ಭಟ್ಕಳ ಇಂಟರ್ ಸ್ಕೂಲ್ ಸೈನ್ಸ್ ಫೇರ್ ಗೆ ಸಾಜಿದ್ ಮುಲ್ಲಾ ಚಾಲನೆ

Source: sonews | By Staff Correspondent | Published on 15th December 2019, 11:31 PM | Coastal News | Don't Miss |

ಭಟ್ಕಳ: ತರಬಿಯತ್ ಎಜ್ಯುಕೇಶನ್ ಸೂಸೈಟಿ ಹಾಗೂ ರಾಯಾಚೂರಿನ ಎ.ಜೆ.ಅಕಾಡೆಮಿ ಇಲ್ಲಿನ ಜಾಮಿಯಬಾದ್ ರಸ್ತೆಯಲ್ಲಿನ ನ್ಯೂ ಶಮ್ಸ್ ಸ್ಕೂಲ್ ನಲ್ಲಿ ಆಯೋಜಿದ್ದ ಭಟ್ಕಳ ಇಂಟರ್ ಸ್ಕೂಲ್ ಸೈನ್ಸ್ ಫೇರ್ ಗೆ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಆಹ್ಮದ್ ಮುಲ್ಲಾ ಚಾಲನೆ ನೀಡಿದರು. 

ನಂತರ ಉದ್ಘಾಟನಾ ಭಾಷಣ ಮಾಡಿದ ಅವರು ವಿಜ್ಞಾನ ಮನುಷ್ಯನಿಗೆ ಯೋಚಿಸುವುದನ್ನು ಕಲಿಸುತ್ತದೆ. ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ಸತ್ಯ ಅಸತ್ಯಗಳ ಅರಿವಾಗುತ್ತದೆ ಎಂದರು. ವಿವಿಧ ಹಂತದಲ್ಲಿ ವಿಜ್ಞಾನ ವಿಷಯಗಳನ್ನು ಅರಿತು ಬದುಕು ಸಾಗಿಸಲು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಸೈನ್ಸ್ ಫೇರ್ ಕುರಿತಂತೆ ಎ.ಜೆ.ಅಕಾಡೆಮಿಯ ನಿರ್ದೆಶಕ ಮುಹಮ್ಮದ್ ಅಬ್ದುಲ್ಲಾ ಜಾವಿದ್ ಮಾತನಾಡಿ ವಿಜ್ಞಾನ ವಸ್ತುಪ್ರದರ್ಶನ ಮತ್ತು ಸೈನ್ಸ್ ಫೇರ್ ಗಳಲ್ಲಿನ ವ್ಯತ್ಯಾಸವನ್ನು ತಿಳಿಸುತ್ತ ಅಂತರಾಷ್ಟ್ರೀಯ ಮಟ್ಟದಲ್ಲಿ ವಸ್ತುಪ್ರದರ್ಶನಕ್ಕೆ ಮಹತ್ವ ಇಲ್ಲ ಸೈನ್ಸ್ ಫೇರ್ ಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ ಹಂತದಿಂದಲೆ ಸಂಶೋಧನೆ ಕೈಗೊಳ್ಳುವು ಪ್ರತಿಭೆಗಳನ್ನು ಬೆಳೆಸಲಾಗುತ್ತಿದ್ದು ಆದ್ದರಿಂದಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸೈನ್ಸ್ ಫೇರ್ ಗಳು ಮಹತ್ವ ಪಡೆದುಕೊಳ್ಳುತ್ತಿವೆ ಎಂದರು. 
ಭಟ್ಕಳ ಸೈನ್ಸ್ ಫೇರ್ ಸಂಯೋಜಕ ಎಂ.ಆರ್. ಮಾನ್ವಿ ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವೀಣಾ ಕಾರ್ಯಕ್ರಮ ನಿರೋಪಿಸಿ ಧನ್ಯವಾದ ಅರ್ಪಿಸಿದರು. 
ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಉಪಾಧ್ಯಕ್ಷ ನಝೀರ್ ಆಹ್ಮದ್ ಖಾಝಿ, ಪ್ರಧಾನ ಕಾರ್ಯದರ್ಶಿ ಮೌಲಾನ ಝೀಯಾವುರ್ರಹ್ಮಾನದ್ ನದ್ವಿ ರುಕ್ನುದ್ದೀನ್ ಹಾಗೂ ಆಡಳಿತ ಮಂಡಳಿಯ ಸದಸ್ಯ ಮೌಲಾನ ಸೈಯ್ಯದ್ ಝಬೇರ್ ಎಸ್.ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ತಾಲೂಕಿನ 11 ಶಾಲೆಗಳಿಂದ 40ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳು ಹಾಗೂ 150 ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿದ್ದರು. (ಫೋಟೊ: 15-ಬಿಕೆಎಲ್-3-ಸೈನ್ಸ್ ಫೇರ್)
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...