ಭಟ್ಕಳ ರಥೋತ್ಸವಕ್ಕೆ ಮತ್ತೆ ಕೊರೊನಾ ವಿಘ್ನ; ಜಾತ್ರೆ ನಡೆಸದಂತೆ ಸೂಚನೆ; ಧಾರ್ಮಿಕ ವಿಧಿವಿಧಾನಗಳಿಗೆ ಒಪ್ಪಿಗೆ

Source: S O News service | By V. D. Bhatkal | Published on 19th April 2021, 4:32 PM | Coastal News |

ಭಟ್ಕಳ: ತಾಲೂಕಿನ ಪ್ರಸಿದ್ಧ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ರಥೋತ್ಸವ ಆಚರಣೆಗೆ ಸತತ 2ನೇ ವರ್ಷ ಕೊರೊನಾ ಸೋಂಕು ವಿಘ್ನವಾಗಿ ಕಾಣಿಸಿಕೊಂಡಿದೆ. ಏ.21ರಂದು ನಿಗದಿಯಾಗಿದ್ದ ರಥೋತ್ಸವವನ್ನು ಕೈಬಿಡುವಂತೆ ಅಧಿಕಾರಿಗಳು ಆದೇಶ ನೀಡಿದ್ದು, ದೇವಾಲಯದಲ್ಲಿ ಕೊರೊನಾ ಮಾರ್ಗಸೂಚಿ ಅನ್ವಯ ಕೇವಲ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲು ಒಪ್ಪಿಗೆ ನೀಡಲಾಗಿದೆ.

ಕೊರೊನಾ 2ನೇ ಅಲೆ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಭಟ್ಕಳದ ಪ್ರಸಿದ್ಧ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ರಥೋತ್ಸವ ಆಚರಣೆಯ ಮೇಲೆ ಕರಿ ನೆರಳು ಬಿದ್ದಿತ್ತು. ಈ ಕುರಿತು ಈ ಹಿಂದೆ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ರಥೋತ್ಸವಕ್ಕೆ ನಿರ್ಬಂಧ ಹೇರುವ ಬಗ್ಗೆ ತಿಳಿಸಲಾಗಿತ್ತಾದರೂ, 500 ಜನರಿಗೆ

ರಥಗಳ ಶೃಂಗಾರ ಅಂತಿಮ ಘಟ್ಟಕ್ಕೆ !
 ಒಂದು ಕಡೆ ಕೊರೊನಾ ಕಾರಣದಿಂದ ರಥೋತ್ಸವಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೆ, ಏ.20 ಹಾಗೂ 21ರಂದು ನಡೆಯುವ ಭಟ್ಕಳ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ರಥೋತ್ಸವಕ್ಕೆ ಸಂಬಂಧಿಸಿದಂತೆ ದೇವಾಲಯದ ಆವರಣದಲ್ಲಿ ಕಳೆದ 1 ವಾರದಿಂದ ಸಿದ್ಧತಾಕಾರ್ಯ ಭರದಿಂದ ಸಾಗಿದೆ. 2 ರಥಗಳಿಗೆ ಮಣೆ, ಬೆತ್ತ ಜೋಡಣೆ, ಹಗ್ಗವನ್ನು ಸಿದ್ಧಗೊಳಿಸುವುದರಿಂದ ಹಿಡಿದು, ಕೆಲಸ ಕಾರ್ಯಗಳು ಬಣ್ಣದ ಬಾವುಟಗಳ ಅಲಂಕಾರದವರೆಗೆ ಬಂದು ಮುಟ್ಟಿದೆ. ಇಲ್ಲಿಯವರೆಗೆ ಬಂದು ರಥೋತ್ಸವವನ್ನು ಕೈ ಬಿಡಬೇಕು ಎಂದರೆ ಏನು ಮಾಡುವುದು ಎಂಬ ಪ್ರಶ್ನೆ ದೇವಾಲಯದ ಆವರಣದಿಂದ ಕೇಳಿ ಬರುತ್ತಿದೆ.

