ಭಟ್ಕಳ: ಮಳೆಯ ನಡುವೆ ಮನುಷ್ಯನ ಜೀವ ತಿನ್ನುತ್ತಿರುವ ಸೊಳ್ಳೆಗಳು

Source: S O News Service | By V. D. Bhatkal | Published on 4th September 2019, 11:41 AM | Coastal News | Special Report | Don't Miss |

ಭಟ್ಕಳ: ನಿರಂತರ ಮಳೆಯಿಂದಾಗಿ ಊರ ನಡುವೆ ಹೊಳೆ ಹಳ್ಳ ನಿರ್ಮಾಣವಾಗಿದ್ದು, ಹಲವು ಪ್ರದೇಶಗಳಲ್ಲಿ ಮಳೆಯ ನೀರು ಮುಂದಕ್ಕೆ ಹರಿದು ಹೋಗದ ಕಾರಣ ನಿಂತ ನೀರಿನಲ್ಲಿ ವಿಪರೀತ ಎಂಬಂತೆ ಸೃಷ್ಟಿಯಾಗಿರುವ ಸೊಳ್ಳೆಗಳು ಮನುಷ್ಯನ ಜೀವವನ್ನು ತಿನ್ನುತ್ತಿರುವುದು ಕಂಡು ಬಂದಿದೆ.

ತಾಲೂಕಿನ ಬಹುತೇಕ ಪ್ರದೇಶಗಳನ್ನು ಸೊಳ್ಳೆಗಳು ಆವರಿಸಿಕೊಂಡಿವೆ. ಬೆಳಿಗ್ಗೆ ಹಾಗೂ ಸಂಜೆಯ ಹೊತ್ತಿಗೆ ಮನೆ ಹಾಗೂ ಅಂಗಡಿಗಳ ಒಳಗೆ ದಾಂಗುಡಿ ಇಡುತ್ತಿರುವ ಸೊಳ್ಳೆಗಳು ಇಲ್ಲಿನ ಜನರಿಗೆ ಸಂಕಷ್ಟವನ್ನು ತಂದೊಡ್ಡಿವೆ. ಎಲ್ಲಿಯೇ ಕುಂತರೂ, ನಿಂತರೂ ಸೊಳ್ಳೆಗಳು ಹಿಂಬಾಲಿಸಿ ಮುತ್ತಿಕೊಳ್ಳುತ್ತಿವೆ. ತಿನ್ನುವ ಹಾರದ ಮೇಲೆಯೂ ಸೊಳ್ಳೆಗಳು ಸರ್ಕಸ್ ಮುಂದುವರೆಸಿವೆ. ಪುಟ್ಟ ಮಕ್ಕಳ ಕಥೆಯನ್ನಂತೂ

ಭಟ್ಕಳದಲ್ಲಿ 2019ರಲ್ಲಿ 17 ಡೆಂಗ್ಯೂ ಹಾಗೂ 1 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 13 ಪ್ರಕರಣಗಳು ಭಟ್ಕಳದ ಹೊರಗೆ ಉಳಿದುಕೊಂಡು ಕಾಯಿಲೆಗೆ ತುತ್ತಾಗಿ ಬಂದ ಭಟ್ಕಳಿಗರದ್ದಾಗಿದೆ. ಸೊಳ್ಳೆಗಳ ನಿಯಂತ್ರಣವನ್ನು ಸ್ವಚ್ಛತೆಗೆ ಆದ್ಯತೆಗೆ ನೀಡುವುದರಿಂದ ಸಾಧಿಸಬಹುದು. ಇದಕ್ಕೆ ಸಾಮೂಹಿಕ ಕಾಳಜಿ, ಕ್ರಮ ಅತ್ಯಗತ್ಯವಾಗಿದೆ.
  - ಡಾ.ಮೂರ್ತಿ ಭಟ್, ಭಟ್ಕಳ ತಾಲೂಕು ಆರೋಗ್ಯಾಧಿಕಾರಿಗಳು

ಕೇಳುವುದೇ ಬೇಡ. ಸುರಿವ ಮಳೆಯ ತಂಪಿನಲ್ಲಿಯೂ ರಾತ್ರಿ ಮನೆಯ ಫ್ಯಾನ್ ತಿರುಗಲೇ ಬೇಕಾಗಿದೆ. ಕೆಲವೊಮ್ಮೆ ಗಾಳಿಯ ನಡುವೆಯೇ ಒಳ ಮನೆಯನ್ನು ಸೇರಿಕೊಳ್ಳುವ ಯತ್ನ ನಡೆಸುತ್ತಿವೆ. ಸೊಳ್ಳೆಗಳು ಸೊಳ್ಳೆ ಬತ್ತಿ, ಗುಡ್‍ನೈಟ್ ಯಂತ್ರಕ್ಕೂ ಕ್ಯಾರೇ ಮಾಡುತ್ತಿಲ್ಲ. ಮನುಷ್ಯನ ಮೈಯನ್ನು ಹತ್ತಿ ಕುಳಿತುಕೊಳ್ಳುವ ಸೊಳ್ಳೆಗಳ ಲಾಲಾರಸದಿಂದ ತುರಿಕೆ ಹೆಚ್ಚಾಗುತ್ತಿದೆ. ಜನರು ಡೆಂಗ್ಯೂ, ಚಿಕನ್‍ಗುನ್ಯಾ, ಆನೆಕಾಲು ಸೇರಿದಂತೆ ಸೊಳ್ಳೆ ತರುವ ಕಾಯಿಲೆಗಳ ಬಗ್ಗೆ ಭಯಭೀತರಾಗಿದ್ದಾರೆ.

