ಅರಬ್ಬರು ಮೊದಲು ಕಾಲಿಟ್ಟ, ಟಿಪ್ಪು ಒಪ್ಪಿದ ಚೆನ್ನಾಭೈರಾದೇವಿಯ ನೆಲವೀಗ ಕೊಳಕು ತುಂಬಿದ ಪ್ರದೇಶ 

Source: S O New Service | By V. D. Bhatkal | Published on 30th August 2019, 8:25 PM | Coastal News | Special Report |

ಭಟ್ಕಳ: ತಾಲೂಕಿನ ಶರಾಬಿ ಹೊಳೆಯ ದಂಡೆಯ ಈ ಪ್ರದೇಶಕ್ಕೆ ದೊಡ್ಡದೊಂದು ಇತಿಹಾಸ ಇದೆ. ವ್ಯಾಪಾರ ವಹಿವಾಟು ಮಾಡಿಕೊಂಡು ಬಂದು ಅರಬ್ಬರು ಮೊದಲು ಕಾಲಿಟ್ಟ ಈ ಪ್ರದೇಶ ಈಗ ಮನುಷ್ಯ ಕಾಲಿಡಲಾಗದ ಕೊಳಕು ಪ್ರದೇಶವಾಗಿ ಪರಿಣಮಿಸಿದೆ. ಆದರೆ ಅದೇ ಅರಬ್ಬರ ಸಂತತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಇಲ್ಲಿನ ಬಹುಸಂಖ್ಯಾತ ಪಟ್ಟಣ ವಾಸಿಗಳು, ಅವರ ನಾಯಕರು ಕಣ್ಣಿದ್ದೂ ಕುರುಡರಂತಾಗಿದ್ದಾರೆ.

