ಹಡಿನ್ ಅರಣ್ಯ ಅತಿಕ್ರಮಣದಾರ ಪ್ರದೇಶಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ರವೀಂದ್ರ ನಾಯ್ಕ ಭೇಟಿ

Source: so news | Published on 14th April 2019, 12:51 AM | Coastal News | Don't Miss |

ಭಟ್ಕಳ:ಅರಣ್ಯ ಸಿಬ್ಬಂದಿಗಳಿಂದ ಕಿರುಕುಳ ಎದುರಿಸುತ್ತಿರುವ ಸ್ಥಳಿಯ ಯಲವಡಿ ಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಹಡಿನ್ ಗ್ರಾಮದ ಅರಣ್ಯ ಅತಿಕ್ರಮಣದಾರ ಶಂಕರ ಮಂಜಪ್ಪ ನಾಯ್ಕ ಇವರ ಅರಣ್ಯ ಅತಿಕ್ರಮಣ ಪ್ರದೇಶಕ್ಕೆ  ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದ ನಿಯೋಗವು ಸ್ಥಳಕ್ಕೆ ಭೇಟಿ ನೀಡಿ ಅನಾವಶ್ಯಕ ಅರಣ್ಯ ಸಿಬ್ಬಂದಿಗಳು ಕಿರುಕುಳ ಕೊಡುತ್ತಿರುವ ಕ್ರಮವನ್ನು ನಿಯೋಗವು ಖಂಡಿಸಿತು. 
ಶಂಕರ ಮಂಜಪ್ಪ ನಾಯ್ಕ ಹಡಿನ್ ಗ್ರಾಮ ಫಾರೆಸ್ಟ್ ಸ.ನಂ. 70 ರಲ್ಲಿ 02-10-00 ಜಮೀನಿನಲ್ಲಿ ಅನಾದಿಕಾಲದಿಂದಲೂ ವಾಸ್ತವ್ಯದ ಮನೆ ಕಟ್ಟಿಕೊಂಡು ತೆಂಗು, ಬಾಳೆ, ಗೇರು, ಅಡಿಕೆ ಮುಂತಾದ ಹಣ್ಣು ಹಂಪಲು ಗಿಡಗಳನ್ನು ಬೆಳೆಸಿದ್ದು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಗ್ರಾಮ ಅರಣ್ಯ ಹಕ್ಕು ಸಮಿತಿಗೆ ಜುಲೈ 2009 ರಂದು ಅರ್ಜಿ ಸಲ್ಲಿಸಿದ್ದು ಅರ್ಜಿಯೂ ವಿಚಾರಣೆ ಹಂತದಲ್ಲಿ ಇದ್ದು ಸಾಗುವಳಿ ಕ್ಷೇತ್ರದ ಜಿ.ಪಿ.ಎಸ್. ಸಹಿತ ಜರುಗಿರುವ ಹಿನ್ನೆಲೆಯಲ್ಲಿ ಅರಣ್ಯ  ಸಿಬ್ಬಂದಿಗಳು ಜರುಗಿಸುತ್ತಿರುವ ಕಿರುಕುಳವನ್ನು ಕಾನೂನು ಬಾಹಿರ ಎಂದು ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯವನ್ನು ತೀವೃವಾಗಿ ಆಕ್ಷೇಪಿಸಿದ್ದಾರೆ. 
ಪ್ರಾಧಿಕಾರಕ್ಕೆ ದೂರು:
ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿ ವಿನಾಕಾರಣ ಕಿರುಕುಳ ಮತ್ತು ಸಾಗುವಳಿಗೆ ಆತಂಕ ಮಾಡಿರುವುದು ಕಾನೂನಿಗೆ ವ್ಯತಿರಿಕ್ತವಾದ ಕ್ರಮವಾಗಿದ್ದು ಇಂತಹ ಕಾನೂನಿಗೆ ವ್ಯತಿರಿಕ್ತವಾಗಿ ಕೃತ್ಯ ಜರುಗಿಸುತ್ತಿರುವ ಅರಣ್ಯ ಸಿಬ್ಬಂದಿಗಳ ಮೇಲೆ ರಾಜ್ಯ ಅರಣ್ಯ ಹಕ್ಕು ಸಮಿತಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗುವುದು ಎಂದು ವೇದಿಕೆ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಭಟ್ಕಳ: ಶ್ರೀವಲಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ನಾಯ್ಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ

ಶ್ರೀವಲಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪವಿತ್ರಾ ಜಯಕರ ನಾಯ್ಕ ದಿಶಾ ಭಾರತ ಸಂಸ್ಥೆ ಹಾಗೂ ಈಸ್ಟ್ ವೆಸ್ಟ್ ...

ಭಟ್ಕಳ: ಯಶಸ್ವಿಗೊಂಡ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ:ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ

ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಮತ್ತೆ ಆರಂಭವಾಗಿದ್ದು ತಾಲೂಕಿನ ಹಡೀಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ...

ಕೇರಳದಲ್ಲಿ ಭಾರೀ ಮಳೆ. ಐವರ ಸಾವು, 10ಕ್ಕೂ ಅಧಿಕ ಮಂದಿ ನಾಪತ್ತೆ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ತಿರುವನಂತಪುರ : ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ. ...

ಭಟ್ಕಳ: ಶ್ರೀವಲಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ನಾಯ್ಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ

ಶ್ರೀವಲಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪವಿತ್ರಾ ಜಯಕರ ನಾಯ್ಕ ದಿಶಾ ಭಾರತ ಸಂಸ್ಥೆ ಹಾಗೂ ಈಸ್ಟ್ ವೆಸ್ಟ್ ...

ಅಕ್ಟೋಬರ್ 20 ರಂದು ಭಟ್ಕಳದಲ್ಲಿ 16ವರ್ಷದೊಳಗಿನ ಬಾಲಕರ ಕ್ರಿಕೆಟ್ ತಂಡದ ಆಯ್ಕೆ ಟ್ರಯಲ್ಸ್

ಭಟ್ಕಳ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಕ್ಟೋಬರ್ 20 ರಂದು ಭಟ್ಕಳದಲ್ಲಿ ಭಟ್ಕಳ ಕ್ರೀಡಾ ಅಕಾಡೆಮಿ ಆಶ್ರಯದಲ್ಲಿ ನಡೆಯಲಿದೆ. ...