ಸರಳವಾಗಿ ೭೩ನೇ ಗಣರಾಜ್ಯೋತ್ಸವವನ್ನು ಆಚರಿಸಿದ ಭಟ್ಕಳ ತಾಲೂಕಾಢಳಿತ

Source: SO NEWS | By MV Bhatkal | Published on 27th January 2022, 12:01 AM | Coastal News |


ಭಟ್ಕಳ: ನಮ್ಮ ದೇಶವು ಗಣರಾಜ್ಯಗೊಂಡ ೭೨ ವರ್ಷದಿಂದಲೂ ನಮ್ಮಲ್ಲಿನ ಪರಂಪರೆ, ಸಂಸ್ಕೃತಿಯು ಜಗತ್ತಿಗೆ ಏನೆಂದು ಸಾಧಿಸುತ್ತಾ ಬಂದಿದ್ದು, ಈ ಕೋವಿಡ ಅವಧಿಯ ವಾಕ್ಸಿನ್ ವಿಷಯದಲ್ಲಿ ಔಷಧಿಗಳ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ ಎಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ ಎಸ್ ಹೇಳಿದರು.

ಅವರು ಬುಧವಾರದಂದು ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ೭೩ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಿದ್ದರು.
‘ನಮ್ಮ ದೇಶವು ೧೯೫೦ರಂದು ಸ್ವತಂತ್ರವಾಗಿ ಸಂವಿಧಾನವನ್ನು ಜಾರಿಗೆ ತಂದ ಹಾಗೂ ಸಂಸ್ಥಾಪನಾ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಅಂದಿನಿAದ ಇಂದಿನ ತನಕ ದೇಶದ ಪ್ರತಿಯೊಬ್ಬರ ಪ್ರಜೆಗೆ ಸಿಗಬೇಕಾದ ಎಲ್ಲಾ ನ್ಯಾಯಸಮ್ಮತ ಹಕ್ಕುಗಳು ಸಿಗುವಲ್ಲಿ ಸಂವಿಧಾನವನ್ನು ರೂಪಿಸಲಾಗಿದೆ. ಆಜಾದ್ ಕೀ ಅಮೃತ ಮಹೋತ್ಸವ ಎಂದು ಸರಕಾರವು ಘೋಷಿಸಿದ ಎಲ್ಲಾ ಯೋಜನೆಗಳನ್ನು ಈ ವರ್ಷದ ಅದರ ರೂಪೂರೇಷೆಗಳನ್ನು ನೆನಪಿಸಿಕೊಂಡು ಹಾಗೂ ಇದಕ್ಕಾಗಿ ಬಲಿದಾನಗೊಂಡ ಸ್ವಾತಂತ್ರö್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.
ನಮ್ಮ ದೇಶವು ಶಿಕ್ಷಣ, ವಿಜ್ಞಾನ ಹಾಗೂ ತಂತ್ರಜ್ಞಾನ, ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಯ ಮೈಲಿಗಲ್ಲನ್ನು ಸಾಧಿಸಿದ್ದು ಇದಕ್ಕೆ ಈಗ ಕೋವಿಡನ ವಾಕ್ಸಿನ ವಿಷಯದಲ್ಲಿ ಜಗತ್ತಿಗೆ ಔಷಧಿಗಳನ್ನು ನೀಡಿದ ದೇಶವಾಗಿ ಹೆಸರುಪಡೆದಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ‘ಇತಿಹಾಸವನ್ನು ಅದ್ದೂರಿಯಾಗಿ ಅಂದು ಸಂಭ್ರಮಿಸಿದ ಕ್ಷಣವಾಗಿದ್ದು ಆದರೆ ಇಂದು ಕೋವಿಡ್ ದೇಶಕ್ಕೆ ಸಂಕಷ್ಟ, ಹಿನ್ನೆಡೆ ತಂದೊಡ್ಡಿದೆ. ಶಿಕ್ಷಣಕ್ಕೆ ಭಾರಿ ಪೆಟ್ಟು ಬಿದ್ದಿದ್ದು ಇದರಿಂದ ಈಗ ಚೇತರಿಕೆಯನ್ನು ಕಾಣುತ್ತಿದೆ. ಕೋವಿಡನಿಂದ ಅದ್ದೂರಿ ಕಾರ್ಯಕ್ರಮ ಸಂಭ್ರಮಿಲ್ಲದಿದ್ದರು ಸಹ ನಮ್ಮ ದೇಶಕ್ಕೆ ಬಲಿದಾನಗೊಂಡವರನ್ನು ಮರೆಯಬಾರದು. ಇತಿಹಾಸವನ್ನು ಮರೆತರೆ ನಾವು ನಮ್ಮನ್ನೇ ಮರೆತಂತಾಗಲಿದೆ. ಇದು ಸದಾ ಅಚ್ಚಳಿಯದೇ ಉಳಿಯಬೇಕು.
ಇನ್ನು ನನ್ನ ಕ್ಷೇತ್ರದ ಜನರು ಸರಕಾರಿ ಕಚೇರಿಗೆ ಅವರ ಸಮಸ್ಯೆ ಅಥವಾ ಅವರಿಗೆ ಆಗಬೇಕಾದ ಕೆಲಸಕ್ಕೆ ಅಧಿಕಾರಿಗಳ ಬಳಿ ಬಂದರೆ ಅವರನ್ನು ಸೌಜನ್ಯದಿಂದ ಉತ್ತಮ ಸ್ಪಂದನೆಯಿAದ ಮಾತನಾಡಿಸುವ ವ್ಯವದಾನ ಇರಲಿ ಮತ್ತು ಅವರಿಂದಲೇ ನಾವೆಲ್ಲರು ಎಂಬುದನು ಮರೆಯಬೇಡಿ ಎಂದರು.
ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು, ಕೋವಿಡ ಅವಧಿಯಲ್ಲಿ ಕೋರೋನಾ ವಾರಿರ‍್ಸ ಆಗಿ ಕೆಲಸ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಮೃತ ಇಬ್ಬರು ಕಬ್ಬಡಿ ಪಟುಗಳ ಕುಟುಂಬಸ್ಥರಿಗೂ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಜಾನಪದ ಗೀತೆಯಲ್ಲಿ ಪ್ರಥಮ ಸ್ಥಾನ ಬಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕರಿಯರ ತಂಡದಿAದ ವೇದಿಕೆಯಲ್ಲಿ ಜಾನಪದ ಗೀತೆಯನ್ನು ಹಾಡಿ ಸಂಭ್ರಮಿಸಿದರು.
ವೇದಿಕೆಯಲ್ಲಿ ತಹಸೀಲ್ದಾರ್ ಎಸ್. ರವಿಚಂದ್ರ, ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೋಗೇರ, ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳದ ಅಧ್ಯಕ್ಷ ಮೋಹನ ನಾಯ್ಕ, ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶಿಂಜೀ, ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ರಾಧಿಕಾ ಮುಂತಾದವರು ಇದ್ದರು,

Read These Next