ಶರಾಬಿ ನದಿ ದಂಡೆಯ ಇತಿಹಾಸವನ್ನು ಗಮನಿಸಿದರೆ ಮೈ ಮನ ರೋಮಾಂಚನಗೊಳ್ಳುತ್ತದೆ. ಅರಬ್ಬರು ಇದೇ ನದಿ ದಂಡೆಯ ಮೇಲೆ ಬಟ್ಟೆ, ಬರೆಗಳನ್ನು ಇಟ್ಟು ವ್ಯಾಪಾರ ಮಾಡಿದ್ದಾರೆ. ಅಲ್ಲಿಯೇ ಪಕ್ಕದಲ್ಲಿ ಹಾಸು ಕಲ್ಲುಗಳನ್ನು ಇಟ್ಟು ನಮಾಜು ಮಾಡಿದ್ದಾರೆ. ನಂತರದ ದಿನಗಳಲ್ಲಿ ರಾಣಿ ಚೆನ್ನಾಭೈರಾದೇವಿಯೂ ಕಾಳು ಮೆಣಸನ್ನು ತಂದು ಇದೇ ಜಾಗದಲ್ಲಿ ಅರಬ್ಬರೊಂದಿಗೆ ವ್ಯಾಪಾರ ನಡೆಸಿದ್ದಾಳೆ. ಅಷ್ಟೇ ಅಲ್ಲ, ಮೈಸೂರನ್ನು ಆಳಿದ ಟಿಪ್ಪು ಇದೇ ಜಾಗದಿಂದ ಅರಬ್ಬರು ತಂದ ಕುದುರೆಗಳನ್ನು ಖರೀದಿಸಿ ಮೈಸೂರಿಗೆ ಪ್ರಯಾಣಿಸಿರುವುದು ಇತಿಹಾಸದಲ್ಲಿ ಉಳಿದುಕೊಂಡಿದೆ. ಆದರೆ ರಾಜ, ರಾಣಿ ಓಡಾಡಿದ, ಅರಬ್ಬರಿಗೆ ನೆಲೆ ಕೊಟ್ಟ ಈ ಹೊಳೆ, ಹೊಳೆಯ ದಂಡೆ ಇದೀಗ ಯಾರೂ ಕಾಲಿಡಲಾಗದ ಕೊಳಕು ಪ್ರದೇಶವಾಗಿದೆ. ಅರಬ್ಬರ ಕಲ್ಲುಗಳು ಅನಾಥವಾಗಿ ಬಿದ್ದುಕೊಂಡಿವೆ. ಹೊಳೆಯ ದಂಡೆಯ ಕಲ್ಲುಗಳು ಕೆಲವಷ್ಟು ಹೊಳೆಗೆ ಜಾರಿ ಹೋದರೆ, ಇನ್ನು ಕೆಲವು ಬೀಳುವ ಹಂತದಲ್ಲಿವೆ. ಹೊಳೆಯ ತುಂಬ ಹೂಳು ತುಂಬಿಕೊಂಡು ಮಳೆಗಾಲದಲ್ಲಿ ಸಂಕಷ್ಟ ತಂದೊಡ್ಡುವ ಪ್ರದೇಶವಾಗಿ ಬದಲಾಗಿದೆ. ಸಾಲದೆಂಬಂತೆ ಊರು ಕೇರಿಯ ಶೌಚಾಲಯಗಳ ನೀರನ್ನೆಲ್ಲ ನೇರವಾಗಿ ಈ ಹೊಳೆಗೆ ಬಿಡಲಾಗುತ್ತಿದೆ. ಅಲ್ಲಿಯೇ ಸೇತುವೆಯ ಪಕ್ಕದಲ್ಲಿ ನಿರ್ಮಿಸಲಾದ ತ್ಯಾಜ್ಯ ವಿಲೇವಾರಿ ಘಟಕದ ನೀರು ಸಹ ಆಗಾಗ್ಗೆ ಹೊಳೆಗೆ ಹರಿದು ಹೋಗುತ್ತಲೇ ಇದೆ. ಪರಿಣಾಮವಾಗಿ ಯಾವುದೇ ಮನುಷ್ಯ ಇಲ್ಲಿ ಕಾಲಿಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿಯೇ ಅಕ್ಕಪಕ್ಕದಲ್ಲಿ ಮನೆ ಕಟ್ಟಿಕೊಂಡವರು ಆತಂಕದಿಂದಲೇ ದಿನದೂಡುತ್ತಿದ್ದಾರೆ. ಈಜು ಹುಚ್ಚಿನ ಹುಡುಗರು ಈ ಭಾಗದಲ್ಲಿ ನೀರಿಗೆ ಕಾಲಿಡದೇ ಕೆಲವು ವರ್ಷಗಳೇ ಉರುಳಿ ಹೋಗಿವೆ. ಅಲ್ಲಿನ ಪರಿಸ್ಥಿತಿ ಅದೆಷ್ಟು ಹದಗೆಟ್ಟು ಹೋಗಿದೆ ಎಂದರೆ ಮೀನಿಗೆ ಗಾಳ ಹಾಕಲೂ ಜನರು ಹೇಸಿಗೆ ಪಟ್ಟುಕೊಳ್ಳುತ್ತಿದ್ದಾರೆ. 