ಸಾವಿರ ಸೊಳ್ಳೆಗಳು! : ಮುನುಷ್ಯನಿಗೆ ಹೆಣ್ಣು ಸೊಳ್ಳೆಗಳು ಮಾರಕವಾಗಿ ಪರಿಣಮಿಸಿವೆ. ಸೊಳ್ಳೆಗಳು ಸಾಮಾನ್ಯವಾಗಿ ನಿಂತ ನೀರಿನಲ್ಲಿ ಮೊಟ್ಟೆಗಳನ್ನಿಟ್ಟು ಸಂತಾನ ವೃದ್ಧಿಸಿಕೊಳ್ಳುತ್ತವೆ. ಮನುಷ್ಯನೂ ಸೇರಿದಂತೆ ಪ್ರಾಣಿಗಳ ರಕ್ತವನ್ನು ಹೀರುವ ಈ ಹೆಣ್ಣು ಸೊಳ್ಳೆಗಳನ್ನು ರಕ್ತ ಕುಡಿಯುವ ಪಿಶಾಚಿಗಳೆಂದೇ ಕರೆಯಲಾಗುತ್ತಿದೆ. ಸರಿಸುಮಾರು 3500 ಜಾತಿಯ ಸೊಳ್ಳೆಗಳಲ್ಲಿ ಮನುಷ್ಯನಿಗೆ 100 ಜಾತಿಯ ಸೊಳ್ಳೆಗಳು ಮಾರಕವಾಗಿದ್ದು, 100 ವಿವಿಧ ರೀತಿಯ ಕಾಯಿಲೆಗಳನ್ನು ಹೊತ್ತು ತರುತ್ತಿದೆ. 

ಭಟ್ಕಳ ಹೊಲಸಾಗುತ್ತಿದೆ: ತಾಲೂಕಿನಲ್ಲಿ ಮಳೆಯ ನೀರು ಮಾತ್ರವಲ್ಲ, ಇಲ್ಲಿನ ಓಪನ್ ಚರಂಡಿಯ ನೀರೂ ಸರಿಯಾಗಿ ಹರಿದು ಹೋಗದೇ ಭಟ್ಕಳ ಪಟ್ಟಣ ಪ್ರದೇಶ ಹೊಲಸಿನ ಮನೆಯಾಗಿ ಪರಿವರ್ತನೆ ಹೊಂದಿದೆ. ಇದರ ಜೊತೆಗೆ ಅಲ್ಲಲ್ಲಿ ಹಳ್ಳಗಳು ನಿರ್ಮಾಣವಾಗಿದ್ದು, ಸೊಳ್ಳೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ ಸೊಳ್ಳೆಗಳ ನಿರ್ಮೂಲನೆಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸ್ವಚ್ಛತೆಯ ಬಗ್ಗೆ ಅದೆಷ್ಟೇ ಪ್ರಚಾರ ನೀಡದರೂ ಜನರು ಬದಲಾಗದ ಜನರು ಸೊಳ್ಳೆಗಳನ್ನು ಬರಮಾಡಿಕೊಳ್ಳುತ್ತಲೇ ಇದ್ದಾರೆ. ಸಾಲದೆಂಬಂತೆ ಮಲೇರಿಯಾ ಸಂಬಂಧ ಈ ಹಿಂದೆ ಬಳಸಲಾಗುತ್ತಿದ್ದ ಡಿಡಿಟಿ ಈಗ ಇಲ್ಲವಾಗಿದ್ದು, ಡೆಂಗ್ಯೂಗೆ ಕಡಿವಾಣ ಹಾಕುತ್ತಿದ್ದ ಫಾಗಿಂಗ್ ಸಹ ಹೆಚ್ಚು ಕಡಿಮೆ ಮರೆತೇ ಹೋಗಿದೆ. ಪರಿಣಾಮವಾಗಿ ಸೊಳ್ಳೆಗಳು ಯಾರ ನಿಯಂತ್ರಣಕ್ಕೂ ಸಿಗುತ್ತಿಲ್ಲ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...