ಭಟ್ಕಳ:ಹೆದ್ದಾರಿ ಅಗಲೀಕರಣ  ಈ ಹಿಂದೆ ನಿಗದಿಪಡಿಸಿದಂತೆ ಕಾಮಗಾರಿ ನಡೆಯಲಿ ಎಂದು ಆಗ್ರಹಿಸಿ ಜಯಕರ್ನಾಟಕ ಮನವಿ

Source: varthabhavan | By Arshad Koppa | Published on 23rd August 2017, 8:19 AM | Coastal News | Guest Editorial |

ಭಟ್ಕಳ:  ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ  ಈ ಹಿಂದೆ ನಿಗದಿಪಡಿಸಿದಂತೆ ಕಾಮಗಾರಿ ನಡೆಯಲಿ ಹಾಗೂ ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿಯ ದಿಕ್ಕು ಬದಲಿಸಿ   ಬೈಪಾಸ್ ರಸ್ತೆ ಮಾಡಬಾರದು ಎಂದು ಆಗ್ರಹಿಸಿ  ಭಟ್ಕಳ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು   ಮಂಗಳವಾರದಂದು ಮಧ್ಯಾಹ್ನ  ಭಟ್ಕಳ ಉಪವಿಭಾಗಾದಿಕಾರಿಗಳ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.

ಜಯಕರ್ನಾಟಕ ಸಂಘದ  ತಾಲೂಕಾಧ್ಯಕ್ಷ ಸುಧಾರಕ ನಾಯ್ಕ ನೇತ್ರತ್ವದಲ್ಲಿ ಸೇರಿದ ಸಂಘಟನೆಯ ಕಾರ್ಯಕರ್ತರು ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿಗೆ ಆಗಮಿಸಿ ಕಚೇರಿಯ ವ್ಯವಸ್ಥಾಪಕರ  ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  
 ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲಿಕರಣವನ್ನು  ಈಗಾಗಲೇ ಐ.ಆಆರ್.ಬಿ. ಕಂಪನಿ ವಹಿಸಿಕೊಂಡು ಗ್ರಾಮಾಂತರ ಹಾಗೂ ನಗರದ ಭಾಗಗಳಲ್ಲಿ ಅಗಲೀಕರಣದ ಕಾಮಗಾರಿಯನ್ನು ಕೈಗೊಂಡಿದೆ.  ಈಗಾಗಲೆ ಭಟ್ಕಳ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸದೇ  ತಮ್ಮ ಜಾಗವನ್ನು  30 ರಿಂದ 45 ಮೀಟರ ಜಾಗವನ್ನು  ಹೆದ್ದಾರಿ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟು ಕೆಲವರು ಪರಿಹಾರವನ್ನೂ ಪಡೆದಿದ್ದಾರೆ. ಇ ರೀತಿ ಶಾಂತತೆಯಿಂದ ಈ ಊರಿನ  ಅಭಿವೃದ್ದಿ ಸಲುವಾಗಿ ಸಾರ್ವಜನಿಕರು  ತಮ್ಮ ಕಟ್ಟಡ ಹಾಗೂ ಜಾಗವನ್ನು  ಹೈವೇ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟಿದ್ದು ಇರುತ್ತದೆ.  ಆದರೆ ಕೆಲವು ಕಡೆ ಕೆಲವು ಪಟ್ಟಭದ್ರ ಹಿತಾ ಶಕ್ತಿಗಳು  ತಮ್ಮ ಕಟ್ಟಡವನ್ನು ಉಳಿಸಿಕೊಳ್ಳುವುದಕ್ಕೊಸ್ಕರ   ಈಗಿದ್ದ ಹೆದ್ದಾರಿ ಅಗಲೀಕರಣದ ಬದಲು ಬೈಪಾಸ್ ರಸ್ತೆ  ಮಾಡಬೇಕೆಂದು ಹಿರಿಯ ಅದಿಕಾರಿಗಳಿಗೆ ಮನವಿಯನ್ನು ನೀಡಿದ್ದಾರೆ.  ಇದು ಖಂಡನೀಯವಾಗಿರುತ್ತದೆ.  ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ತಮ್ಮ  ಕಟ್ಟಡ ಹಾಗೂ ಜಾಗ ಉಳಿಸಿಕೊಳ್ಳುವುದಕ್ಕೋಸ್ಕರ  ಬೆಳೆಯುತ್ತಿರುವ ನಗರದ  ಅಗಲೀಕರಣವನ್ನು  ವಿರೋಧಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಿಲ್ಲಿಸದೇ ಈಗಿದ್ದ  ರಾಷ್ಟ್ರೀಯ ಹೆದ್ದಾರಿಯಲ್ಲೇ  ಅಗಲೀಕರಣವನ್ನು 30-ರಿಂದ 45  ಮೀಟರ್ ಹಾಗೂ ಕೆಲವು ಕಡೆ ಅಬಿವೃದ್ದಿಯ ದೃಷಿಯಿಂದ ಹೆಚ್ಚು ಸ್ಥಳವನ್ನು ಉಪಯೋಗಿಸಬೇಕು ಹಾಗೂ   ರಾಷ್ಟ್ರೀಯ ಹೆದ್ದಾರಿ ಈ ಹಿಂದೆ  ನಿಗದಿಪಡಿಸಿದಂತೆ  ಕೂಡಲೇ  ಕೂಡಲೇ ಕಾಮಗಾರಿ ಮಾಡಬೇಕು  ಎಂದು ಮನವಿಯಲ್ಲಿ  ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ  ಚಂದ್ರಶೇಖರ ನಾಯ್ಕ, ಮಾರುತಿ ನಾಯ್ಕ, ಪಾಂಡುರಂಗ ನಾಯ್ಕ, ಸುರೇಶ ಮೊಗೇರ, ವಿವೇಕಾನಂದ ನಾಯ್ಕ, ಚಿದಂಬರ ನಾಯ್ಕ, ಗುರು ನಾಯ್ಕ, ಮಹೇಶ ನಾಯ್ಕ ,ಜೈಶಂಕರ ನಾಯ್ಕ ನಾಗೇಸ ನಾಯ್ಕ ,ಮೋಹನ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...