ಕಪ್ಪು ಪಟ್ಟಿ ಧರಿಸಿ ಭೂಮಾಪನ ಸಿಬ್ಬಂದಿ ಪ್ರತಿಭಟನೆ

Source: so news | Published on 20th August 2019, 11:55 AM | Coastal News | Don't Miss |

 

ಭಟ್ಕಳ: ಕರ್ನಾಟಕ ರಾಜ್ಯ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘ(ರಿ) ಬೆಂಗಳೂರು ಭಟ್ಕಳ ತಾಲೂಕಾ ಸಂಘದಿಂದ ಭೂಮಾಪನ ಇಲಾಖೆ ನೌಕರರ ನ್ಯಾಯಯುತ ಬೇಡಿಕೆಗಳು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಸೋಮವಾರದಂದು
ಕಪ್ಪು ಬ್ಯಾಡ್ಜ್ ಧರಿಸಿ ಪತ್ರಿಭಟಿಸಿದರು.

ಈ ಪ್ರತಿಭಟನೆಯೂ ಅಗಸ್ಟ 19ರಿಂದ ಆರಂಭಗೊಂಡ ಈ ಪ್ರತಿಭಟನೆಯೂ ಅಗಸ್ಟ 31 ರ ತನಕ ನಡೆಯಲಿದ್ದು, 
ಸಪ್ಟೆಂಬರ್ 4 ರಂದು ಕೇಂದ್ರ ಸಂಘದಿಂದ ಕರೆ ನೀಡಿರುವ ಒಂದು ದಿನದ ಬೆಂಗಳೂರು ಚಲೋ ನಡೆಸಲಿದ್ದಾರೆ. ಈ ವೇಳೆ ಕರ್ತವ್ಯ ನಿರ್ವಹಿಸುವ ಜೊತೆಗೆ ಕಪ್ಪು ಬ್ಯಾಡ್ಜ ಧರಿಸಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ‌. 
ಮನವಿಯಲ್ಲಿ 2017 ನವೆಂಬರ್ 04 ರಂದು ಸರ್ಕಾರವು ಭೂಮಾಪಕರಿಗೆ ಮಾಸಿಕ 30 ಕಡತಗಳ ಗುರಿ ನಿಗದಿಪಡಿಸಿ ಹೊರಡಿಸಿರುವ ಅವೈಜ್ಞಾನಿಕ ಸುತ್ತೊಲೆ ಸಂಖ್ಯೆ ಕಂ. ಇ. 51 ಭೂದಾಸ 2017ನ್ನು ಕೂಡಲೇ ಹಿಂಪಡೆಯುವುದು ಹಾಗೂ ಈ ಹಿಂದೆ ಜಾರಿಯಲ್ಲಿದ್ದ 18 ಪಿಲ್ಡ್ + 5 ದೂರಸ್ಥಿ ಕಡತಗಳು ಸೇರಿ 23 ಕಡತಗಳ ವಿಲೇವಾರಿ ಮಾಡುವುದನ್ನು ಮಾಸಿಕ ಗುರಿಯನ್ನಾಗಿ ನಿಗದಿಪಡಿಸುವುದು, ಹೀಗೆ ನಿಗದಿಪಡಿಸುವಾಗ ಕಡ್ಡಾಯವಾಗಿ ಸರ್ಕಾರಿ ರಜೆಗಳು ಹಾಗೂ ನೌಕರರ ವೈಯಕ್ತಿಕ ರಜೆಗಳನ್ನು ಪರಿಗಣಿಸಿ ತತ್ಸಂಬಂಧ ಪ್ರಮಾಣಕ್ಕನುಗುಣವಾಗಿ ಮಾಸಿಕ ಗುರಿಯನ್ನು ಸಹ ಕಡಿಮೆಗೊಳಿಸಿ ಸುತ್ತೋಲೆ ಹೊರಡಿಸಬೇಕು.

04-11-2017ರಂದು ಸರ್ಕಾರವು ಹೊರಡಿಸಿರುವ ಅವೈಜ್ಞಾನಿಕ ಸುತ್ತೊಲೆಯನ್ನು ಇಲಾಖೆಯಲ್ಲಿನ ಶೇಕಡಾ 70 ರಿಂದ 80ರಷ್ಟು ನೌಕರರು/ ಅಧಿಕಾರಿಗಳಿಗೆ ವಿಧಿಸಿರುವ ಶಿಸ್ತು ಕ್ರಮಗಳನ್ನು ಹಾಗೂ ಈಗಾಗಲೇ ಹೊರಡಿಸಿರುವ ದಂಡನೆಯ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು.