ಪ್ರವಾಸಿ ತಾಣವಾಗಲು ಯೋಗ್ಯ: 
 ಐತಿಹಾಸಿಕ ಮಹತ್ವ ಹೊಂದಿರುವ ಈ ಶರಾಬಿ ನದಿ ದಂಡೆಯನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಅವಕಾಶ ಇದೆ. ಹೊಳೆಯನ್ನು ಶುಚಿಗೊಳಿಸಿ ದೋಣಿ ತೇಲಾಡಿದರೆ ಪ್ರವಾಸಿಗರು ಬಂದೇ ಬರುತ್ತಾರೆ. ದಂಡೆಯ ಉದ್ಧಕ್ಕೂ ಸರಿಯಾದ ಗೋಡೆ ನಿರ್ಮಿಸಿ, ವಿದ್ಯುದ್ದೀಪ ಅಳವಡಿಸಿದರೆ ಆಗಲೂ ಒಂದಷ್ಟು ಜನರು ಅಲ್ಲಿ ಬಂದು ವಿಶ್ರಾಂತಿ ಪಡೆಯಬಹುದು. ವಿಶೇಷ ಎಂದರೆ ಈ ಪ್ರದೇಶ ಭಟ್ಕಳ ಪುರಸಭಾ ವ್ಯಾಪ್ತಿಗೆ ಒಳಪಡುತ್ತದೆ. ಪುರಸಭಾ ವ್ಯಾಪ್ತಿಯಲ್ಲಿ ಬರುವ ಹೆಚ್ಚಿನ ಜನರು ತಾವು ಅರಬ್ ಸಂತತಿಯವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಲ್ಲಿನ ಸುಲ್ತಾನ್ ಸ್ಟ್ರೀಟ್ ಹುಟ್ಟಿಗೆ ಕಾರಣನಾದ ಟಿಪ್ಪು ಸುಲ್ತಾನನ ಬಗ್ಗೆಯೂ ಇವರಿಗೆ ಹೆಚ್ಚಿನ ಒಲವಿದೆ. ಪುರಸಭಾ ಆಡಳಿತವನ್ನು ಕಳೆದ ಹಲವು ವರ್ಷಗಳಿಂದ ಇಲ್ಲಿನ ಮಜ್ಲಿಸೇ ಇಸ್ಲಾ ವ ತಂಜೀಮ್‍ಗೆ ನಿಷ್ಠೆಯನ್ನು ಹೊಂದಿದವರೇ ನಿಭಾಯಿಸುತ್ತ ಬಂದಿದ್ದಾರೆ. ಆದರೆ ತಮ್ಮದೇ ಪೂರ್ವಜರಿಗೆ ನೆಲೆ ಕೊಟ್ಟ ಈ ನೆಲವನ್ನು ಅಭಿವೃದ್ಧಿಪಡಿಸುವ ಕಾಳಜಿ ಯಾರಿಗೂ ಇದ್ದಂತೆ ಕಾಣಿಸುತ್ತಿಲ್ಲ. ಭಟ್ಕಳದ ಬಗ್ಗೆ ತರೇವಾರಿ ಭಾಷಣಗಳು ಶರಾಬಿ ಹೊಳೆಯಲ್ಲಿ ತೇಲಿ ಹೋಗುತ್ತಲೇ ಇವೆ!

 

Read These Next

ಲಾಕ್ ಡೌನ್ ಎಫೆಕ್ಟ್ ಕಂಪು ಕಳೆದುಕೊಳ್ಳುತ್ತಿರುವ ಭಟ್ಕಳ ಮಲ್ಲಿಗೆ; ಕಂಗಲಾದ ರೈತ ಕುಟುಂಬ

ಭಟ್ಕಳ ಮಲ್ಲಿಗೆ ದೇಶ ದಲ್ಲಷ್ಟೆ ಅಲ್ಲದೇ ವಿದೇಶಗಳಲ್ಲೂ ಭಾರಿ ಬೇಡಿಕೆ. ಇಲ್ಲಿನ ನವಾಯತ್ ಮುಸ್ಲಿಮರು ಭಟ್ಕಳ ಮಲ್ಲಿಗೆಯ ಕಂಪನ್ನು ...

ಅಗತ್ಯ ವಸ್ತುಗಳ ಕಿಟ್ ನೀಡಲು ಸ್ವಾಮಿಲ್ ಮಾಲಿಕರಿಗೆ ಗುತ್ತಿಗೆದಾರರಿಗೆ ಸಚಿವ ಶಿವರಾಮ ಹೆಬ್ಬಾರ ಸೂಚನೆ

ಮುಂಡಗೋಡ : ಅಟೋ ಚಾಲಕರು ಗೂಡ್ಸ್ ಚಾಲಕರು ಮತ್ತು ಹಮಾಲರು ಸೇರಿದಂತೆ ನಿರ್ಗತಿಕರಿಗೆ ವೈಯಕ್ತಿಕ 1 ಸಾವಿರ ರೂ ಸಹಾಯ ಧನ ನೀಡುವುದಾಗಿ ...

ಶುಭ ಸಮಾಚಾರ; ಕೊರೋನ ಜಯಿಸಿದ ಇಬ್ಬರು ಸೋಂಕಿನಿಂದ ಮುಕ್ತಿ; ಜಿಲ್ಲೆಯ ಕೊರೋನ ಪೀಡಿತರ ಸಂಖ್ಯೆಯಲ್ಲಿ ಇಳಿಮುಖ

ಭಟ್ಕಳ: ಉ.ಕ ಜಿಲ್ಲೆಯಲ್ಲಿ ಗಲ್ಫ್ ರಾಷ್ಟ್ರಗಳಿಂದ ಭಟ್ಕಳಕ್ಕೆ ಬಂದ ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿದ್ದ ಕೊರೋನ ಸೋಂಕು ೮ ಜನರಲ್ಲಿ ...

