ಭಟ್ಕಳ : ಮುಡಿಗೇರುವ ಮಲ್ಲಿಗೆಯ ಮೇಲೆ ಪ್ರವಾಹ ಪ್ರತಾಪ ತೋಟದಲ್ಲಿ ಕೆಸರು, ಮಣ್ಣು; ಕೃಷಿಕನ ಬದುಕಿನ ಮೇಲೆ ಮಾಸದ ಹುಣ್ಣು

Source: S O News | By I.G. Bhatkali | Published on 12th August 2022, 7:51 PM | Coastal News |

ಭಟ್ಕಳ : ಭಟ್ಕಳ ಮಲ್ಲಿಗೆಯ ಪರಿಮಳಕ್ಕೆ ಮನಸೋಲದವರೇ ಇಲ್ಲ. ದೇವಸ್ಥಾನ, ಮದುವೆ, ಆರತಕ್ಷತೆ, ಸಾರ್ವಜನಿಕ ಸಮಾರಂಭ, ಧಾರ್ಮಿಕ ಸಮಾರಂಭ ಏನೇ ಇರಲಿ ಭಟ್ಕಳ ಮಲ್ಲಿಗೆಗೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ದೇಶ ವಿದೇಶದಲ್ಲಿಯೂ ಇಂದಿಗೂ ಭಟ್ಕಳ ಮಲ್ಲಿಗೆ ತನ್ನ ಸ್ಥಾನಮಾನವನ್ನು ಕಾಪಾಡಿಕೊಂಡು ಬಂದಿದೆ. ಆದರೆ ಕಳೆದ ಆ.2ರಂದು ಭಟ್ಕಳವನ್ನು ಆವರಿಸಿಕೊಂಡ ಪ್ರವಾಹ ತಾಲೂಕಿನ ಬಹುತೇಕ ಮಲ್ಲಿಗೆ ತೋಟಗಳನ್ನು ಧ್ವಂಸ ಮಾಡಿ ಬಿಟ್ಟಿದೆ. 

ತಾಲೂಕಿನ ಬೈಲೂರು, ಮಾವಳ್ಳಿ 1, ಮಾವಳ್ಳಿ 2, ಬೆಂಗ್ರೆ, ಶಿರಾಲಿ, ಮುಠ್ಠಳ್ಳಿ, ಮುಂಡಳ್ಳಿ ಪಂಚಾಯತ ವ್ಯಾಪ್ತಿಯಲ್ಲಿ ಮಲ್ಲಿಗೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಕಳೆದ ಒಂದೆರಡು ದಶಕದ ಅವಧಿಯಲ್ಲಿ ಭಟ್ಕಳ ಮಲ್ಲಿಗೆ ವಾಣಿಜ್ಯ ಬೆಳೆಯಾಗಿ ಬದಲಾಗಿದೆ.  8-10 ಸಾವಿರ ಕುಟುಂಬಗಳು ಮಲ್ಲಿಗೆ ಬೆಳೆಯನ್ನೇ ತಮ್ಮ ಜೀವನ ಆಧಾರಕ್ಕೆ ವೃತ್ತಿಯನ್ನಾಗಿ

ಭಟ್ಕಳದಲ್ಲಿ ಸರಿಸುಮಾರು 26 ಹೆಕ್ಟೇರ್ ತೋಟಗಾರಿಕಾ ಪ್ರದೇಶಕ್ಕೆ ಪ್ರವಾಹದಿಂದಾಗಿ ಕೆಸರು, ಮಣ್ಣು ತುಂಬಿಕೊಂಡು ಹಾನಿಯಾಗಿದೆ. ಇದರಲ್ಲಿ ಮಲ್ಲಿಗೆಯ ತೋಟವೂ ಸೇರಿದೆ. ರೈತರು ಪರಿಹಾರಕ್ಕಾಗಿ ನಿತ್ಯವೂ ಅರ್ಜಿ ನೀಡುತ್ತಲೇ ಇದ್ದು, ಹಾನಿಯ ಪ್ರಮಾಣ ಏರಿಕೆಯಾಗುತ್ತಲೇ ಇದೆ
 - ಸಂಧ್ಯಾ ಭಟ್, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ ಭಟ್ಕಳ

