ಭಟ್ಕಳ: ಕಾಂಗ್ರೇಸ್ ಪ್ರೇರಿತ ಪ್ರತಿಭಟನೆಗಳಿಗೆ ಯಾವುದೇ ಬೆಲೆ ಇಲ್ಲ-ಆರ್. ಅಶೋಕ

Source: SOnews | By Staff Correspondent | Published on 25th January 2021, 3:44 PM | Coastal News | Don't Miss |

ಭಟ್ಕಳ: ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ರೈತರನ್ನು ಎತ್ತಿಕಟ್ಟುವುದರ ಮೂಲಕ ಹಿಂಬಾಗಿಲ ರಾಜಕೀಯ ಮಾಡುತ್ತಿದ್ದು ಕಾಂಗ್ರೇಸ್ ಪ್ರೇರಿತ ಪ್ರತಿಭಟನೆಗಳಿಗೆ ಯಾವುದೆ ಬೆಲೆ ಇಲ್ಲದಂತಾಗಿದ ಎಂದು ಕಂದಾಯ ಸಚಿವ ಆರ್. ಅಶೋಕ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಇಲ್ಲಿನ ಅಂಜುಮನ್ ಕಾಲೇಜ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಿನಿ ವಿಧಾನಸೌಧದ ಕಟ್ಟಡವನ್ನು ಉದ್ಘಾಟಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳು ರೈತರ ಪರವಾಗಿವೆ. ಆದರೆ ಇದರ ವಿರುದ್ಧ ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಇದೀಗ ಪ್ರತಿಭಟನೆಗೆ ಕುಮ್ಮಕ್ಕು ನೀಡಿರುವುದು ಪಕ್ಕಾ ಆಗಿದೆ. ಇಂತಹ ಕಾಂಗ್ರೆಸ್ ಪ್ರೇರಿತ ಪ್ರತಿಭಟನೆಗಳಿಗೆ ಯಾರೂ ಕೂಡ ಬೆಲೆ ಕೊಡಬೇಕಾದ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಹಿಂಬಾಗಿಲಿನ ಮೂಲಕ ರೈತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ರೈತರ ಪರೇಡ್ ಮೆರವಣಿಗೆಗೆ ಸರ್ಕಾರ ಬಗ್ಗಲ್ಲ ಎಂದು ಹೇಳಿದರು.

ಆನಂದ ಸಿಂಗ್ ರಾಜೀನಾಮೆ ಕುರಿತಂತೆ  ಪ್ರತಿಕ್ರಿಯಿಸಿದ ಅವರು, ಆನಂದ ಸಿಂಗ್ ಒಮ್ಮೆಲೇ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಅವರು ರಾಜೀನಾಮೆ ಕೊಟ್ಟಿದ್ದಾರೋ, ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ನಾನು ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿ ಮುಖ್ಯಮಂತ್ರಿಗಳ ಜೊತೆ ಮಾತಾಡುತ್ತೇವೆ. ಅಲ್ಲದೆ ಈ ಬಗ್ಗೆ ಆನಂದಸಿAಗ್‌ರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತೇನೆ ಖಾತೆಗಳ ಬದಲಾವಣೆಗೆ ಸಂಬAಧಿಸಿದAತೆ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ತೀರ್ಮನವೇ ಅಂತಿಮವಾಗಿದೆ' ಎಂದರು.

'ತಾಲ್ಲೂಕು ಪಂಚಾಯಿತಿಗೆ ಅನುದಾನದ ಕೊರತೆಯಿದೆ. ಮುಂದಿನ ಚುನಾವಣೆಯ ವೇಳೆಗೆ ತಾಲ್ಲೂಕು ಪಂಚಾಯಿತಿ ರದ್ದು ಮಾಡಲು ಸರ್ಕಾರ ಚಿಂತನೆ ನಡೆಸಿದೆ' ಎಂದು ಹೇಳಿದರು.
ರೈತರ ಪ್ರತಿಭಟನೆಯಲ್ಲಿ ಕಾಂಗ್ರೇಸ್ ಪಕ್ಷದ ಕೈವಾಡವಿದೆ. ಟ್ರ‍್ಯಾಕ್ಟರ್ ಮೆರವಣಿಗೆಯು ಕಾಂಗ್ರೆಸ್ ಪ್ರೇರಿತವಾಗಿದೆ' ಎಂದು ಆಪಾದಿಸಿದರು.

'ರಾಜ್ಯದಲ್ಲಿರುವ ಕಲ್ಲು ಕ್ವಾರಿಗಳ ಬಗ್ಗೆ ವಿಶೇಷ ತನಿಖೆಗೆ ಆಗ್ರಹಿಸಲಾಗುವುದು. ಈ ಹಿಂದೆ ಕೂಡ ಇದೇರೀತಿ ಅನೇಕರು ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ' ಎಂದು ಹೇಳಿದರು.

ಸಿಯಂ ರಿಂದ ತುರ್ತು ಕರೆ: ಭಟ್ಕಳದಲ್ಲಿ ಮಿನಿ ವಿಧಾನಸೌಧ ಉದ್ಘಾಟನಾ ಕಾರ್ಯಕ್ರಮದ ನಡುವೆ ಕಂದಯ ಸಚಿವ ಆರ್. ಅಶೋಕರಿಗೆ ಬೆಂಗಳೂರಿನಿOದ ಮುಖ್ಯಮಂತ್ರಿಯವರಿoದ ತುರ್ತು ಬುಲಾವು ಸಂದೇಶವೊoದು ಮೊಬೈಲ್ ಗೆ ಬಂದಿದ್ದು ರಾತ್ರಿಯೇ ಬೆಂಗಳೂರು ತಲುಪುವಂತೆ ಸಿಯಂ ಖಡಕ್ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಅನಂದ್ ಸಿಂಗ್ ರಾಜಿನಾಮೆ ಹಿನ್ನೆಲೆಯಲ್ಲಿ ಈ ತುರ್ತು ಕರೆ ಬಂದಿದೆ ಎಂದು ಹೇಳಲಾಗುತ್ತಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...