ಭಟ್ಕಳ ಪುರಸಭೆ ಚುನಾವಣೆಗೆ:ಮೂವರು ಕಾಂಗ್ರೆಸ್,9 ಪಕ್ಷೇತರರು ಅವಿರೋಧ ಆಯ್ಕೆ

Source: so news | By MV Bhatkal | Published on 22nd May 2019, 1:11 AM | Coastal News | Don't Miss |

ಭಟ್ಕಳ: ಮೇ 29ರಂದು ನಡೆಯಲಿರುವ ಭಟ್ಕಳ ಪುರಸಭೆ ಚುನಾವಣೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಸೋಮವಾರ ಹಲವರು ತಮ್ಮ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದು 23 ವಾರ್ಡ್ ಗಳ ಪೈಕಿ 12 ವಾರ್ಡ್ ಗಳಲ್ಲಿ ಆವಿರೋಧ ಆಯ್ಕೆಯಾಗಿದ್ದು 3 ಕಾಂಗ್ರೆಸ್ ಹಾಗೂ 9 ಪಕ್ಷೇತರ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.

ಉಳಿದ 11 ವಾರ್ಡ್ ಗಳಿಗೆ ಮಾತ್ರ ಚುನಾವಣೆ ನಡೆಯಲಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರೂ ಸೇರಿ ಒಟ್ಟೂ 27 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ನಿಂದ ವಾರ್ಡ 3 ರಲ್ಲಿ ಪ್ರಿಯ ಫರ್ನಾಂಡೀಸ್, 5ರಲ್ಲಿ ಜಗನ್ನಾಥ ಗೊಂಡ,12ರಲ್ಲಿ ಅಬ್ದುಲ್ ರವೂಫ್ ನಾಯ್ತೆ ಅವಿರೋಧವಾಗಿ ಆಯ್ಕೆಯಾದವರು.

ವಾರ್ಡ್ ನಂ 1ರಲ್ಲಿ ಸಬೀನ ತಾಜ್, 2 ರಲ್ಲಿ ಮೊಹಮ್ಮದ ಪರ್ವೇಜ್ ಕಾಶೀಂಜಿ, 9 ರಲ್ಲಿ ಶಬೀನ್ ಶಿಂಗೇರಿ, 13 ರಲ್ಲಿ ಆಸಿಯಾ ನಿದಾ ಸಿದ್ದಿಬಾಪ, 14 ರಲ್ಲಿ ರುಬಿನಾ ಜಾಕೀರ್ ಹುಸೇನ್ ಬಿಯಾತಿ, 16 ರಲ್ಲಿ ಮೊಹಮ್ಮದ್ ಕೈಸರ್ ಮೊಹತೇಶಂ, 17 ರಲ್ಲಿ ಅಹಮ್ಮದ್ ಅಜೀಮ್ ಮೊಹತೇಶಂ, 20 ರಲ್ಲಿ ಫಯಾಜ್ ಹುಸೇನ್ ಮುಲ್ಲಾ, 21 ರಲ್ಲಿ ಚಾಮುಂಡಿ ಫಾತಿಮಾ ಕಾಸರ್ ಅವಿರೋಧವಾಗಿ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿಗಳು. ಅವಿರೋಧ ಆಯ್ಕೆಯಾದ 12 ವಾರ್ಡ್ ಗಳನ್ನು ಹೊರತುಪಡಿಸಿ ಉಳಿದ 11 ವಾರ್ಡ್ ಗಳಾದ ವಾರ್ಡ್ ನಂ 4, 5, 6, 7, 8, 10, 11, 15, 16, 18, 19, 22, 23ನೇ ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ.

ಕಣದಲ್ಲಿ ಇರುವವರು : ವಾರ್ಡ್ ನಂ 4ರಲ್ಲಿ ಇಸ್ಮಾಯಿಲ್ ಇಂಶಾದ್ ಮುಕ್ತೇಸರ (ಪಕ್ಷೇತರ) ಉದಯ ನಾಯ್ಕ (ಬಿಜಿಪಿ) ನಂ 6ರಲ್ಲಿ ಮೊಹಿದ್ದೀನ್ ಸಲೀತ್ ದಾಮೋದಿ (ಪಕ್ಷೇತರ) ಅಲ್ತಾಫ್ ಖರೂರಿ ಮೊಹಿದ್ದೀನ್ (ಪಕ್ಷೇತರ) ನಂ 7ರಲ್ಲಿ ಝರೀನ್ (ಪಕ್ಷೇತರ) ಸುಮಾ ಮಡವಾಳ್ (ಬಿಜೆಪಿ) ನಂ 8ರಲ್ಲಿ ವಿಕ್ಟರ್ ಗೋಮ್ಸ್ (ಪಕ್ಷೇತರ) ಫಾಸ್ಕಲ್ ಗೋಮ್ಸ್ (ಪಕ್ಷೇತರ)

ನಂ 10ರಲ್ಲಿ ರಾಜಾವತಿ ನಾಯ್ಕ (ಬಿಜೆಪಿ) ಫರ್ಜಾನಾಬಾನು ಖಾನ್ (ಪಕ್ಷೇತರ) ನಂ.11ರಲ್ಲಿ ರಾಜು ಶೇಟ್ (ಪಕ್ಷೇತರ) ವೆಂಕಟೇಶ ನಾಯ್ಕ (ಕಾಂಗ್ರೆಸ್) ಮಾರುತಿ ಶೇಟ್ (ಜೆಡಿಎಸ್) ರಾಘವೇಂದ್ರ ಶೇಟ್ (ಬಿಜೆಪಿ) ಉದಯ ರಾಯ್ಕರ್ (ಪಕ್ಷೇತರ) ನಂ.15ರಲ್ಲಿ ಮೋಹನ ನಾಯ್ಕ (ಪಕ್ಷೇತರ) ಕುಮಾರ ನಾಯ್ಕ (ಬಿಜೆಪಿ) ನಂ 18ರಲ್ಲಿ ಆಯಿಶಾ ಹಬೀಬ್ ಅಹಮ್ಮದ್ (ಪಕ್ಷೇತರ) ಜಯಂತಿ ದೇವದಾಸ ಮಿಂಚಿ (ಬಿಜೆಪಿ) ನಂ. 19ರಲ್ಲಿ ರಾಘವೇಂದ್ರ ಬಾಬು ಗವಾಳಿ (ಪಕ್ಷೇತರ) ರವೀಂದ್ರ ಸುಬ್ಬ ಮಂಗಳ (ಬಿಜೆಪಿ) ನಾರಾಯಣ ಗವಾಳಿ (ಪಕ್ಷೇತರ) ವಾರ್ಡ ನಂ. 22ರಲ್ಲಿ ರಜನೀಬಾಯಿ ಪ್ರಭು (ಬಿಜೆಪಿ) ನಸೀಮ್ ಆಪ್ರೋಸಿ ಮುಲ್ಲಾ (ಪಕ್ಷೇತರ) ನಂ.23ರಲ್ಲಿ ಕೃಷ್ಣಾನಂದ ಪೈ (ಪಕ್ಷೇತರ) ಯಶೋಧರ ನಾಯ್ಕ (ಬಿಜೆಪಿ) ಮುಸ್ತಫಾ (ಪಕ್ಷೇತರ) ಕಣದಲ್ಲಿದ್ದಾರೆ ಎಂದು ಚುನಾವಾಣಾಧಿಕಾರಿ ಎನ್. ಬಿ ಪಾಟೀಲ್ ಮಾಹಿತಿ ನೀಡಿದರು.

​​

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...