ಭಟ್ಕಳದಲ್ಲಿ ಮರಳು ಮಾಫಿಯಾಕ್ಕೆ ಕಡಿವಾಣ; ಶಿರಾಲಿಯಲ್ಲಿ ಮರಳು ಘಟಕ; ದರ ನಿಗದಿ ಮಾಡಿದ ಆಡಳಿತ

Source: S O News Service, | By I.G. Bhatkali | Published on 21st November 2020, 1:08 PM | Coastal News |

ಭಟ್ಕಳ: ಮರಳಿನ ದರ ವಿಪರೀತ ಏರಿಕೆಯಿಂದ ಕಂಗಾಲಾಗಿದ್ದ ಭಟ್ಕಳದ ಜನರಿಗೆ ತಾಲೂಕು ಆಡಳಿತ ಸಮಾಧಾನ ಹೇಳಲು ಮುಂದಾಗಿದೆ. ತಾಲೂಕಿನ ಶಿರಾಲಿಯಲ್ಲಿ ನೂತನವಾಗಿ ಮರಳು ಸಂಗ್ರಹ ಘಟಕವನ್ನು ತೆರೆಯಲಾಗಿದ್ದು, ತಾಲೂಕಾಡಳಿತವೇ ಮರಳಿನ ದರವನ್ನು ನಿಗದಿಗೊಳಿಸಿದೆ.

ಈ ಕುರಿತು ಭಟ್ಕಳ ಸಹಾಯಕ ಆಯುಕ್ತ ಭರತ್ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಶಿರಾಲಿ ಮರಳು ಸಂಗ್ರಹ ಘಟಕದ ನಿರ್ವಹಣೆಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. ಸರಕಾರಿ ವಸತಿ ಯೋಜನೆಯ ಫಲಾನುಭವಿಗಳಿಗೆ  ಪ್ರತಿ 10 ಟನ್‍ಗೆ ರು.11250, ಇತರೇ ವ್ಯಕ್ತಿಗಳಿಗೆ ರು.12,250 ನಿಗದಿಪಡಿಸಲಾಗಿದೆ. ಈ ಬೆಲೆಯು ಮರಳಿನ ಮೂಲ ದರದ ಆಧಾರದಲ್ಲಿಯಷ್ಟೇ

 ಡಿ.17ರವರೆಗೆ ಮತದಾರರ ಪಟ್ಟಿ ಪರಷ್ಕರಣೆ 
ಭಟ್ಕಳ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಡಿ.17ರವರೆಗೆ ನಡೆಯಲಿದ್ದು, ಹೊಸದಾಗಿ ಹೆಸರನ್ನು ನೋಂದಾಯಿಸುವವರು ಹಾಗೂ ಹೆಸರು ತಿದ್ದುಪಡಿ ಮಾಡಿಕೊಳ್ಳುವವರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಆಯುಕ್ತ ಭರತ್ ತಿಳಿಸಿದರು. ನ.22, 29 ಹಾಗೂ ಡಿ.6, 13ರಂದು ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 2021, ಜ.1ಕ್ಕೆ 18 ವರ್ಷ ಪ್ರಾಯ ತುಂಬುವವರು  ಮತದಾರರ ಪಟ್ಟಿಯನ್ನು ಸೇರಲು ಅರ್ಹರಾಗಿದ್ದಾರೆ ಎಂದರು. 
 

ವ್ಯತ್ಯಾಸವಾಗುತ್ತದೆ, ದಾಸ್ತಾನು ಕೇಂದ್ರದಲ್ಲಿ ಮರಳಿನ ದರವು ಲೋಡಿಂಗ್ ಶುಲ್ಕವನ್ನು ಒಳಗೊಂಡಿರುತ್ತದೆ. ಒಬ್ಬ ಫಲಾನುಭವಿಗೆ ಗರಿಷ್ಠ 30 ಟನ್‍ವರೆಗೆ ಮರಳು ಖರೀದಿಸಲು ಅವಕಾಶ ನೀಡಲಾಗಿದೆ, ವಾರದಲ್ಲಿ ಒಂದು ಅಥವಾ ಎರಡು ಬಾರಿ ಬೇಡಿಕೆಯನುಸಾರ ಮರಳು ಎತ್ತುವಳಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಮಾಹಿತಿಯನ್ನು ಹೆಲ್ಪ್‍ಲೈನ್ ( 8123599266) ಮೂಲಕ ಪಡೆಯಬಹುದಾಗಿದೆ, ಸರಕಾರಿ ವಸತಿ ಯೋಜನೆಯ ಫಲಾನುಭವಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತ, ಪುರಸಭೆ, ಪಟ್ಟಣ ಪಂಚಾಯತನಿಂದ ಯೋಜನೆಯ ಫಲಾನುಭವಿ ಎನ್ನುವ ಕುರಿತು ದೃಢೀಕರಣವನ್ನು ಹಾಜರುಪಡಿಸಬೇಕು ಅಥವಾ ಗ್ರಾಮ ಪಂಚಾಯತ, ಪುರಸಭೆ, ಪಟ್ಟಣ ಪಂಚಾಯತ ಪಡೆದ ಕಟ್ಟಡ ಪರವಾನಿಗೆ ಪತ್ರವನ್ನು ಹಾಜರುಪಡಿಸಬೇಕು ಎಂದು ವಿವರಿಸಿದರು. ತಹಸೀಲ್ದಾರ ಎಸ್. ರವಿಚಂದ್ರ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...