ಇಹಲೋಕಕ್ಕೆ ವಿದಾಯ ಹೇಳಿದ ಭಟ್ಕಳದ ಚೀಫ್ ಖಾಝಿ ಮೌಲಾನ ಮುಲ್ಲಾ ಇಕ್ಬಾಲ್ ನದ್ವಿ

Source: sonews | By Staff Correspondent | Published on 15th July 2020, 6:18 PM | Coastal News | Special Report | Don't Miss |

ಭಟ್ಕಳ: ಶಾಫಿ ಕರ್ಮಶಾಸ್ತ್ರದಲ್ಲಿ ಪಾಂಡಿತ್ಯ ಸಾಧಿಸಿದ್ದ ದಕ್ಷಿಣ ಭಾರತದ ಪ್ರಮುಖ ವಿದ್ವಾಂಸರಲ್ಲೋರ್ವರಾಗಿರುವ ಭಟ್ಕಳ ಜಮಾಅತುಲ್ ಮುಸ್ಲಿಮೀನ್ ನ ಪ್ರಧಾನ ಖಾಝಿ ಮೌಲಾನ ಮುಲ್ಲಾ ಇಕ್ಬಾಲ್ ನದ್ವಿ(75) ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗುವುದರ ಮೂಲಕ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ.

ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಮೂಲಗಳು ದೃಢಪಡಿಸಿವೆ. 

ಇಬ್ಬರು ಪತ್ನಿಯರನ್ನು ಹೊಂದಿದ ಇವರು, ಮೊದಲ ಪತ್ನಿಯ ಮರಣದ ನಂತರ ಎರಡನೇ ಮದುವೆಯಾಗಿದ್ದರು. ಇಬ್ಬರು ಪತ್ನಿಯರಿಂದ 8ಪುತ್ರಿಯರು ಇಬ್ಬರು ಪುತ್ರರನ್ನು ಹೊಂದಿದ್ದಾರೆ. 

1967 ರಲ್ಲಿ ಭಟ್ಕಳದ ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದು ನಂತರ ದಾರುಲ್ ಉಲೂಮ್ ನದ್ವತುಲ್ ಉಲೇಮಾ ದಿಂದ ಪದವಿಯನ್ನು ಪಡೆದುಕೊಂಡಿದ್ದರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ "ಆದಿಬ್ ಕಾಮಿಲ್" ಪದವಿಯನ್ನು ಪಡೆದುಕೊಂಡಿದ್ದಾರೆ ಭಟ್ಕಳದ ಫಾರೂಖಿ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಇಮಾಮ್ ಆಗಿಯೂ ಕಾರ್ಯನಿರ್ವಹಿಸಿದ ಇವರು ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಧಾರ್ಮಿಕ ಶಿಕ್ಷಣ ಶಿಕ್ಷಕರಾಗಿಯೂ ಸೇವೆಸಲ್ಲಿಸಿದ್ದಾರೆ. ಅಜ್ಕಾರ್-ಎ- ಹಜ್ ಮತ್ತು ಉಮ್ರಾ, ಹಾಗೂ ತಖ್ರೀಝ್ ವಕ್ತ್ ಸಲಾತ್ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. 

ಶಾಫಿ ಕರ್ಮಶಾಸ್ತ್ರದಲ್ಲಿ ಪಾಂಡಿತ್ಯವನ್ನು ಹೊಂದಿದ್ದ ಇವರು ಅಸ್ಟ್ರೋನೋಮಿ ವಿದ್ಯೆಯನ್ನು ಕಲಿತಿದ್ದರು. ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷರಾಗಿ, ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಪಾಧ್ಯಕ್ಷರಾಗಿ ಸಮುದಾಯದ ಅಪಾರ ಸೇವೆಯನ್ನು ಗೈದಿರುವ ಇವರು ಬಾಲಕೀಯರಿಗಾಗಿ ಕುರ್‍ಆನ್ ಕಂಠಸ್ಥ (ಹಿಫ್ಝ್) ತಹಫಿಝುಲ್ ಕುರ್‍ಆನ್ ಸಂಸ್ಥೆಯನ್ನು ನಡೆಸುತ್ತಿದ್ದರು. ಮಹಿಳೆಯರ ಶಿಕ್ಷಣ ಸಂಸ್ಥೆಯಾಗಿರುವ ಜಾಮಿಯತುಸ್ಸಾಲಿಹಾತ್ ನಲ್ಲಿಯೂ ಇವರು ಆರಂಭದಿಂದಲೆ ತಮ್ಮನ್ನು ತೊಡಗಿಸಿಕೊಂಡಿದ್ದರು. 

