ಭಟ್ಕಳದ ಮಾಂಸ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಕೊನೆಗೂ ಸಿಕ್ಕಿದೆ ಪರಿಹಾರ !

Source: S O News Service | By V. D. Bhatkal | Published on 7th November 2020, 3:35 PM | Coastal News | Special Report |

ಭಟ್ಕಳ: ವರ್ತಮಾನದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಜಗತ್ತನ್ನು ಕಾಡುತ್ತಲೇ ಇದ್ದು, ವಿಲೇವಾರಿ ಕಾರ್ಯಕ್ಕೆ ಆಧುನಿಕತೆಯ ಲೇಪ ಹಚ್ಚುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ಜೊತೆಯಾಗಿಯೇ ಸಾಗಿದೆ. ಸಮರ್ಪಕ ಘನ ತ್ಯಾಜ್ಯ ವಿಲೇವಾರಿಯಲ್ಲಿ ರಾಜ್ಯದ ಗಮನ ಸೆಳೆದಿರುವ ಭಟ್ಕಳ ಪುರಸಭೆ ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಕ್ಕೆ ಸಾಗಿದ್ದು, ಮಾಂಸ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಭಟ್ಕಳದಿಂದಲೇ ತೊಲಗಿಸುವ ಸಾಹಸಕ್ಕೆ ಕೈ ಹಾಕಿದೆ. 

ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ 25 ಕೋಳಿ ಮಾಂಸ ಮಾರಾಟ ಅಂಗಡಿಗಳಿವೆ. 5-6 ಕುರಿ ಮಾಂಸದ ಅಂಗಡಿಗಳು ಭಟ್ಕಳದಲ್ಲಿ ನಿತ್ಯವೂ ವ್ಯಾಪಾರ ವಹಿವಾಟು ನಡೆಸುತ್ತಿವೆ. ಪ್ರತಿ ಮನೆಯ ಕಸ, ತ್ಯಾಜ್ಯಗಳ ಸಂಗ್ರಹದ ಜೊತೆಗೆ ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ಸಂಗ್ರಹಿಸಿ, ಅದನ್ನು ವಿಲೇವಾರಿ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಕಂಡ ಕಂಡಲ್ಲಿ ಮನುಷ್ಯರೇ ಮಾಂಸ ತ್ಯಾಜ್ಯಗಳನ್ನು ಎಸೆದು ಪರಿಸರಕ್ಕೆ ದುರ್ವಾಸನೆ

ಭಟ್ಕಳದ ಮಾಂಸ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪುರಸಭೆ ಪರಿಹಾರ ಕಂಡು ಕೊಂಡಿದೆ. ನಿತ್ಯವೂ 3-4 ಟನ್ ತ್ಯಾಜ್ಯಗಳನ್ನು ಸಂಗ್ರಹಿಸಿ ಮಂಗಳೂರಿನ ಸೌಝಾ ಕಂಪನಿಗೆ ನೀಡುತ್ತಿದ್ದೇವೆ. ನಮ್ಮ ಪ್ರಯತ್ನ ಎಲ್ಲ ರೀತಿಯಿಂದಲೂ ಫಲಕಾರಿಯಾಗುವ ವಿಶ್ವಾಸ ಇದೆ
ಸೋಜಿಯಾ ಸೋಮನ್,  ಪುರಸಭಾ ಹಿರಿಯ ಆರೋಗ್ಯಾಧಿಕಾರಿ

ಹರಡುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಬೀದಿ ಶ್ವಾನಗಳು ಮಾಂಸದ ತ್ಯಾಜ್ಯಗಳನ್ನು ಕಚ್ಚಿಕೊಂಡು ಎಳೆದಾಡದ ಜಾಗವೇ ಇಲ್ಲ ಎನ್ನಬಹುದು. ಕಾಗೆ, ಹದ್ದುಗಳು ತ್ಯಾಜ್ಯಗಳನ್ನು ಹಚ್ಚಿಕೊಂಡು ಎಲ್ಲೆಲ್ಲಿಯೋ ಎಸೆದು ಹೊಲಸು ಮಾಡಿದ್ದೂ ಆಗಿದೆ. ಕೆಲವು ಕಂಪೌಂಡ್ ಇಲ್ಲದ ದೇವಸ್ಥಾನಗಳ ಒಳಗೂ ಮಾಂಸ ತ್ಯಾಜ್ಯಗಳು ಬಂದು ಬಿದ್ದು, ಕೋಮುಗಳ ನಡುವಿನ ಸಾಮರಸ್ಯವನ್ನೇ ಹಾಳುಗೆಡುಹಿದ ಉದಾಹರಣೆ ಸಾಕಷ್ಟು ಇದೆ. ಇದೇ ಮಾಂಸ ತ್ಯಾಜ್ಯಗಳಿಂದಾಗಿ ಊರಿಗೆ ಬೆಂಕಿ ಹೊತ್ತಿಕೊಂಡು ಪೊಲೀಸರು ನಿದ್ದೆ ಬಿಟ್ಟು ಕಾಯುತ್ತ ಕುಳಿತಿದ್ದನ್ನು ಭಟ್ಕಳದ ಜನರು ಮರೆತಿಲ್ಲ! ಈ ಎಲ್ಲ ಹೋರಾಟ, ಹಾರಾಟ, ಸಂಕಟಗಳಿಗೂ ಪುರಸಭೆಯೇ ಮದ್ದು ಕಂಡು ಹಿಡಿದಿದೆ.