ಸೀಮಿತಗೊಳಿಸಿ ರಥೋತ್ಸವವನ್ನು ಆಚರಿಸುವ ಬಗ್ಗೆ ಚರ್ಚೆ ನಡೆದಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವರು, ಜಾತ್ರೆಯ ಕಾರಣದಿಂದಾಗಿ ಕೊರೊನಾ ಸೋಂಕು ಉಲ್ಭಣಗೊಂಡರೆ ನಾವೇ ಜವಾಬ್ದಾರಿಯನ್ನು ಹೊರುವುದಾಗಿ ಸಭೆಯಲ್ಲಿ ಹೇಳಿಕೊಂಡಿದ್ದರು. ಆದರೆ ಜಾತ್ರೆ ನಡೆಸಲು ಅನುಮತಿ ನೀಡುವ ಬಗ್ಗೆ ಏನೊಂದೂ ತಿಳಿಸದ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸುವುದಾಗಿ ಹೇಳಿದ್ದರು. ಈ ನಡುವೆ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಜಿಲ್ಲೆಯಲ್ಲಿ ಜಾತ್ರೆ, ಉತ್ಸವ ಆಚರಣೆ ನಡೆದಲ್ಲಿ, ಸಂಭವಿಸುವ ಪರಿಣಾಮಗಳ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಸರಕಾರ ಕಟ್ಟಾಜ್ಞೆ ಹೊರಡಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಗಳು, ರಥೋತ್ಸವವನ್ನು ಕೈ ಬಿಡುವಂತೆ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ರವಿವಾರ ತುರ್ತು ಸಭೆ:
ಭಟ್ಕಳ ಚೆನ್ನಪಟ್ಟಣ ಶ್ರೀ ಹನುಮಂತ ರಥೋತ್ಸವ ಆಚರಣೆಗೆ ತಡೆ ನೀಡುವ ನಿಟ್ಟಿನಲ್ಲಿ ರವಿವಾರ ಸಹಾಯಕ ಆಯುಕ್ತೆ ಮಮತಾದೇವಿ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ

ಕೊರೊನಾ ತಡೆ ಮಾರ್ಗಸೂಚಿ ಅನ್ವಯ ಜಾತ್ರೆ, ಉತ್ಸವಕ್ಕೆ ಅವಕಾಶ ಇಲ್ಲ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. 
 
- ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿಗಳು

ಅಧಿಕಾರಿಗಳ ಸಭೆ ನಡೆಸಿದರು. ಸರಕಾರದ ಹೊಸ ಕೊರೊನಾ ತಡೆ ಮಾರ್ಗಸೂಚಿ ಅನ್ವಯ ಜಾತ್ರೆ, ರಥೋತ್ಸವ ಆಚರಣೆಗೆ ಅವಕಾಶ ಇಲ್ಲ. ನಿಯಮ ಮೀರಿ ವರ್ತಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯ ಎಂದು ಸಹಾಯಕ ಆಯುಕ್ತರು ಸಭೆಗೆ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೆನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ಮೊಗೇರ, ನಾವು ಈಗಾಗಲೇ ರಥೋತ್ಸವದ ಸಿದ್ಧತೆಯನ್ನು ಮಾಡಿಕೊಂಡಿದ್ದೆವು. ಆದರೆ ಈಗ

ತ್ರೆ, ಉತ್ಸವ ನಡೆಸದಂತೆ ಹಾಗೂ ದೇವಾಲಯದಲ್ಲಿ ಕೊರೊನಾ ಮಾರ್ಗಸೂಚಿ ಅನುಸಾರವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂದೆ ಏನು  ಮಾಡಬೇಕು ಎನ್ನುವುದನ್ನು ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ.  