ಹೊರಗುತ್ತಿಗೆ ಬಾಂದು ಸಹಾಯಕರ ನೇಮಕಾತಿಯನ್ನು ಕೈ ಬಿಟ್ಟು, ಭೂಮಾಪಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಬಾಂದು ಜವಾನರ ಕಾಯಂ ಹುದ್ದೆಗಳನ್ನು ಸೃಜಿಸುವುದು ಹಾಗೂ ಕೂಡಲೇ ಅವುಗಳನ್ನು ನೇಮಕ ಮಾಡಬೇಕು.
ಇಲಾಖೆಯ ಎಲ್ಲಾ ಕಛೇರಿಗಳಲ್ಲಿ ಸುಗಮ ಆಡಳಿತಕ್ಕೆ ಪೂರಕವಾಗುವಷ್ಟು ಸಂಖ್ಯೆಯಲ್ಲಿ ಕಛೇರಿ ಹಾಗೂ ಅಡವಿ ಭೂಮಾಪಕರನ್ನು ನಿಯೋಜಿಸಬೇಕು.
ಮೋಜಿಣಿ ಭೂಮಾಪಕರನ್ನು ಕಛೇರಿಯ ಅವಧಿಯಾದ ಬೆಳಿಗ್ಗೆ 10 ರಿಂದ 5.30ರ ವರೆಗೆ ಮಾತ್ರ ಚಾಲನೆ ಇಟ್ಟು ಉಳಿದ ಅವಧಿಯನ್ನು ಸ್ಥಗಿತಗೊಳಿಸಬೇಕು. 
ಆಟೋ ಪೈಲ್ಸ ಅಲೋಟಮೆಂಟ್ ಸಿಸ್ಟಮ್ ವ್ಯವಸ್ಥೆಯನ್ನು, ರ್ಯಾಂಗಿಗ್ ಆದರಿಸಿ ನೌಕರರ ವರ್ಗಾವಣೆ ಮಾಡುತ್ತಿರುವುದನ್ನು ಕೈಬಿಡಬೇಕು, ಪರ್ಯಾವೇಕ್ಷಕರು ಹಾಗೂ ಅಧಿಕ್ಷಕ ಹುದ್ದೆಗಳಿಗೆ 100% ಮುಂಬಡ್ತಿ ನೀಡಿ, 
ಖಾಲಿ ಇರುವ ಎಲ್ಲಾ ಕಾರ್ಯನಿರ್ವಹಕ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ನೀಡಿ ಬರ್ತಿಮಾಡಬೇಕು. 
ತಾಂತ್ರಿಕ ವೇತನ ಶ್ರೇಣಿಯನ್ನು ನೀಡುವುದು. ಸಮಾನ ವಿದ್ಯಾರ್ಹತೆ ಹೊಂದಿರುವ ಅನ್ಯ ಇಲಾಖೆಯ ಹುದ್ದೆಯಲ್ಲಿರುವ ಸರ್ಕಾರಿ ನೌಕರರಿಗೆ ನೀಡಿರುವಂತಹ ವೇತನ ಶ್ರೇಣಿಯನ್ನು ಇಲಾಖೆಯ ನೌಕರರು/ಅಧಿಕಾರಿಗಳಿಗೆ ನೀಡಬೇಕು.
ಇಲಾಖೆಯ ಕಾರ್ಯನಿರ್ವಾಹಕ ನೌಕರರಿಗೆ ನೀಡುತ್ತಿರುವ ಮಾಸಿಕ ನಿಗದಿತ ಪ್ರಮಾಣ ಭತ್ಯೆ ರೂ. 600 ಬದಲಾಗಿ ಪ್ರತಿ ಇಂದಿನ ಮಾರುಕಟ್ಟೆ ದರಗಳಂತೆ ಪ್ರತಿ ಮಾಹೆ ರೂ. 2000 ಗಳಿಗೆ ಹೆಚ್ಚಿಸುವುದು. ಹಾಗೂ ಪ್ರತಿ ಮಾಹೆ ರೂ. 300 ಸಾದಿಲ್ವಾರು ವೆಚ್ಚವನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿದ್ದಾರೆ. 

ಈ ಸಂದರ್ಭದಲ್ಲಿ ಭಟ್ಕಳ ಪರಿವೀಕ್ಷಕರು, ಭೂಮಾಪಕರು ಇದ್ದರು.

Read These Next

ಖಾಸಗಿ ಕಾರ್ಯಕ್ರಮಕ್ಕೆ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಉತ್ತರ ಕನ್ನಡ ಜಿಲ್ಲೆ ಕಾರವಾರಕ್ಕೆ ಖಾಸಗಿ ಕಾರ್ಯಕ್ರಮ ನಿಮಿತ್ತ ಗುರುವಾರ ಆಗಮಿಸಿದ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟಾ ...

ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮುದಾಯ ಬದುಕಿನ ಶಿಬಿರ ಹಾಗೂ ಎನ್.ಎಸ್.ಎಸ್. ಘಟಕಕ್ಕೆ  ಚಾಲನೆ

ಭಟ್ಕಳ: ಇಲ್ಲಿನ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಮುದಾಯ ಬದುಕಿನ ಶಿಬಿರ ಹಾಗೂ ಎನ್.ಎಸ್.ಎಸ್. ಘಟಕದ ಉದ್ಘಾಟನೆ ನಡೆಯಿತು. ...

ಪ್ರಧಾನಮಂತ್ರಿ ಎಲ್ಪಿಜಿ ಪಂಚಾಯತಿ ಕಾರ್ಯಕ್ರಮದಲ್ಲಿ ಉಚಿತ ಗ್ಯಾಸ್ ಒಲೆ ಮತ್ತು ಸಿಲೆಂಡರ್ ವಿತರಣೆ

ಭಟ್ಕಳ: ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯದಿಂದ ವಂಚಿತರಾದ ತೀರ ಬಡವರ್ಗದ ಜನರು ಗ್ಯಾಸನಂತಹ ಸಾಧನಗಳ ಉಪಯೋಗ ಪಡೆದುಕೊಳ್ಳಬೇಕು ಎಂಬ ...

ಶರಾವತಿ ಅಭಯಾರಣ್ಯಕ್ಕೆ ಅರಣ್ಯ ಪ್ರದೇಶ ಸೇರ್ಪಡೆ ವಿರೋಧಿಸಿ ಅ.೧೦ ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ

ಭಟ್ಕಳ: ಶರಾವತಿ ಅಭಯಾರಣ್ಯಕ್ಕೆ ಭಟ್ಕಳ ತಾಲೂಕಿನ ಅರಣ್ಯ ಪ್ರದೇಶವನ್ನು ಸೇರ್ಪಡಿಸಿದ್ದನ್ನು ಖಂಡಿಸಿ ಹಾಗೂ ಸೇರ್ಪಡೆಗೊಂಡ ...