ಎಸ್ಸೆಸ್ಸೆಲ್ಸಿಯಲ್ಲಿ ಭಟ್ಕಳಕ್ಕೆ ಶೇ.85.91 ಫಲಿತಾಂಶ; ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಹರ್ಷಿತಾ ಪ್ರಥಮ

Source: S O News service | By I.G. Bhatkali | Published on 20th May 2022, 8:05 PM | Coastal News |

ಭಟ್ಕಳ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, 1037 ಗಂಡು ಹಾಗೂ 135 ಹೆಣ್ಣು ಸೇರಿದಂತೆ ಪರೀಕ್ಷೆ ಬರೆದ ಒಟ್ಟೂ 2172 ವಿದ್ಯಾರ್ಥಿಗಳ ಪೈಕಿ 1866 (789 ಗಂಡು ಹಾಗೂ 1077 ಹೆಣ್ಣು) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹರ್ಷಿಳಾ ವಿಷ್ಣು ನಾಯ್ಕ 624 ಅಂಕಗಳೊಂದಿಗೆ' (99,84) ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಇದೇ ಶಾಲೆಯ ಜೀವಿತಾ ಮಂಜುನಾಥ ನಾಯ್ಕ, 623 ಅಂಕಗಳೊಂದಿಗೆ ತಾಲೂಕಿಗೆ - ದ್ವಿತೀರಂ ಮುರುಡೇಶ್ವರ" ನ್ಯೂ ಇಂಗ್ಲೀಷ್ ನ್ಯಾಶನಲ್ ಹೈ ಸ್ಕೂಲ್‌ನ ಇಫಾ ಜುಕ್ಕಾ ಹಾಗೂ ಆರ್‌.ಎನ್.ಶೆಟ್ಟಿ ವಿದ್ಯಾನಿಕೇತನದ ಆಕಾಶ ದಿನೇಶ ಶೇಟ್ ತಲಾ 622 ಅಂಕಗಳೊಂದಿಗೆ (99.520) ತೃತೀಯ, ಆಂಗ್ಲಮಾಧ್ಯಮ ಪ್ರೌಢಶಾಲೆಯ ನಯನಾ ಶ್ರೀಧರ ಪೈ 621 ಅಂಕಗಳೊಂದಿಗೆ ಚತುರ್ಥ, ಸರಕಾರಿ ಪ್ರೌಢಶಾಲೆ ಬೆಳಕೆಯ ಸುಜನ್ ಕೃಷ್ಣ ನಾಯ್ಕ 620 ಅಂಕಗಳೊಂದಿಗೆ 5ನೇ ಸ್ಥಾನವನ್ನು ಪಡೆದಿದ್ದಾರೆ.

ಆರ್.ಎನ್.ಶೆಟ್ಟಿ ವಿದ್ಯಾನಿಕೇತನದ ಎಸ್‌.ಸಂದೇಶ (619), ಯಶಸ್ವಿನಿ ಪ್ರಕಾಶ ನಾಯ್ಕ (619), ವಿದ್ಯಾಭಾರತಿ .ಆಂಗ್ಲಮಾಧ್ಯಮ ಪ್ರೌಢಶಾಲೆಯ ರಶ್ಮಿ ರಾಜಾರಾಮ ಪ್ರಭು (619), ಆರ್.ಎನ್.ಶೆಟ್ಟಿ ವಿದ್ಯಾನಿಕೇತನ ಎಸ್.ಯಶಸ್ವಿ (618), ಶ್ರೀವಲ್ಲಿ ಪ್ರೌಢಶಾಲೆಯ ಹರ್ಷಿತಾ ಮಾಸ್ತಿ ನಾಯ್ಕ ( 18), ಆನಂದಾಶ್ರಮ ಕಾನ್ವೆಂಟನ ಮಹ್ಮದ್ ನೂಹ್ ಅಬುಹುಸೇನಾ'( 617), ಶರೋನ್ ರುಜಾರಿತೋ ಡಯಾಸ್ (617), ಆರ್.ಎನ್.ಶೆಟ್ಟಿ ವಿದ್ಯಾನಿಕೇತನದ ಅಂಜಿತ್ ಗಣೇಶ ಹೆಗಡೆ (616), ಸನ್ನಿಧಿ ನವೀನ್ ಕಾಮತ್ (616), ಸಿದ್ಧಾರ್ಥ ಆಂಗ್ಲ ಮಾಧ್ಯಮ ಶಾಲೆಯ ದಿಸಾ ಬಸವರಾಜ್ ಮೂಲಿಮನೆ (616), ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹರ್ಷಿತಾ ಮಾಸ್ತಿ ಗೊಂಡ (616), ಕರ್ನಾಟಕ ಪಬ್ಲಿಕ್ ಸ್ಕೂಲ್ ತೆರ್ನಮಕ್ಕೆ ಇದರ ಮೌಲ್ಯ ನಾಗೇಶ ನಾಯ್ಕ (616), ಆನಂದಾಶ್ರಮ ಕಾನ್ವೆಂಟಿನ ಸುಮಿತ್ರಾ ದಿನೇಶ' ನಾಯಕ (615) ನಂತರದ ಸ್ಥಾನವನ್ನು ಗಿಟ್ಟಿಸಿ ಕೊಂಡಿದ್ದಾರೆ.

ಕನ್ನಡ ಮಾಧ್ಯಮಕ್ಕೆ ಸುಜನ್ ಪ್ರಥಮ್: ಕನ್ನಡ ಮಾಧ್ಯಮದಲ್ಲಿ ಬೆಳಕೆ ಸರಕಾರಿ ಪ್ರೌಢಶಾಲೆಯ ಸುಜನ್ ಕೃಷ್ಣ ನಾಯ್ಕ (620) ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದರೆ, ಉರ್ದು ಮಾಧ್ಯಮದಲ್ಲಿ ನವಾಯತ್ ಕಾಲೋನಿ ಸರಕಾರಿ ಪ್ರೌಢಶಾಲೆಯ ಸಾನಿಯ (579) ಮೊದಲ ಸ್ಥಾನ ಪಡೆದಿದ್ದಾರೆ.

Read These Next