚ್ಚಾಗಲು ಕಾರಣವಾಯಿತು ಎನ್ನಲಾಗಿದೆ. ಸ್ಥಳಕ್ಕೆ ಭಟ್ಕಳ ಶಹರ ಪೋಲೀಸ್ ಠಾಣೆ ಪಿ‌ಎಸೈ ಕುಡಗುಂಟಿ, ಎ‌ಎಸೈ ಪರಮೇಶ್ವರ ಹಾಗೂ ಪೋಲೀಸ್ ಸಿಬ್ಬಂದಿಗಳು ಇದ್ದರು. 

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...