ಭಟ್ಕಳ ಜಾಲಿ‌ ಬೀಚ್ ಹತ್ತಿರ ಅಕ್ರಮ ಗಾಂಜಾ ಮಾರಾಟ : ನಾಲ್ವರ ಬಂಧನ

Source: so news | Published on 15th September 2020, 9:32 PM | Coastal News | Don't Miss |

ಭಟ್ಕಳ:ತಾಲೂಕಿ ಜಾಲಿ‌ ಬೀಚ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿತರನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ. 
ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಾಲಿ ಬೀಚ್ ಹತ್ತಿರ ಸೆ.೧೫ ರಂದು ಸಂಜೆ ಎರಡು ವಾಹನಗಳಲ್ಲಿ ಮಾರಾಟ ಮಾಡಲು ಉದ್ದೇಶದಿಂದ ನಿಂತುಕೊಂಡಿದ್ದಾಗಿ ತಿಳಿದು ಬಂದಿದ್ದು ಖಚಿತ ಮಾಹಿತಿ ದೊರೆಯುತ್ತಿದ್ದಂತೆ ಎಸ್.ಪಿ ಶಿವಪ್ರಕಾಶ ದೇವರಾಜ ಹಾಗೂ ಹೆಚ್ಚುವರಿ ಪೋಲಿಸ್ ಅಧಿಕ್ಷಕ ಬದ್ರೀನಾಥ್,ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲ್ಲಗುಜ್ಜಿ ಹಾಗೂ ಸಿ.ಪಿ.ಐ.ಪಿ.ಎ.ದಿವಾಕರ ಮುಂದಾಳತ್ವದಲ್ಲಿ ಈ ಪ್ರಕರಣವನ್ನು ಭೇದಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಸೈಯದ್ ಅಕ್ರಮ,ಹಳೆ ಬಸ್ಸ ನಿಲ್ದಾಣದ ಹತ್ತಿರ,ಹಾಗೂ ಸೈಯದ್ ಮೂಸಾ ಹನಿಪಾಬಾಧ,ರೂಪೇಶ  ಮೊಗೇರ ಜಾಲಿ ದೇವಿ ನಗರ,ಮತ್ತು ಹೇಮಂತ ನಾಯ್ಕ ಹೆಬಳೆ ಗಾಂದಿ ನಗರ ನಿವಾಸಿ ಆಗಿದ್ದು, ಬಂಧಿತ ಆರೋಪಿಗಳಾಗಿದ್ದು ಸದರಿ ಆರೋಪಿತರಿಗೆ ದಸ್ತಗೀರ ಮಾಡಿ ಆರೋಪಿತರಿಂದ ಬಳಿ ಯಲ್ಲಿ ಇದ್ದ ಅಂದಾಜು  250 ಗ್ರಾಂ ತೂಕದ ಗಾಂಜಾ,01 ಬೈಕ್- 02 ಮೊಬೈಲ್ ಫೋನಗಳು-5700/- ರೂಪಾಯಿ ನಗದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆದಿದೆ.ಈ ಸಂದರ್ಭದಲ್ಲಿ ಕಾರ್ಯಚರಣೆ ಭಾಗಿಯಾಗಿದ್ದ
ಭಟ್ಕಳ ಶಹರ ಠಾಣೆಯ ಪಿ.ಎಸ್.ಐ ಶ್ರೀ ಭರತಕುಮಾರ ವಿ. ಪಿ.ಎಸ.ಐ.ಎಚ್.ಬಿ.ಕುಡಗುಂಟಿ,ಸಿಬ್ಬಂದಿಗಳಾದ ಎ.ಎಸ್.ಐ ಗೋಪಾಲ ನಾಯಕ,ದಿನೇಶ ನಾಯಕ,ಮದರಸಾಬ್ ಚಿಕ್ಲರಿ,ಲೋಕೇಶ ಕತ್ತಿ,ಈರಣ್ಣ ಪೂಜಾರಿ,ಸಿದ್ದು ಕಾಂಬಳೆ,ಮಲ್ಲಿಕಾರ್ಜುನ ಇಟಗಿ,ನಾಗರಾಜ್ ಮೊಗೇರ್,ಗೌತಮ ರೊಡ್ಡಣ್ಣ ,ರಾಜು ಗೌಡ,ವಿಶೇಷ ತಂಡದ ಸಿಬ್ಬಂದಿಯವರಾದ ಸಂತೋಷ ಹೊನ್ನಾಳ,ಮೋಹನ್ ಪೂಜಾರಿ,ಚಾಲಕರಾದ ದೇವರಾಜ ಮೊಗೇರ,ಕುಬೇರ ಹೊಸುರ,ಉಪಸ್ಥಿತರಿದ್ದರು

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...