ಭಟ್ಕಳ ಪುರಸಭಾ ಕಚೇರಿಯ ಮುಂಭಾಗದಲ್ಲಿ ಕನ್ನಡದ ಜೊತೆ ಉರ್ದು ಬಳಕೆಗೆ ಸಂಘಪರಿವಾರ ಕಾರ್ಯಕರ್ತರ ವಿರೋಧ; ಉರ್ದು ಅಕ್ಷರ ಅಳವಡಿಕೆ ತಡೆಗೆ ಯತ್ನ: ಪೊಲೀಸ್ ಕಾವಲು

Source: S O NEWS | By V. D. Bhatkal | Published on 28th June 2022, 2:28 PM | Coastal News |

ಭಟ್ಕಳ: ತಾಲೂಕಿನ ಪುರಸಭಾ ಕಚೇರಿಯ ಮುಂಭಾಗದಲ್ಲಿ ಕನ್ನಡ, ಇಂಗ್ಲೀಷ್ ಜೊತೆಗೆ ಉರ್ದು ಭಾಷೆಯ ಸ್ಪೇನ್‌ಲೆಸ್ ಸ್ಟೀಲ್ ಅಕ್ಷರ ಅಳವಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ತಾಲೂಕಿನ ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಸಂಜೆ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸೋಮವಾರ ಸ೦ಜೆ - `ಪುರಸಭಾ ಕಾರ್ಯಾಲಯ' ಪದ ಅಳವಡಿಕೆ ಸ್ಥಳ ಕ್ಕೆ ಆಗಮಿಸಿದ ಬಿಜೆಪಿ ಪ್ರಮುಖ, ಪುರಸಭಾ ನಾಮನಿರ್ದೇಶನ ಸದಸ್ಯ ಶ್ರೀಕಾಂತ ನಾಯ್ಕ, ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ರಾಘವೇಂದ್ರ ನಾಯ್ಕ, ತುಳಸಿದಾಸ ನಾಯ್ಕ, ಕುಮಾರ ನಾಯ್ಕ, ಶ್ರೀನಿವಾಸ ನಾಯ್ಕ, ಕೇಶವ ನಾಯ್ಕ, ಭಟ್ಕಳ ಬಿಜೆಪಿ ಯುವ 

ನಮ್ಮ ಗಮನಕ್ಕೆ ತಾರದೇ ಪುರಸಭಾ ಕಟ್ಟಡದಲ್ಲಿ ಯಾವುದೇ  ನಡೆಸುವುದು ಸರಿಯಲ್ಲ. ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿಗಳಿಗೆ ನೋಟಿಸ್‌ ನೀಡಿ, ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ.
ಮಮತಾದೇವಿ. ಸಹಾಯಕ ಆಯುಕ್ತರು, ಭಟ್ಕಳ

ಆಡಳಿತ ಕನ್ನಡ ಭಾಷೆಯ ಜೊತೆಗೆ ಸ್ಥಳೀಯ ಭಾಷೆಯಲ್ಲಿ ನಾಮಫಲಕ ಅಳವಡಿಕೆಗೆ ಪುರಸಭಾ ಕಾಯ್ದೆಯಲ್ಲಿ ಅವಕಾಶ ಇದೆ. ಪುರಸಭಾ ಆಡಳಿತ ಮಂಡಳಿಯ ಅನುಮತಿಯಂತೆ ಕನ್ನಡ, ಇಂಗ್ಲೀಷ್ ಜೊತೆಗೆ ಸ್ಥಳೀಯರು ಬಳಸುವ ಉರ್ದು ಭಾಷೆಯಲ್ಲಿಯೂ ಈ ಹಿಂದೆಯೇ ಬರೆಯಲಾಗಿತ್ತು, ಈಗಲೂ ಬರೆಯಲಾಗಿದೆ. ನಮ್ಮ ಹತ್ತಿರ ಇರುವ ನೋಟಿನಲ್ಲಿಯೂ ಉರ್ದು ಇದೆ. ಕಾನೂನು ಪಾಲನೆಯನ್ನು ತಡೆಯಲು ಅಧಿಕಾರಿಗಳೇ ಅವಕಾಶ ನೀಡಿದರೆ ಅದು ದಬ್ಬಾಳಿಕೆಯಾಗುತ್ತದೆ.
ಫರ್ವೇಜ್ ಕಾಶೀಮ್‌ಜಿ, ಅಧ್ಯಕ್ಷರು ಪುರಸಭೆ ಭಟ್ಕಳ

 ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಉರ್ದು ಮಾತ್ರವಲ್ಲ, ಕೊಂಕಣಿ ಮಾತನಾಡುವವರೂ ಇದ್ದಾರೆ. ಎಲ್ಲರೂ ಅವರವರ ಆಡು ಭಾಷೆಯಲ್ಲಿ ಬೋರ್ಡ ಬರೆಸಬೇಕು ಎಂದರೆ ಬರೆಸಲು ಆಗುತ್ತದೆಯೇ? ನಮಗೆ ಕನ್ನಡ, ಇಂಗ್ಲೀಷ್‌ನಲ್ಲಿ ಬರೆದರೆ ಸಾಕು. ಉರ್ದು ಭಾಷೆಯ ಫಲಕವನ್ನು ಈ ಕೂಡಲೇ ತೆರವುಗೊಳಿಸಬೇಕು.
ಶ್ರೀಕಾಂತ ನಾಯ್ಕ, ಪುರಸಭಾ ನಾಮನಿರ್ದೇಶನ ಸದಸ್ಯ ಮತ್ತು ಬಿಜೆಪಿ ಮುಖಂಡ

ಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ವಿಷ್ಣು ನಾಯ್ಕ ಮತ್ತಿತರರು, ಇಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಸಾಕು, ಉರ್ದು ಬಳಸುವುದು ಬೇಡ ಎನ್ನುತ್ತ ಅಕ್ಷರ ಅಳವಡಿಕೆ ತಡೆಗೆ ಮುಂದಾದರು. ಪುರಸಭಾ ಅಧ್ಯಕ್ಷ ಫರ್ವೇಜ್ ಕಾಶೀಮ್‌ಜಿ, ಉಪಾಧ್ಯಕ್ಷ ಕೈಸ‌ ಮೊತೇಶಮ್, ಸದಸ್ಯರಾದ ಅಲ್ತಾಫ್ ಖರೂರಿ, ರವೂಫ್ ನಾಯಿತೇ, ಆಸ್ಪಾಕ್, ಫಯಾಜ್ ಮುಲ್ಲಾ, ಭಟ್ಕಳ ಮುಸ್ಲಿಮ್ ಯೂಥ್ ಫೆಡರೇಶನ್ ಇದರ ಅಧ್ಯಕ್ಷ ಅಝೀಜ್ ಉರೆಹಮಾನ್ ಸ್ಥಳಕ್ಕೆ ಆಗಮಿಸಿ, ಕನ್ನಡ ಭಾಷೆಯ ಜೊತೆಗೆ ಉಳಿದ ಭಾಷೆ ಇರುವ ನಾಮಫಲಕ ಅಳವಡಿಸುವುದಕ್ಕೆ ಕಾನೂನು ಅವಕಾಶ ಇದೆ ಎಂದು ಹೇಳಿಕೊಂಡರಾದರೂ ಅದಕ್ಕೆ ಪ್ರತಿಭಟನಾಕಾರರು ಕಿವಿಗೆ ಹಾಕಿಕೊಳ್ಳಲಿಲ್ಲ. ಪ್ರತಿಭಟ ನಾಕಾರರು ಉದ್ರೇಕಗೊಂಡು ಮುನ್ನಗ್ಗುತ್ತಿದ್ದಂತೆಯೇ ಪ್ರತಿರೋಧ ತೋರಿದ ಅಕ್ಷರ ಅಳವಡಿಕೆ ಕೆಲಸದ ಸಿಬ್ಬಂದಿ, ನಿಮ್ಮ ಮಾತು ಕೇಳಿ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ ಎರಡೂ ಗು೦ಪುಗಳನ್ನು ಚೆದುರಿಸಿದರು.