ಭಟ್ಕಳ ಜಮಾಅತುಲ್ ಮುಸ್ಲಿಮೀನ್ ಖಾಝಿ ಮುಹಮ್ಮದ್ ಆಹ್ಮದ್ ಖತೀಬ್ ರವರ ನಿಧನದಿಂದ ತೆರವಾಗಿರುವ ‘ಪ್ರಧಾನಖಾಝಿ’ ಹುದ್ದೆಯನ್ನು ಮೌಲಾನ ಇಕ್ಬಾಲ್ ನದ್ವಿಯವರು  ಜುಲೈ 2009 ಅಲಂಕರಿಸಿದ್ದರು. ಇವರು ತಮ್ಮ ಹುದ್ದೆಯಲ್ಲಿರುವಾಗ ಅನೇಕಾರು ಕೌಟುಂಬಿಕ ವ್ಯಜ್ಯಗಳನ್ನು ಬಗೆಹರಿಸಿದ್ದಾರೆ. ಅಲ್ಲದೆ ಅನುವಂಶಿಕ ಸಂಪತ್ತಿನ ವಿತರಣೆಯ ಸಮಸ್ಯೆಯನ್ನು ಅತ್ಯಂತ ಸುಲಭವಾಗಿ ಬಗೆಹರಿಸುತ್ತಿದ್ದರು. ನಮಾಝ್ ಸಮಯವನ್ನು ತಿಳಿಸುವ ಸಾಫ್ಟವೇರ್(ತಂತ್ರಾಂಶವನ್ನು) ಇವರು ಅಭಿವೃದ್ಧಿ ಪಡಿಸಿದ್ದರು ಅಕ್ಷಾಂಶ ಮತ್ತು ರೇಖಾಂಶಗಳ ಕುರಿತಂತೆ ಅಗಾಧ ಜ್ಞಾನವನ್ನು ಪಡೆದುಕೊಂಡಿದ್ದರು. ಭಟ್ಕಳದ ಯುವಕರಲ್ಲಿ ಧಾರ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಹಾಗೂ ಜನರು ಪರಸ್ಪರ ಸೌಹಾರ್ಧತೆಯಿಂದ ಬದುಕು ಸಾಗಿಸುವಲ್ಲಿ ಇವರು ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದರು. ಯಾವುದೇ ಒಂದು ಪಂಗಡಕ್ಕೆ ಅಂಟಿಕೊಳ್ಳದೆ ಸಮುದಾಯದ ಎಲ್ಲ ಪಂಗಡ ಮತ್ತು ವಿಚಾರಧಾರೆಯವರೊಂದಿಗೆ ಬೆರೆತು ಸಮುದಾಯದಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ ಸಕ್ರೀಯರಾಗಿದ್ದರು. 

1967 ರಲ್ಲಿ ಭಟ್ಕಳದ ಜಾಮಿಯಾ ಇಸ್ಲಾಮಿಯ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದು ನಂತರ ದಾರುಲ್ ಉಲೂಮ್ ನದ್ವತುಲ್ ಉಲೇಮಾ ದಿಂದ ಪದವಿಯನ್ನು ಪಡೆದುಕೊಂಡಿದ್ದರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ "ಆದಿಬ್ ಕಾಮಿಲ್" ಪದವಿಯನ್ನು ಪಡೆದುಕೊಂಡಿದ್ದಾರೆ ಭಟ್ಕಳದ ಫಾರೂಖಿ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಇಮಾಮ್ ಆಗಿಯೂ ಕಾರ್ಯನಿರ್ವಹಿಸಿದ ಇವರು ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಧಾರ್ಮಿಕ ಶಿಕ್ಷಣ ಶಿಕ್ಷಕರಾಗಿಯೂ ಸೇವೆಸಲ್ಲಿಸಿದ್ದಾರೆ. ಅಜ್ಕಾರ್-ಎ- ಹಜ್ ಮತ್ತು ಉಮ್ರಾ, ಹಾಗೂ ತಖ್ರೀಝ್ ವಕ್ತ್ ಸಲಾತ್ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. 

ಇವರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಅಲ್ಲಾಹನು ಇವರಿಗೆ ಮಗ್ಫಿರತ್ ನೀಡಲಿ(ಆಮೀನ್).
ಇವರ ನಿಧನಕ್ಕೆ ತಂಝೀಮ್ ಸಂಸ್ಥೆ, ಅಂಜುಮನ್, ತರಬಿಯತ್ ಎಜ್ಯುಕೇಶನ್ ಸೂಸೈಟಿ, ಜಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ, ಜಮಾಅತೆ ಇಸ್ಲಾಮಿ ಹಿಂದ್ ಸೇರಿದಂತೆ ಅನೇಕಾ ಸಂಘಸಂಸ್ಥೆಗಳ ಮುಖ್ಯಸ್ಥರು ಶೋಕವನ್ನು ವ್ಯಕ್ತಪಡಿಸಿದ್ದು ಮೃತರ ಆತ್ಮಕ್ಕೆ ಅಲ್ಲಾಹನು ಮಗ್ಫಿರತ್ ನೀಡಲಿ ಎಂದು ಪ್ರಾರ್ಥಿಸಿದ್ದರೆ.
 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...