ಭಟ್ಕಳದಿಂದ 3-4 ಟನ್ ತ್ಯಾಜ್ಯ ಮಂಗಳೂರಿಗೆ:
ಭಟ್ಕಳ ಪುರಸಭೆ ಮಾಂಸ ತ್ಯಾಜ್ಯ ವಿಲೇವಾರಿಗೆ ಹೊಸ ಮಾರ್ಗವನ್ನು ಕಂಡು ಕೊಂಡಿದ್ದು, ಭಟ್ಕಳದಿಂದ ನಿತ್ಯವೂ ತ್ಯಾಜ್ಯಗಳನ್ನು ಮಂಗಳೂರು ಬೈಕಂಪಾಡಿಯ ಸೌಝಾ ಟ್ರೇಡಿಂಗ್ ಕಂಪನಿಗೆ ರಫ್ತು ಮಾಡಲಾಗುತ್ತಿದೆ. ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಭಟ್ಕಳ ಪುರಸಭಾ ಪೌರ ಕಾರ್ಮಿಕರು ಕೋಳಿ, ಕುರಿ ಮಾಂಸದ ಅಂಗಡಿಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದು, ನಿತ್ಯವೂ ಸಂಜೆ 4 ಗಂಟೆಯ ಸುಮಾರಿಗೆ ಸೌಝಾ ಕಂಪನಿಯ ವಾಹನ ಈ ಎಲ್ಲ ಮಾಂಸದ ತ್ಯಾಜ್ಯಗಳನ್ನು ಪೆಟ್ಟಿಗೆಗಳಲ್ಲಿ ವ್ಯವಸ್ಥಿತವಾಗಿ ತುಂಬಿಸಿಕೊಂಡು ಮಂಗಳೂರಿಗೆ ಕೊಂಡೊಯ್ಯುತ್ತಿದೆ. ಇದರಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರವೊಂದು ಸಿಕ್ಕಂತಾಗಿದೆ.

ಮಾಂಸದ ತ್ಯಾಜ್ಯಗಳಿಂದ ನಾಯಿಗಳಿಗೆ ಆಹಾರ:
ಸೌಜಾ ಕಂಪನಿಯು ಮಾಂಸದ ತ್ಯಾಜ್ಯಗಳನ್ನು ಒಣಗಿಸಿ, ಪುಡಿಮಾಡಿ (ಪೌಡರ್) ಕೆಲವು ರಾಸಾಯನಿಕಗಳ ಸೇರ್ಪಡೆಯೊಂದಿಗೆ ಪ್ಯಾಕೆಟ್‍ಗಳಲ್ಲಿ ತುಂಬಿಸಿ ಮಾರುಕಟ್ಟೆಗೆ ಬಿಡುತ್ತಿದೆ. ಕಳೆದ 5 ವರ್ಷಗಳಿಂದ ಕಂಪನಿಯು ಈ ಕಾರ್ಯದಲ್ಲಿ ನಿರತವಾಗಿದ್ದು, ಉದ್ಯಮ ಪ್ರಗತಿಯತ್ತ ದಾಪುಗಾಲಿಟ್ಟಿದೆ. ಈ ಪ್ಯಾಕೆಟ್ ಫುಡ್ ಪ್ರಸಕ್ತವಾಗಿ ವಿವಿಧ ತಳಿಯ ಸಾಕು ನಾಯಿಗಳಿಗೆ ಆಹಾರವಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಉಳಿದ ಪ್ರಾಣಿ, ಪಕ್ಷಿಗಳಿಗೂ ನೀಡುವ ಪ್ರಯತ್ನ ಭರದಿಂದ ಸಾಗಿದೆ. ಭಟ್ಕಳದಲ್ಲಿ ಪುರಸಭೆ ಹಾಗೂ ಸೌಝಾ ಕಂಪನಿಯ ಜಂಟಿ ಪ್ರಯತ್ನ ಯಶಸ್ಸು ಕಂಡರೆ ಭಟ್ಕಳದ ಮಾಂಸ ತ್ಯಾಜ್ಯ ವಿಲೇವಾರಿ ಕ್ರಮವನ್ನು ಉತ್ತರಕನ್ನಡ ಜಿಲ್ಲೆಯಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ. 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...