ರಥ ಏರಿ ಇಳಿಯುವ ಹನುಮ:

ರಥೋತ್ಸವವನ್ನು ದೇವಾಲಯದ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಳಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂದೆ ಏನು  ಮಾಡಬೇಕು ಎನ್ನುವುದನ್ನು ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ .
 - ಶ್ರೀಧರ ಮೊಗೇರ, ಅಧ್ಯಕ್ಷರು, ಚೆನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನ ಭಟ್ಕಳ


ರಥೋತ್ಸವಕ್ಕೆ ನಿಷೇಧ ಹೇರಿರುವುದರಿಂದಾಗಿ ಈ ಬಾರಿ ಹನುಮ ರಥ ಏರಿ ಸಂಚಾರ ಮಾಡುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಆದರೆ ಈಗಾಗಲೇ ಸಿದ್ಧತೆ ಅಂತಿಮ ಘಟ್ಟಕ್ಕೆ ಬಂದಿರುವುದರಿಂದ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹನುಮಂತನ ವಿಗ್ರಹವನ್ನು ಸಿಂಗಾರಗೊಂಡ ರಥದಲ್ಲಿ ಕುಳ್ಳಿರಿಸಿ, ಪೂಜೆ ಸಲ್ಲಿಸಿದ ನಂತರ ರಥದಿಂದ ಕೆಳಕ್ಕೆ ಕರೆದುಕೊಂಡು ಬಂದು ರಥೋತ್ಸವವನ್ನು ಮುಕ್ತಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜೊತೆಗೆ ರಥವನ್ನು ಇದ್ದಲ್ಲಿಂದ ಆಚೆ, ಈಚೆ ಕದಲಿಸಿ ರಥ ಸಂಚಾರ ಕಾರ್ಯವನ್ನು ಅಷ್ಟಕ್ಕೇ ಮೊಟಕುಗೊಳಿಸುವ ಬಗ್ಗೆಯೂ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ. 

Read These Next

ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ

ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ...

ತೌಕ್ತೆ ಚಂಡಮಾರುತ ದ ಎಫೆಕ್ಟ್ ಗೆ ತತ್ತರಿಸಿದ ಉತ್ತರಕನ್ನಡ ಕರಾವಳಿ. ಮನೆಗಳಿಗೆ ನುಗ್ಗಿದ ನೀರು, ಆಸ್ತಿಪಾಸ್ತಿಗೆ ಹಾನಿ.

ಕಾರವಾರ : ತೌಕ್ತೆ ಚಂಡಮಾರುತದ ಎಫೆಕ್ಟ್ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ತಟ್ಟಿದೆ. ಪರಿಣಾಮವಾಗಿ ಜಿಲ್ಲೆಯ ಕಡಲಂಚಿನಲ್ಲಿ ...

ಕುಂದಾಪುರ: ಕುಂದಾಪುರ, ಉಳ್ಳಾಲ, ಕಾಪುವಿನಲ್ಲಿ ಕಡಲ್ಕೊರೆತ, ಮರವಂತೆಯಲ್ಲಿ ತೆಂಗಿನಮರ, ಮೀನುಗಾರಿಕಾ ಶೆಡ್‌ಗಳು ಸಮುದ್ರಪಾಲು, ಸೋಮೇಶ್ವರದಲ್ಲಿ ಆವರಣ ಗೋಡೆ ಕುಸಿತ

ವಾಯುಭಾರ ಕುಸಿತದಿಂದ ಪಶ್ಚಿಮದ ಅರಬಿ ಸಮುದ್ರದಲ್ಲಿ ಉಂಟಾದ ತೌಕ್ತೆ ಚಂಡಮಾರುತದ ಪರಿಣಾಮ ಕಡಲು ಪ್ರಕ್ಷುಬ್ಧಗೊಳ್ಳಲಾರಂಭಿಸಿದ್ದು

*ಕಲ್ಲಡ್ಕದಲ್ಲಿ ಬಿಜೆಪಿ ಕರ‍್ಯರ‍್ತರಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಅರೋಪಿಗಳ ಮೇಲೆ ಇಲಾಖೆ ಯಾಕಾಗಿ ಕ್ರಮ ಕೈಗೊಳ್ಳತ್ತಿಲ್ಲ : ಎಸ್ ಡಿ ಪಿ ಐ*

ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಇಂದು ಲಾಕ್ಡೌನ್ ಅವದಿ ಮುಗಿದ ನಂತರ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸುತ್ತಿದ್ದ ಬಂಟ್ವಾಳ ನಗರ ...