ಭಟ್ಕಳ:ಶ್ರವಣ ಶಕ್ತಿ ಇಲ್ಲದ ಒಂದು ವರ್ಷದ ಮಗುವಿನ ಶಸ್ತ್ರಚಿಕಿತ್ಸೆಗಾಗಿ ನೆರವು ನೀಡಲು ಮನವಿ

Source: varthabhavan | By Arshad Koppa | Published on 3rd August 2017, 8:05 AM | Coastal News | Special Report | Guest Editorial |

ಭಟ್ಕಳ: ಹುಟ್ಟಿನಿಂದಲೇ ಅಂಗವಿಕಲತೆಯನ್ನು ಹೊಂದಿದ್ದ ಪುಟ್ಟ ಬಾಲಕಿ ಮೆಹರಿನ್ ಇರ್ಷಾದ್ ಅಹಮ್ಮದ್ ಹಸೀಮ್ ಪಟೇಲ್, ಈಕೆ ಈಗ 1 ವರ್ಷ 4 ತಿಂಗಳ ಬಾಲೆ. ಈಕೆಗೆ ಕಿವಿ ಕೇಳದೇ ಇರುವುದರಿಂದ ಮಾತನಾಡಲೂ ಸಾಧ್ಯವಿಲ್ಲವಾಗಿದೆ. ಈಕೆಯನ್ನು ಪರೀಕ್ಷಿಸಿದ ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯ ವೈದ್ಯರು ಈಕೆಯ ಕಾಯಿಲೆಯನ್ನು ಪ್ರೊಫೌಂಡ್ ಬಿಲಾಟರಲ್ ಸೆನ್ಸಾರ್ ನ್ಯೂರಲ್ ಹಿಯರಿಂಗ್ ಲಾಸ್ ಎಂತಾ ತಿಳಿಸಿದ್ದು ಇದಕ್ಕೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದೂ ಹೇಳಿದ್ದಾರೆ. ಇಲ್ಲವಾದಲ್ಲಿ ಈಕೆಯು ಜೀವನ ಪರ್ಯಂತ ಅಂಗವಿಕಲೆಯಾಗಿಯೇ ಇರಬೇಕಾಗಿದ್ದು ಮಾತು ಬಾರದ ಮೂಗಿಯಾಗಿರುತ್ತಾಳೆ.  ಶಸ್ತ್ರ ಚಿಕಿತ್ಸೆಯು ಅತ್ಯಂತ ದುಬಾರಿಯಾಗಿದ್ದು 10 ಲಕ್ಷ ರೂಪಾಯಿಗಳ ವೆಚ್ಚ ಬರಬಹುದು ಎಂದು ತಿಳಿಸಿದ್ದಾರೆ. ಉಳಿದಂತೆ ಔಷಧ, ಐ.ಸಿ.ಯು., ಉಳಿದುಕೊಳ್ಳುವ ಖರ್ಚು ಎಲ್ಲ ಸೇರಿದರೆ ಇನ್ನೂ 2-3 ಲಕ್ಷ ಬೇಕಾಗಬಹುದಾಗಿದ್ದು ಅತ್ಯಂತ ಬಡವರಾದ ಇವರಿಗೆ ಅಷ್ಟೊಂದು ಹಣವನ್ನು ಹೊಂದಿಸುವು ಕಷ್ಟಕರವಾಗಿದೆ. ಶಸ್ತ್ರ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಈ ಕಾಯಿಲೆಯಿಂದ ತಮ್ಮ ಮಗು ಪಾರಾಗಿ ಎಲ್ಲರಂತಾಗಲಿ. ಮುಂದೆ ವಿದ್ಯೆ ಕಲಿತು ತಮಗೆ ಆಸರೆಯಾಗಲಿ ಎನ್ನುವುದು ತಂದೆ-ತಾಯಿಯರ ಆಶಯವಾಗಿದ್ದರೂ ಸಹ ಹಣಕಾಸಿನ ತೊಂದರೆಯಿಂದ ತೀವ್ರ ನೊಂದು ಕೊಂಡಿದ್ದಾರೆ.  ದಾನಿಗಳು ಮಗುವಿನ ಚಿಕಿತ್ಸೆಗೆ ಧನ ಸಹಾಯ ಮಾಡಿದರೆ ಅವಳೂ ಕೂಡಾ ಎಲ್ಲರಂತೆ ಜೀವನ ಸಾಗಿಸಬಹುದು ಎನ್ನುವುದು ಅವರ ಆಶಯವಾಗಿದೆ. ತಂದೆ-ತಾಯಿಯರ ಆಶಯಕ್ಕೆ ದಾನಿಗಳು ಮುಂದಾಗಬೇಕಿದೆ.  ಅವಳ ತಾಯಿಯಾದ ನಸ್ರೀನ್ ಇರ್ಷಾದ್ ಪಟೇಲ್ ಅವರ ಹೆಸರಿನಲ್ಲಿ ಮುರ್ಡೇಶ್ವರ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಎಸ್. ಬಿ. ಖಾತೆ ಸಂಖ್ಯೆ 33933463158 ಇದ್ದು ಐ.ಎಫ್.ಸಿ.ಕೋಡ್ ಎಸ್‍ಬಿಐಎನ್0013286 ಆಗಿರುತ್ತದೆ. ಇರ್ಷಾದ್ ಅವರ ಮೊಬೈಲ್ ನಂ.7406373318 ಇದ್ದು ಅವರನ್ನು ಕೂಡಾ ಸಂಪರ್ಕಿಸಬಹುದು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...