ಭಟ್ಕಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎನ್. ಷಡಕ್ಷರಿ ಯವರನ್ನು ಭಟ್ಕಳ ತಾಲೂಕ ಸರ್ಕಾರಿ ನೌಕರರ ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಹೊನ್ನಾವರದ ಹವ್ಯಕ ಸಭಾಂಗಣದಲ್ಲಿ ಜರುಗಿದ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಜೊತೆ ಸಂವಾದ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರನ್ನು ಶಾಲು ಹೊದಿಸಿ ಫಲತಾಂಬುಲ ನೀಡಿ ಮಾಲಾರ್ಪಣೆ ಮಾಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಜೀವ ಕುಮಾರ, ಭಟ್ಕಳ ತಾಲೂಕ ಅಧ್ಯಕ್ಷ ಸುಧೀರ ವ್ಹಿ. ಗಾಂವಕರ್, ಕಾರ್ಯದರ್ಶಿ ಮೋಹನ ನಾಯ್ಕ, ರಾಜ್ಯ ಪರಷತ್ ಸದಸ್ಯ ಪ್ರಕಾಶ ಶಿರಾಲಿ, ಸದಸ್ಯರಾದ ವೆಂಕಟೇಶ ನಾಯ್ಕ, ಗಣೇಶ ಹೆಗಡೆ ಮುಂತಾದವರು ಉಪಸ್ತಿತರಿದ್ದರು.