ಭಟ್ಕಳ: ಜಿಲ್ಲಾಡಳಿತದಿಂದ ಆಹಾರದ ವ್ಯವಸ್ಥೆ

Source: S.O. News Service | By I.G. Bhatkali | Published on 28th March 2020, 3:59 PM | Coastal News |

ಭಟ್ಕಳ: ಜಿಲ್ಲೆಯಲ್ಲಿ  ತುರ್ತು ಆಹಾರದ ಅಗತ್ಯವಿದ್ದವರಿಗೆ ಜಿಲ್ಲಾಡಳಿತದಿಂದ ಅಂಗನವಾಡಿಗಳಲ್ಲಿ ಆಹಾರ ತಯಾರಿಸಿ ಆಹಾರದ ವಿತರಿಸುವ  ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ. ತಿಳಿಸಿದ್ದಾರೆ 

ತುರ್ತು ಆಹಾರದ ಅಗತ್ಯವಿದ್ದಂತಹ  ಸಾರ್ವಜನಿಕರು  ತಮ್ಮ ಹೆಸರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ  ನಿರ್ದೇಶಕರಾದ ಡಾ. ರಾಜೇಂದ್ರ ಬೇಕಲ್ (ಮೊಬೈಲ್   ಸಂಖ್ಯೆ: 9880301250)  ಅವರನ್ನು ಸಂಪರ್ಕಿಸುವ  ಮೂಲಕ ತಮ್ಮ  ಹೆಸರನ್ನು ನೊಂದಾಯಿಸಬೇಕಾಗಿರುತ್ತದೆ.

ಹೆಸರು ನೋಂದಣಿ ಮಾಡಿಸಿಕೊಂಡವರಿಗೆ  ಸಮೀಪದ  ಅಂಗನವಾಡಿಗಳ ಮೂಲಕ ಆಹಾರ ಒದಗಿಸಲಾಗುವುದು. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ವಿನಂತಿಸಿದ್ದಾರೆ

Read These Next