ಮಾಡಿಕೊಂಡಿವೆ. ಇವರೆಲ್ಲರೂ ಆರ್ಥಿಕವಾಗಿ ಸಬಲರಾಗುವ ಕಾರಣಕ್ಕೆ ಉಳಿದ ಕೃಷಿಯನ್ನು ಕೈ ಬಿಟ್ಟು ಮಲ್ಲಿಗೆಯನ್ನು ನೆಚ್ಚಿಕೊಂಡವರು. ಪರಿಣಾಮವಾಗಿ ಈ ಮಲ್ಲಿಗೆ ಬೆಳೆ ಮಾರಾಟಗಾರರಿಗೆ ಶ್ರೀಮಂತಿಕೆಯನ್ನೂ ನೀಡಿವೆ. ಬೆಳೆಗಾರರು ಮಾತ್ರ ಅತ್ತ ಏರದೇ ಇತ್ತ ಕೆಳಗೂ ಇಳಿಯದೇ ನಿಧಾನವಾಗಿ ಮುಂದಕ್ಕೆ ಹೆಜ್ಜೆ ಹಾಕುತ್ತಲೇ ಇದ್ದಾರೆ. ವಿಶೇಷ ಸುವಾಸನೆಯುಕ್ತ ಭಟ್ಕಳ ಮಲ್ಲಿಗೆ ನಿತ್ಯವೂ ಉಡುಪಿ, ಮಂಗಳೂರು ತಲುಪಿ ಕರ್ನಾಟಕ ಕರಾವಳಿ ಭಾಗದ ಪ್ರಮುಖ ವ್ಯಾಪಾರೋದ್ಯಮವಾಗಿ ಬದಲಾಗಿದೆ. ಕಳೆದ 2 ವರ್ಷ ಕೊರೊನಾ ವೈರಸ್ ಮಲ್ಲಿಗೆ ಬೆಳೆಗಾರರ ಹೊಟ್ಟೆಯ ಮೇಲೆ ಬರೆ ಎಳೆದು ಬಿಟ್ಟಿತ್ತು. ಈ ವರ್ಷ ಎಲ್ಲರೂ ಸೋಂಕಿನಿಂದ ಪಾರಾಗಿ ಬಿಟ್ಟೆವು ಎನ್ನುವಾಗಲೇ ಮಳೆ ಮಾತ್ರವಲ್ಲ, ಅದರ ಬೆನ್ನಿಗೇ ಬಂದ ಪ್ರವಾಹ ಬಡ ಮಲ್ಲಿಗೆ ಬೆಳೆಗಾರರ ಮೇಲೆ ಪ್ರತಾಪವನ್ನೇ ತೋರಿದೆ. 

ತೋಟದಲ್ಲಿ ಮಣ್ಣು, ಕೆಸರು:
ಎಲ್ಲಿಂದಲೋ ನುಗ್ಗಿ ಬಂದ ಪ್ರವಾಹ ಮಣ್ಣು, ಕೆಸರನ್ನು ಹೊತ್ತು ತಂದಿದ್ದು, ಮಲ್ಲಿಗೆ ತೋಟಗಳ ಬಣ್ಣವನ್ನೇ ಬದಲಾಯಿಸಿ ಬಿಟ್ಟಿದೆ. ಕೆಲವು ಕಡೆ ಮಲ್ಲಿಗೆ ಗಿಡಗಳು ಕೊಚ್ಚಿಕೊಂಡು ಹೋಗಿದ್ದರೆ, ಮತ್ತೆ ಕೆಲವೆಡೆ ಗಿಡಗಳು ಕೊಳೆತು ಹೋಗಿವೆ. ಇದರಿಂದ ಹೂವಿನ ಲಭ್ಯತೆ ಕ್ಷೀಣಿಸಿದೆ. ಕೆಲವು ಪ್ರದೇಶಗಳಲ್ಲಿಯಂತೂ ಹೊಸದಾಗಿ ತೋಟ ಬೆಳೆಸುವ ಅನಿವಾರ್ಯತೆ ಎದುರಾಗಿದೆ. ರೈತರು ಸರಕಾರ ನೆರವಿಗೆ ಬರಬಹುದು ಎಂಬ ಆಶಾಭಾವನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇನ್ನೊಂದೆಡೆ ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆಯುವುದರಿಂದ ಮಲ್ಲಿಗೆಗೆ ಹೆಚ್ಚಿನ ಬೇಡಿಕೆ ಇದ್ದು, ಹೂ ಸಂಗ್ರಹ ಮಾಡಿಕೊಳ್ಳುವುದು ಕಷ್ಟ ಸಾಧ್ಯವಾಗಿ ಪರಿಣಮಿಸಿದೆ. 
             

Read These Next

ಭಟ್ಕಳದ ತೆಂಗಿನಗುಂಡಿಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ

ಭಟ್ಕಳದ ತೆಂಗಿನಗುಂಡಿಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಸಕ ಸುನೀಲ ನಾಯ್ಕ

ಉಡುಪಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಗ್ರೀನ್‍ವ್ಯಾಲಿ ಪದವಿ ಪೂರ್ವ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಉಡುಪಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಗ್ರೀನ್‍ವ್ಯಾಲಿ ಪದವಿ ಪೂರ್ವ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಉತ್ತಮವಾದ ಯೋಜನೆ

ಕಾರವಾರ  : ಜಿಲ್ಲೆಯು ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ರೈಲು ಮಾರ್ಗ ಕಾಮಗಾರಿ ಪ್ರಾರಂಭವಾಗುವುದು ಅವಶ್ಯಕವಾಗಿದ್ದು, ಜಿಲ್ಲೆಯ ಜನರ ...

ಜಿಲ್ಲೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ರಾಷ್ಟ್ರಕ್ಕೆ ವಿಸ್ತರಣೆಯಾಗಬೇಕು : ಸಚಿವ ಸುನೀಲ್

1997 ರಲ್ಲಿ ಘೋಷಣೆಯಾದ ಹೊಸ ಜಿಲ್ಲೆಗಳ ನಡೆದಿರುವ ಅಭಿವೃದ್ದಿಗೆ ಹೋಲಿಸಿದಲ್ಲಿ, ಉಡುಪಿ ಜಿಲ್ಲೆ 20 ವರ್ಷ ಮುಂದಿದ್ದು, ಸ್ಟಾರ್ಟಪ್ ...