ಭಟ್ಕಳ: 60 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಬಿಸ್ಕತ್ ವಶ; ಪೊಲೀಸರ ಬಲೆಗೆ ಬಿದ್ದ ಶೈಲೇಶ್ ಮತ್ತು ವಿಫುಲ್

Source: sonews | By Staff Correspondent | Published on 6th August 2020, 5:40 PM | Coastal News | Don't Miss |

ಭಟ್ಕಳ: ಇಲ್ಲಿನ ಹೂವಿನ ಚೌಕ್ ಕ್ರಾಸ್ ಬಳಿ 60 ಲಕ್ಷ ಮೌಲ್ಯದ 1.5ಕೆಜಿ ಬಂಗಾರದ ನಮೂನೆಯ ಬಿಸ್ಕಿಟ್ ಮತ್ತು ಎಂಟು ಚಿನ್ನದ ಗಟ್ಟಿಗಳನ್ನು ಇಟ್ಟುಕೊಂಡು ಅನುಮಾನಸ್ಪದವಾಗಿ ತಿರುಗುತ್ತಿದ್ದ ಹುಬ್ಬಳ್ಳಿ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು ಬಂಧಿತರ ಬಳಿ ಇದ್ದು 10ಲಕ್ಷ ರೂ ಮೌಲ್ಯದ ಕಾರು, 8ಸಾವಿರ ರೂ ಮೌಲ್ಯದ ಎರಡು ಮೊಬೈಲ್‍ಗಳನ್ನು ವಶಪಡಿಸಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. 

ಬಂಧಿತರನ್ನು ಹುಬ್ಬಳ್ಳಿಯ ದುರ್ಗದಬೈಲ್ ಗೋಳಿಗಲ್ಲಿಯ ನಿವಾಸಿ ಶೈಲೇಶ ಮಹಾದೇವ ಪಾಟೀಲ್(33) ಹಾಗೂ ಸಾತಾರಾ ಮಹಾರಾಷ್ಟ್ರದ ಹಾಲಿ ಹುಬ್ಬಳ್ಳಿ ದುರ್ಗದಬೈಲ್ ನಿವಾಸಿ ವಿಪುಲ್ ಸಂಜಯ ದೇಶಮುಖ(25) ಎಂದು ಗುರುತಿಸಲಾಗಿದೆ. 

ಉತ್ತರಕನ್ನಡ ಜಿಲ್ಲಾ  ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜ ಇವರ ಮಾರ್ಗದರ್ಶನ ಹಾಗೂ ಭಟ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಇವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ದಿವಾಕರ ಪಿ.ಎಂ, ನಗರ ಠಣೆಯ ಪಿ.ಎಸ್.ಐ ಭರತ್ ಕುಮಾರ್ ಹನುಮಂತ ಕುಡಗುಂಡಿ ಸಿಬ್ಬಂಧಿಗಳಾದ ಜೆ.ನಾಯ್ಕ, ನಾಗರಾಜ ಮೊಗೇರ್, ವಿನಾಯಕ ಪಾಟೀಲ್, ಮದಾರ್ ಸಾಬ್ ಚಿಕ್ಕೇರಿ, ಕೃಷ್ಣಾನಂದ ನಾಯ್ಕ ಈರಣ್ಣ ಪೂಜಾರಿ, ಲೋಕೇಶ್ ಕತ್ತಿ, ಬಸವಣ್ಣಿಪ್ಪ, ಸಿದ್ದಪ್ಪ ಕಾಂಬಳೆ, ಮಾಳಪ್ಪ ಪೂಜಾರಿ, ದೇವರಾಜ ಮೊಗೇರ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಆರೋಪಿಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...