ಶಾಸಕ ಸುನಿಲ್ ನಾಯ್ಕ ರಿಂದ ‘ಸ್ವಚ್ಚತಾ ಹಿ ಸೇವಾ’ ಕಾರ್ಯಕ್ರಮಕ್ಕೆ ಚಾಲನೆ

Source: sonews | By Staff Correspondent | Published on 2nd October 2019, 7:18 PM | Coastal News |


ಭಟ್ಕಳ  ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ, ಪುರಸಭೆ ಭಟ್ಕಳ, ಮತ್ತು ಪಟ್ಟಣ ಪಂಚಾಯತ ಜಾಲಿ ಹಾಗೂ ವಿವಿಧ ಇಲಾಖೆ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆ ಯಲ್ಲಿ ಸ್ವಚತಾಹಿಸೇವಾ ಕಾರ್ಯಕ್ರಮವನ್ನು ಶಾಸಕ ಸುನೀಲ್ ನಾಯ್ಕ ಚಾಲನೆ ನೀಡಿದರು. 

ನಂತರ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಮಹಾತ್ಮ ಗಾಂಧಿಜಿಯವರ ಜನ್ಮ ದಿನಾಚರಣೆ ಅಂಗವಾಗಿ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗುತ್ತಿದ್ದು ಈ ಹಿಂದೆ ಈ ಸ್ವಚ್ಛತೆ ಅನುವುದು ಪ್ಯಾಶನ್ ಆಗಿತ್ತು. ಆದರೆ ಈಗಿನ ಗ್ರಾಮೀಣ ಭಾಗದಲ್ಲಿ  ಪ್ರತಿ ಹಳ್ಳಿಗಳಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದು ನಮ್ಮ ಮನೆ ದಿನಾಲು ನಾವು ಸ್ವಚ್ಛತೆ ಯಾವ ರೀತಿ ಇಟ್ಟುಕೊಂಡು ಇರುತ್ತವೆ ಅದೇ ರೀತಿ ನಮ್ಮ ಊರು ಸ್ವಚ್ಛತೆ ಇಟ್ಟುಕೊಂಡು ಇರಬೇಕು.ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದ ಬಳಿಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಜಾಗೃತಿ ಮೂಡಿದೆ. ಆದರೆ ಇದು ಪೂರ್ಣ ಯಶಸ್ಸಾಗಬೇಕಾದರೆ ಜನರ ಮನಃಪರಿವರ್ತನೆಯಾಗಬೇಕು ಈ ಸ್ವಚ್ಛತಾ ಆಂದೋಲನದಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದರು.

ನಂತರ ತಹಶಿಲ್ದಾರರ ವಿ.ಪಿ.ಕೋಟ್ರಹಳ್ಳಿ ಸ್ವಚ್ಛ ಭಾರತ ಪ್ರತಿಜ್ಞಾ ವಿಧಿ ಬೋಧಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆ ನಗರ ಅಂಗೀಕಾರ ಆದೋಲನ ಯಡಿ ಸಹಿ ಸಂಗ್ರಹಣ ಅಭಿಯಾನ ನೆಡೆಯಿತು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ದೇವರಾಜ್, ಆಸ್ಪತ್ರೆ ಆಡಳಿತ ವೈದ್ಯಾಕಾರಿ ಸವಿತಾ ಕಾಮತ, ಕ್ಷೇತ್ರ ಶಿಕ್ಷಣ ಅಧಿಕಾರಿ ಎಂ ಆರ್ ಮುಂಜಿ, ರಾಬಿತಾ ಹಾಗೂ ಅಂಜುಮನ್  ಸಂಸ್ಥೆಯ ಹಂದಾ ಮೀರಾ ಸಾಹೇಬ್, ಪುರಸಭೆ ಸದಸ್ಯ ಕೆ.ಎಂ.ಅಶ್ಫಾಖ್, ಅಬ್ದುಲ್ ರವೂಫ್ ನಾಯತೆ, ಫಯಾಝ್ ಮುಲ್ಲಾ,  ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಶ್ ನಾಯ್ಕ, ತಾಲೂಕು ಪಂಚಾಯತ ಸದಸ್ಯ ಹನುಮಂತ ನಾಯ್ಕ, ಹಾಗೂ ಶಿವಾನಿ ಶಾಂತರಾಮ, ಪ್ರಮುಖರು  ಸಾರ್ವಜನಿಕರು,ತಾಲ್ಲೂಕಿನ ಎಲ್ಲಾ ಅಧಿಕಾರಿಗಳು.ಸಿಬ್ಬಂದಿಗಳು,ಸಂಘಟನೆ ಮುಂಖಡರು ಉಪಸ್ಥಿತರಿದ್ದರು. 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...