ಅಂಜುಮನ್ ಸ್ನಾತಕೋತ್ತರ ಕೇಂದ್ರದ ಕನ್ನಡ ಅಂತಿಮ ವರ್ಷದ ವಿದ್ಯಾರ್ಥಿಗಳ ಉತ್ತಮ ಸಾಧನೆ; ಎಲ್ಲ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್

Source: sonews | By Staff Correspondent | Published on 28th November 2020, 8:09 PM | Coastal News |

ಭಟ್ಕಳ : ಕರ್ನಾಟಕ ವಿಶ್ವವಿದ್ಯಾಲಯದ 2019-20ನೇ ಸಾಲಿನ ಕನ್ನಡ ಎಂ.ಎ. ಅಂತಿಮ ವರ್ಷದ ಫಲಿತಾಂಶ ಪ್ರಕಟವಾಗಿದ್ದು, ಅಂಜುಮನ್ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ  ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡಾ ನೂರರಷ್ಟು ಫಲಿತಾಂಶ ದಾಖಲಿಸಿದ್ದಾರೆ. 

ಪರೀಕ್ಷೆ ತೆಗೆದುಕೊಂಡ ಎಲ್ಲ ವಿದ್ಯಾರ್ಥಿಗಳು ಉನ್ನತ ಶ್ರೇಣಿ (ಡಿಸ್ಟಿಂಕ್ಷನ್)ಯಲ್ಲಿ ಉತ್ತೀರ್ಣಗೊಂಡಿದ್ದು ವಿಶೇಷವಾಗಿದೆ. ಕುಮಾರಿ ನಿಹಾ ಆದಂ ಕಾದು, ಕೇಂದ್ರಕ್ಕೆ ಪ್ರಥಮ ಸ್ಥಾನವನ್ನು ಪಡೆದರೆ, ನಾಗರಾಜ ಪಾಂಡುರಂಗ ಮೊಗೇರ ದ್ವಿತೀಯ ಸ್ಥಾನವನ್ನು, ಆಯಿಷಾ ತಸ್ಲೀಮ್ ಸಾಧಿಕ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ನಂತರದ ಸ್ಥಾನಗಳನ್ನು ಕ್ರಮವಾಗಿ ರುಹೀನಾ ಬೇಗಂ, ಜಯಲಕ್ಷ್ಮಿ ಗೊಂಡ, ಮಾಲಾ ನಾಯ್ಕ, ಹರೀಶ ನಾಯ್ಕ, ರಹಮತುನ್ನಿಸಾ ಮತ್ತು ಕಲ್ಪನಾ ನಾಯ್ಕ ಪಡೆದಿರುತ್ತಾರೆ. 

ಉತ್ತಮ ಫಲಿತಾಂಶ ದಾಖಲಿಸಿದ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ, ಪ್ರಾಂಶುಪಾಲ ಪ್ರೊ. ಎಂ. ಕೆ. ಶೇಖ ಮತ್ತು  ಅಧ್ಯಾಪಕವೃಂದ ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅಭಿನಂದನೆ ಸೂಚಿಸಿದ್ದಾರೆ. 

Read These Next