ಮನೆ ನುಗ್ಗಿ ನಗದು, ಚಿನ್ನಾಭರಣ ಕಳುವು ಮಾಡಿದ್ದ ಆರೋಪಿ ಸೆರೆ

Source: S.O. News Service | Published on 21st January 2020, 6:04 PM | Coastal News | Don't Miss |

ಭಟ್ಕಳ:ಕಳೆದ ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ಬೆಳಕೆ ಕಂಚಿಕೇರಿಯಲ್ಲಿ ನಾಗರಾಜ ಗಣಪತಿ ಹೆಗಡೆ ಇವರ ಮನೆಯ ಬಾಗಿಲನ್ನು ಹಾಡುಹಗಲಲ್ಲೇ ಮುರಿದು ಒಳಗೆ ನುಗ್ಗಿ ಕಪಾಟಿನಲ್ಲಿದ್ದ  ನಗದು ಹಾಗೂ ಚಿನ್ನಾಭರಣ ಕಳುವು ಮಾಡಿದ್ದ ಆರೋಪಿಯೊಬ್ಬನನ್ನು ಭಟ್ಕಳ ಪೊಲೀಸರ ತಂಡ ಪತ್ತೆ ಹಚ್ಚಿ ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತನನ್ನು ಮೂಲತ: ಹೊನ್ನಾವರದ ಮಂಕಿಯ ಚರ್ಚವಾಡ,ದೊಡ್ಡಹಿತ್ಲ, ಹಾಲಿ ಕೋಟೇಶ್ವರ ಕುಂದಾಪುರದ ವಿಲ್ಸನ್ ಅಲಿಯಾಸ್ ಬಾಳಾ ತಂದೆ ಪಿಯದಾದ್ ಲೂಪಿಸ್ (28) ಎಂದು ಗುರುತಿಸಲಾಗಿದೆ. ಜನವರಿ 4 ರಂದು ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12 ಗಂಟೆಯೊಳಗೆ ಬಾಗಿಲು ಮುಚ್ಚಿದ್ದ ತನ್ನ ಮನೆಗೆ ಯಾರೋ ಕಳ್ಳರು ಬಾಗಿಲು ಮುರಿದು ಒಳನುಗ್ಗಿ ಕಪಾಟು ಒಡೆದು ಅದರಲ್ಲಿದ್ದ 75 ಸಾವಿರ ನಗದು ಹಾಗೂ 48ಸಾವಿರ ಮೌಲ್ಯದ ಬಂಗಾರದ ಚೈನು, ಎರಡು ಉಂಗುರ, ಒಂದು ಜತೆ ಕಿವಿಯೋಲೆ ಕಳುವು ಮಾಡಿಕೊಂಡು ಹೋದ ಬಗ್ಗೆ ಬೆಳಕೆ ಕಂಚಿಕೇರಿಯ ನಾಗರಾಜ ಗಣಪತಿ ಹೆಗಡೆ ಎನ್ನುವವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇವರ ದೂರಿನನ್ವಯ ಎಸ್ಪಿ ಶಿವಪ್ರಕಾಶ ದೇವರಾಜು ಹಾಗೂ ಭಟ್ಕಳ ಎಎಸ್ಪಿ ನಿಖಿಲ್ ಬಿ ಇವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಸಿಪಿಐ ಎಂ ಎಸ್ ಪ್ರಕಾಶ ಅವರು ಗ್ರಾಮೀಣ ಠಾಣೆಯ ಪಿಎಸೈ ಓಂಕಾರಪ್ಪ ಅವರ ನೇತೃತ್ವದಲ್ಲಿ ತಂಡ ರಚಿಸಿ ಕಳುವಾದ 15 ದಿನಗಳಲ್ಲೇ ಮಾಲು ಸಮೇತ ಆರೋಪಿತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕಳವು ಪ್ರಕರಣವೊಂದನ್ನೂ ಪತ್ತೆ ಮಾಡಿ ಆರೋಪಿಯಿಂದ ಒಟ್ಟೂ 38.54 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಪಿಐ ಮತ್ತು ಪಿಎಸೈ ಜತೆ ಭಟ್ಕಳ ಗ್ರಾಮೀಣ ಠಾಣೆಯ ಎಎಸೈ ಮಂಜುನಾಥ ಬಿ ಗೌಡರ, ಮಹೇಶ ಪಟಗಾರ, ಅರುಣ ಪಿಂಟೋ, ದೇವು ಆರ್ ನಾಯ್ಕ, ಸತ್ಯಾನಂದ ನಾಯ್ಕ, ನಿಂಗನಗೌಡ ಪಾಟೀಲ ಪಾಲ್ಗೊಂಡಿದ್ದು, ಆರೋಪಿಯನ್ನು ಪತ್ತೆ ಹಚ್ಚಿರುವ ತನಿಖಾ ತಂಡಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...