ಮಂಗಳವಾರದ ಒಳಗೆ ಉರ್ದು ತೆರವಿಗೆ ಆಗ್ರಹ : ಇದಾದ ಕೆಲ ಹೊತ್ತಿನಲ್ಲಿ ಸಂಘಪರಿವಾರ ಸಂಘಟನೆಗಳ ಸದಸ್ಯರು, ಕನ್ನಡ ಬಾವುಟ, ಶಾಲು ಧರಿಸಿ ಇಲ್ಲಿನ ಆಸರಕೇರಿ ಶ್ರೀ ಭುವನೇಶ್ವರಿ ಕನ್ನಡ ಸಂಘದ ಸದಸ್ಯರೊಂದಿಗೆ ಪುರಸಭಾ ಕಚೇರಿಯ ಮುಂಭಾಗಕ್ಕೆ ಆಗಮಿಸಿದರು. ಮಂಗಳವಾರ ಸಂಜೆಯ ಒಳಗೆ ಉರ್ದು ಅಕ್ಷರ ತೆರವಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪುರಸಭಾ ಮುಖ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪ್ರಭಾರ ವ್ಯವಸ್ಥಾಪಕ ಅರುಣ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ರಮೇಶ ನಾಯ್ಕ ಉಪಸ್ಥಿತರಿದ್ದರು.

ಉರ್ದು ತೆರವುಗೊಳಿಸದಂತೆ ಒತ್ತಾಯ: ನಂತರ ಪುರಸಭಾ ವ್ಯಾಪ್ತಿಯ ಇನ್ನೊಂದು ಕೋಮಿನ ಜನರು ಪುರಸಭಾ ಕಚೇರಿಗೆ ಆಗಮಿಸಿ ಪುರಸಭಾ ಮುಂಭಾಗದಲ್ಲಿ ಕನ್ನಡ ಭಾಷೆಯೊಂದಿಗೆ ಅಳವಡಿಸಲಾಗಿರುವ ಉರ್ದು ಅಕ್ಷರಗಳನ್ನು ತೆರವುಗೊಳಿಸದಂತೆ ಆಗ್ರಹಿಸಿದರು. ಕನ್ನಡದೊಂದಿಗೆ ಉರ್ದು ಭಾಷೆ ಬಳಸಿದರೆ ತಪ್ಪೇನಿದೆ, ಇದು ಹಿಂದಿನಿಂದಲೂ ಇದೆ. ನೋಟಿನಲ್ಲಿಯೂ ಉರ್ದು ಭಾಷೆಯನ್ನು ಬಳಸಲಾಗಿದೆ, ಉರ್ದು ಬೇಡವಾದರೆ ನೋಟಿನಲ್ಲಿನ ಉರ್ದು ಅಕ್ಷರವನ್ನೂ ತೆಗೆದುಬಿಡಿ, ಮಾಜಿ ಪ್ರಧಾನಿ ವಾಜಪೇಯಿಯವರ ಉರ್ದು ಕವನದ ಬಗ್ಗೆ ಏನೆನ್ನುತ್ತೀರಿ, ಚುನಾವಣೆ ಸಮೀಪಿಸುತ್ತಿದ್ದು, ಭಾಷೆಯ ಹೆಸರಿನಲ್ಲಿ ಕೋಮುಗಳ ನಡುವೆ ಬೆಂಕಿ ಹಚ್ಚಲು ಯತ್ನಿಸಲಾಗುತ್ತಿದೆ, ಇದಕ್ಕೆ ಅಧಿಕಾರಿಗಳೇ ಬೆಂಬಲ ನೀಡಿದರೆ ಅರ್ಥ ಏನು ಎಂದು ಆಕ್ರೋಶ ಹೊರ ಹಾಕಿದರು. ಭಟ್ಕಳ ಮುಸ್ಲಿಮ್ ಯೂಥ್ ಫೆಡರೇಶನ್ನಿನ ಅಧ್ಯಕ್ಷ ಅಝೀಜ್ ಉಗ್ರಹಮಾನ್, ಮುನೀರ್ ಅಹ್ಮದ್ ಉಪಸ್ಥಿತರಿದ್ದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...