ಭಟ್ಕಳ: ಸೀರತುನ್ನಬಿ ಕುರಿತಂತೆ ಮಕ್ಕಳಿಗಾಗಿ ಆನ್‌ಲೈನ್ ಭಾಷಣ ಸ್ಪರ್ಧೆ

Source: SOnews | By Staff Correspondent | Published on 10th October 2024, 12:40 AM | Coastal News | Don't Miss |

 

ಭಟ್ಕಳ: ಭಟ್ಕಳದ ‘ಫಿಕ್ರ್ ಓ ಖಬರ್’ ಸಂಸ್ಥೆಯ ವತಿಯಿಂದ ಸೀರತುನ್ನಬಿ (ಸ.ಅ) ಕುರಿತು ಕಿರಿಯ ಮಕ್ಕಳಿಗಾಗಿ ಆನ್‌ಲೈನ್ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ, ಇದರಲ್ಲಿ ವಿಜೇತರಿಗೆ 'ಕಿರಿಯ ಭಾಷಣಗಾರ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಈ ಸ್ಪರ್ಧೆಯು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರು ಮತ್ತು 7 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಪ್ರತ್ಯೇಕ ಗುಂಪಿನಲ್ಲಿ ನಡೆಯಲಿದೆ. ಸೀರತುನ್ನಬಿ(ಸ) ಸಂಬಂಧಿತ ನಿರ್ದಿಷ್ಟ ವಿಷಯಗಳ ಮೇಲೆ ಕನ್ನಡ, ಉರ್ದು ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಮೂರು ನಿಮಿಷಗಳ ವಿಡಿಯೋ ಕ್ಲಿಪ್ ಮೂಲಕ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. 2024ರ ಸೆಪ್ಟೆಂಬರ್ 5ರಿಂದ ಪ್ರಾರಂಭವಾಗಿರುವ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೊನೆಯ ದಿನಾಂಕ ಅಕ್ಟೋಬರ್ 15, 2024 ಆಗಿರುತ್ತದೆ.

ಭಾಷಣ ಸ್ಪರ್ಧೆಗೆ 'ನಬಿಯವರ ನೈತಿಕತೆ - ಘಟನೆಗಳ ಬೆಳಕು', 'ವರಫಾನಾ ಲಕ ದಿಕ್ರಕ (ಆಯತ್‌) ಪ್ರೀತಿಯ ನಬಿಯವರ ಸ್ಥಾನಮಾನ', 'ನಬಿಯವರ ಮಕ್ಕಾ ಕಾಲ', 'ಫತಹ್ ಮಕ್ಕಾ ಘಟನೆ', 'ಹಿಜ್ರತ್‌ ನಬಿಯ ದೃಶ್ಯ', 'ಗಜ್ವಾತುಲ್ ರಸೂಲ್‌', 'ಮಕ್ಕಳೊಂದಿಗೆ ಪ್ರೀತಿಯ ನಬಿಯ ವರ್ತನೆ' ಮುಂತಾದ ವಿಷಯಗಳನ್ನು ಆಯ್ಕೆ ಮಾಡಲಾಗಿದೆ.

ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಿಡಿಯೋ ಕ್ಲಿಪ್ ಅನ್ನು http://links.fikrokhabar.com/ca951b00 ಗೆ ಹಂಚಬೇಕು. ಹೆಚ್ಚಿನ ಮಾಹಿತಿಗಾಗಿ 9916131111 ಸಂಪರ್ಕಿಸಬಹುದು.

 

Read These Next

ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗಿದ್ದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಗ್ರಾಮದ ...

ಭಟ್ಕಳ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ ಮುರುಡೇಶ್ವರ ದಲ್ಲಿ ಅದ್ದೂರಿ ಸ್ವಾಗತ

20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ ನಿವೃತ್ತ ಯೋಧ ಹರೀಶ ದೇವಾಡಿಗ ಅವರಿಗೆ  ವಿವಿಧ ಸಂಘಟನೆ ಹಾಗೂ ...