ಲಾಕ್ ಡೌನ್ ಎಫೆಕ್ಟ್ ಕಂಪು ಕಳೆದುಕೊಳ್ಳುತ್ತಿರುವ ಭಟ್ಕಳ ಮಲ್ಲಿಗೆ; ಕಂಗಲಾದ ರೈತ ಕುಟುಂಬ

ಭಟ್ಕಳ ಮಲ್ಲಿಗೆ ದೇಶ ದಲ್ಲಷ್ಟೆ ಅಲ್ಲದೇ ವಿದೇಶಗಳಲ್ಲೂ ಭಾರಿ ಬೇಡಿಕೆ. ಇಲ್ಲಿನ ನವಾಯತ್ ಮುಸ್ಲಿಮರು ಭಟ್ಕಳ ಮಲ್ಲಿಗೆಯ ಕಂಪನ್ನು ...

ನಿಝಾಮುದ್ದೀನ್ ಮರ್ಕಝ್ ಖಾಲಿ ಮಾಡಿಸುವಾಗ ತಬ್ಲೀಗಿಗಳು ಒಮ್ಮೆಯೂ ಕೆಟ್ಟದಾಗಿ ವರ್ತಿಸಿಲ್ಲ: ಡಾ. ಊರ್ವಿ ಶರ್ಮ

ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ದೇಶದ ವಿವಿಧೆಡೆಗೆ ಕೊರೊನ ಹರಡಿತು ಎಂಬ ಮಾಧ್ಯಮ ವರದಿಗಳ ...

ವೈದ್ಯಕೀಯ ಸಿಬ್ಬಂಧಿಗಳ ರಕ್ಷಣೆಗೆ  ಫೇಸ್ ಶೀಲ್ಡ್  ಭಟ್ಕಳದ “ಮೇಕರ್ಸ್ ಹಬ್’ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

ಭಟ್ಕಳ: ಕೊರೋನಾ ಸೋಂಕು ಜಗತ್ತಿನ ಎಲ್ಲರಿಗೂ ಜೀವಭಯದಲ್ಲಿ ಬದುಕುವಂತೆ ಮಾಡಿದೆ. ಕೊರೋನಾ ಸೋಂಕಿತರ ರಕ್ಷಣೆಗಾಗಿ ತಮ್ಮ ಜೀವದ ಹಂಗು ...

‘ಕೊರೋನಾ ವಾರಿಯರ್ಸ್’ ಗಳ ಸಹಾಯಕ್ಕೆ ಭಟ್ಕಳದ ಧೃತಿ ಸರ್ಜಿಕಲ್ ಫ್ಯಾಕ್ಟರಿ; ಮುಖಗವಚ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಾರ್ಮಿಕರು

ಭಟ್ಕಳ: ದೇಶದಲ್ಲಿ ಕೊರೋನಾ ಸೋಂಕು ಪ್ರವೇಶಿಸಿದ ನಂತರದಲ್ಲಿ ದೇಶದ ರಾಜಧಾನಿಯಿಂದ ಹಿಡಿದು ಸಣ್ಣಪುಟ್ಟ ಗ್ರಾಮಗಳಲ್ಲಿಯೂ ಕೂಡ ಮಾಸ್ಕ್ ...

‘‘ಸತ್ತವರೆಲ್ಲ ಒಂದೇ ಸಮುದಾಯದವರು’’, ಆದುದರಿಂದ ಒಂದು ಸಮುದಾಯದವರೆಲ್ಲ ಸಾಯಬೇಕೆ!?

ಬೆಂಗಳೂರು: ಇಂದು (ಶನಿವಾರ) ನಮ್ಮ ನಾಡಿನ ದಿನಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಪ್ರಕಟಿಸಿದ ‘ಕೊರೋನ ಸೋಂಕಿನಿಂದ ಸತ್ತವರೆಲ್ಲ ಒಂದೇ ...